twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದರೊಂದು ಮನವಿ

    |

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಎರಡು ಬಹು ನಿರೀಕ್ಷಿತ ಚಿತ್ರಗಳು ತಯಾರಾಗುತ್ತಿವೆ. ನಿರ್ದೇಶಕ ಯೋಗರಾಜ್ ಭಟ್ ಜತೆಗೆ 'ಗಾಳಿಪಟ'ದ ಮೋಡಿ ಮಾಡಿದ ಬಳಿಕ ಇಬ್ಬರೂ ಸೇರಿ ಮತ್ತೆ ಗಾಳಿಪಟದ ಬಾಲಂಗೋಚಿ ಹಿಡಿದು ಆಕಾಶವನ್ನು ವರ್ಣಮಯ ಮಾಡಲು ಸಜ್ಜಾಗಿದ್ದಾರೆ. ಇತ್ತ ಪ್ರೇಕ್ಷಕರಿಗೆ 'ಚಮಕ್' ನೀಡಿದ್ದ ಸಿಂಪಲ್ ಸುನಿ ಹಾಗೂ ಗಣೇಶ್ ಜೋಡಿ 'ಸಖತ್' ಆಗಿ ಖುಷಿ ನೀಡಲು ಸಿದ್ಧತೆ ನಡೆಸಿದೆ.

    Recommended Video

    ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

    ಈ ನಡುವೆ 'ಗೋಲ್ಡನ್ ಸ್ಟಾರ್' ಗಣೇಶ್ 42ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅದರ ಸಂಭ್ರಮಾಚರಣೆಗೆ ಅವರ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಸೂಪರ್ ಹಿಟ್ ಚಿತ್ರ 'ಚೆಲುವಿನ ಚಿತ್ತಾರ'ಕ್ಕೆ 13 ವರ್ಷ ತುಂಬಿದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿದ್ದರು. ಈಗ ಗಣೇಶ್ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಗಣೇಶ್ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿ...

    ಕ್ಷಮೆಯಿರಲಿ...

    ಕ್ಷಮೆಯಿರಲಿ...

    ಪ್ರೀತಿಯ ಸ್ನೇಹಿತರೇ, Covid 19 ನಿಂದಾಗಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿಮಾಡಿ ಆಚರಿಸಲಾಗುತ್ತಿಲ್ಲ.. ಕ್ಷಮೆಯಿರಲಿ.. ನಿಮ್ಮ ಪ್ರೀತಿ ಹಾರೈಕೆ ಶುಭಾಶಯ ಸದಾ ನನ್ನ ಜೊತೆಯಿರಲಿ.. ಎಲ್ಲರಿಗೂ ಒಳ್ಳೆಯದಾಗಲಿ.. ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಗೋಲ್ಡನ್ ಸ್ಟಾರ್‌ ಗೆ ಅಗೌರವ: ಗಣೇಶ್ ಅಭಿಮಾನಿಗಳ ತಗಾದೆಗೋಲ್ಡನ್ ಸ್ಟಾರ್‌ ಗೆ ಅಗೌರವ: ಗಣೇಶ್ ಅಭಿಮಾನಿಗಳ ತಗಾದೆ

    ನಿಮ್ಮ ಕಾರ್ಯಗಳಿಗೆ ಹೆಮ್ಮೆ

    ನಿಮ್ಮ ಕಾರ್ಯಗಳಿಗೆ ಹೆಮ್ಮೆ

    ನನ್ನೆಲ್ಲಾ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ, ಹಿತೈಷಿಗಳೇ, ಈ ಕೊರೊನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ತಾಲ್ಲೂಕುಗಳಲ್ಲಿ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿದ್ದಿರಿ. ಇದಕ್ಕೆ ಯಾವ ಪ್ರಚಾರವನ್ನೂ ಬಯಸದೆ ಸದ್ದುಗದ್ದಲವಿಲ್ಲದೆ ನಿಮ್ಮ ಮಾನವೀಯತೆ ತೋರಿಸಿದ್ದಿರಿ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ಹೆಮ್ಮೆ ಪಡುತ್ತೇನೆ ಎಂದು ಗಣೇಶ್ ಹೇಳಿದ್ದಾರೆ.

    ವೈಭವದ ಆಚರಣೆ ಬೇಡ

    ವೈಭವದ ಆಚರಣೆ ಬೇಡ

    ನಿಮಗೆಲ್ಲ ಗೊತ್ತಿರುವ ಹಾಗೆ ಜುಲೈ 2ರಂದು ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ಬಂದು ನನ್ನ ಜನ್ಮದಿನವನ್ನು ಅತ್ಯಂದ ಅದ್ದೂರಿಯಾಗಿ ಆಚರಿಸಿದ್ದೀರಿ. ಇದಕ್ಕೆ ನಾನು ಸದಾ ಚಿರ ಋಣಿ. ಆದರೆ ಈ ವರ್ಷ ಎಂದಿನಂತಿಲ್ಲ. ಕೊರೊನಾದಿಂದ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ.

    ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ಮ್ಯಾಜಿಕ್ ಮಾಡಿ ಚಕಿತಗೊಳಿಸಿದ ಗಣೇಶ್ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ಮ್ಯಾಜಿಕ್ ಮಾಡಿ ಚಕಿತಗೊಳಿಸಿದ ಗಣೇಶ್

    ಬಡಕುಟುಂಬಕ್ಕೆ ಸಹಾಯ ಮಾಡಿ

    ಬಡಕುಟುಂಬಕ್ಕೆ ಸಹಾಯ ಮಾಡಿ

    ಹೊರಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ. ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ. ನನಗೆ ಶುಭ ಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ ಎಂದು ಗಣೇಶ್ ಮನವಿ ಮಾಡಿದ್ದಾರೆ.

    ಸಖತ್ ಮೋಷನ್ ಪೋಸ್ಟರ್

    ಸಖತ್ ಮೋಷನ್ ಪೋಸ್ಟರ್

    ಸಿಂಪಲ್ ಸುನಿ ನಿರ್ದೇಶನದ 'ಸಖತ್' ಚಿತ್ರತಂಡವು, ಗಣೇಶ್ ಜನ್ಮದಿನವಾದ ಜುಲೈ 2ರಂದು ರಾಪ್ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿದೆ.

    ಮದುವೆ ವಾರ್ಷಿಕೋತ್ಸವದ ಸಂಭ್ರಮ: ಪತ್ನಿಯ ಬಗ್ಗೆ ಗಣೇಶ್ 'ಗೋಲ್ಡನ್' ನುಡಿಮದುವೆ ವಾರ್ಷಿಕೋತ್ಸವದ ಸಂಭ್ರಮ: ಪತ್ನಿಯ ಬಗ್ಗೆ ಗಣೇಶ್ 'ಗೋಲ್ಡನ್' ನುಡಿ

    English summary
    Golden Star Ganesh stepping into 42 on this July 2 has requested fans not to celebrate his birthday and visit his house.
    Friday, June 26, 2020, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X