For Quick Alerts
  ALLOW NOTIFICATIONS  
  For Daily Alerts

  ಗೂಗಲ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಾಗೇಂದ್ರ ಪ್ರಸಾದ್

  By Pavithra
  |

  ಕಳೆದವಾರವಷ್ಟೇ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗೂಗಲ್ ಸಿನಿಮಾದ ಚಿತ್ರೀಕರಣವನ್ನ ಗೂಗಲ್ ನಲ್ಲಿ ಮಾಡಲಾಗಿದೆ. ಅರೆ ಇದೇನಿದು ಗೂಗಲ್ ನಲ್ಲಿ ಚಿತ್ರೀಕರಣ ಅಂತ ಆಶ್ಚರ್ಯ ಪಡಬೇಡಿ ರಾಯಚೂರಿನ ಬಳಿ ಇರುವ ಗೂಗಲ್ ಎನ್ನುವ ಊರಿನಲ್ಲಿ ವಿ ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಅಭಿನಯದ ಗೂಗಲ್ ಚಿತ್ರದ ಶೂಟಿಂಗ್ ಮಾಡಲಾಗಿದೆ.

  ಅಲ್ಲಮ ಪ್ರಭು ಅವರು ಧ್ಯಾನ ಮಾಡುತ್ತಿದ ಕೂಗುವ ಕಲ್ಲು ಎಂದೇ ಹೆಸರಾಗಿದ್ದ ಈ ಊರು ಇತ್ತಿಚಿನ ದಿನಗಳಲ್ಲಿ ಗೂಗಲ್ ಎಂದು ಪ್ರಖ್ಯಾತಿ ಪಡೆದುಕೊಂಡಿದೆ. ಸಿನಿಮಾದ ಚಿತ್ರೀಕರಣ ಮಾಡುವುದರ ಜೊತೆಯಲ್ಲಿ ಅಲ್ಲಮ ಪ್ರಭುಗಳು ಧ್ಯಾನ ಮಾಡುತ್ತಿದ್ದ ಶಿವಲಿಂಗದ ಬಳಿ ಕುಳಿತು ಸಿನಿಮಾ ನಿರ್ದೇಶಕ ಕೆಲ ಸಮಯ ಕಳೆದಿದ್ದಾರೆ.

  ಚಿತ್ರೀಕರಣದ ಸಮಯದಲ್ಲಿ ತೆಗೆದಿರುವ ಫೋಟೋ ಹಾಗೂ ವಿಡಿಯೋವನ್ನ ವಿ ನಾಗೇಂದ್ರ ಪ್ರಸಾದ್ ಈಗ ಬಿಡುಗಡೆ ಮಾಡಿದ್ದು ಸಿನಿಮಾ ರಾಜ್ಯದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದು ಈ ಮೂಲಕ ತಿಳಿಸಿದ್ದಾರೆ.

  ಗೂಗಲ್ ಚಿತ್ರದಲ್ಲಿ ಶೂಭಾ ಪೂಂಜಾ ಅಭಿನಯದ ಹಾಗೂ ಚಿತ್ರದ ಹಾಡುಗಳನ್ನ ಜನರು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಅಭಿಮಾನಿಗಳು ಚಿತ್ರಮಂದಿರದತ್ತ ಬರುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

  English summary
  Kannada Google film is being shot in village called Google, V Nagendra Prasad and Suhapoonja acting in Google movie, Last week Google movie released .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X