»   » ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ

ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ಜೊತೆ 'ನಿನ್ನಿಂದಲೇ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿದ್ದ ಬೆಡಗಿ ಎರಿಕಾ ಫರ್ನಾಂಡೀಸ್. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಬುಗುರಿ' ಆಡಲು ಬರುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಎರಿಕಾ ಅವರದು ಪ್ರಮುಖ ಪಾತ್ರವಂತೆ.

ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಇನ್ನೊಬ್ಬ ಬೆಡಗಿ ರಿಚಾ ಪನೈ. ಈ ಹಿಂದೆ ವೇದಿಕಾ ಹೆಸರು ಕೇಳಿಬಂದಿತ್ತು. ಇದೀಗ ಎರಿಕಾ ಹಾಗೂ ರಿಚಾ ಪನೈ ಫೈನಲ್ ಆಗಿದ್ದಾರೆ. ಜುಲೈ 24ಕ್ಕೆ ಎರಿಕಾ ಚಿತ್ರತಂಡ ಸೇರಲಿದ್ದಾರೆ ಎನ್ನುತ್ತವೆ ಮೂಲಗಳು. [ನಿನ್ನಿಂದಲೇ ಚಿತ್ರ ವಿಮರ್ಶೆ]


'ದಿಲ್ ರಂಗೀಲಾ' ಬಳಿಕ ಗಣೇಶ್ ಸಹಿ ಹಾಕಿರುವ ಚಿತ್ರ ಇದಾಗಿದೆ. ಎಂ.ಡಿ.ಶ್ರೀಧರ್ ಅವರು ಆಕ್ಷನ್ ಕಟ್ ಹೇಳುತ್ತಿರುವ 'ಬುಗುರಿ' ಚಿತ್ರ ಫೋಟೋಶೂಟ್ ಈಗಾಗಲೆ ಮುಗಿದಿದೆ. ಈ ಹಿಂದೆ ಶ್ರೀಧರ್ ಅವರು ಗಣೇಶ್ ಜೊತೆ 'ಚೆಲ್ಲಾಟ' ಹಾಗೂ 'ಕೃಷ್ಣ' ಚಿತ್ರಗಳನ್ನು ಮಾಡಿದ್ದಾರೆ.

ಇದೀಗ ಆರು ವರ್ಷಗಳ ಗ್ಯಾಪ್ ಬಳಿಕ ಮತ್ತೊಮ್ಮೆ ಇಬ್ಬರೂ ಕೈಜೋಡಿಸಿದ್ದಾರೆ. ಅಂದಹಾಗೆ 'ಬುಗುರಿ' ಪಕ್ಕಾ ಸ್ವಮೇಕ್ ಚಿತ್ರ ಎಂಬುದು ವಿಶೇಷ. ಗಣೇಶ್ ಅಭಿನಯದ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರ ಶತಕ ಬಾರಿಸಿದೆ. 'ದಿಲ್ ರಂಗೀಲಾ' ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. ಅದಕ್ಕೂ ಮುಂಚಿನ 'ಆಟೋರಾಜ' ಚಿತ್ರವೂ ಐವತ್ತು ದಿನಗಳ ಪ್ರದರ್ಶನ ಕಂಡಿದೆ.

ಆದರೆ ಅದ್ಯಾಕೋ ಏನೋ 'ಸಕ್ಕರೆ' ಚಿತ್ರ ಸಿಹಿಯಾಗಲಿಲ್ಲ. ಒಟ್ಟಾರೆಯಾಗಿ ಗಣೇಶ್ ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. 'ಬುಗುರಿ' ಚಿತ್ರದ ಟೈಟಲ್ ಅವರ ಅಭಿಮಾನಿಗಳಿಗೂ ಸಖತ್ ಇಷ್ಟವಾಗಿದೆ. ಅಂದಹಾಗೆ ಬುಗುರಿ ಗಣೇಶ್ ಅಭಿನಯದ 25ನೇ ಚಿತ್ರ. (ಒನ್ಇಂಡಿಯಾ ಕನ್ನಡ)

English summary
After 'Ninnindale' with Power Star Puneeth Rajkumar beautiful actress Erica Fernandes all set to play 'Buguri' with Golden Star Ganesh. Sources says, Erica is expected to join the team by 24th of July.
Please Wait while comments are loading...