For Quick Alerts
  ALLOW NOTIFICATIONS  
  For Daily Alerts

  ಯಶ್ ಯಶೋಮಾರ್ಗದಿಂದ ಮತ್ತೊಂದು ಒಳ್ಳೆ ಕೆಲಸ: ಈ ಬಾರಿ ಪುಷ್ಕರಣೆ ಕ್ಲೀನಿಂಗ್!

  |

  ಯಶ್ 'ಯಶೋಮಾರ್ಗ'ದ ಮೂಲಕ ಒಳ್ಳೆ ಕೆಲಸಕ್ಕೆ ಮುಂದಾಗಿರೋದು ಗೊತ್ತೇ ಇದೆ. ಈಗಾಗಲೇ ಈ ಫೌಂಡೇಷನ್‌ನಿಂದ ಸಾಕಷ್ಟು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೊಂದು ಒಳ್ಳೆ ಕೆಲಸ ಮಾಡುವುದಕ್ಕೆ ರಾಕಿಂಗ್ ಸ್ಟಾರ್ 'ಯಶೋಮಾರ್ಗ' ಸಜ್ಜಾಗಿ ನಿಂತಿದೆ.

  ರಾಕಿಂಗ್ ಸ್ಟಾರ್ ಯಶ್ ಈಗ ಆಲ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ದಿನದಿಂದಲೂ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಯಶ್ ಕೂಡ ಮೆಗಾ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದೇ ವೇಳೆ ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಕೆಲಸಗಳನ್ನೂ ಮಾಡಿಸುತ್ತಿದ್ದಾರೆ.

  ರಾಯಚೂರಿನ ನಂತರ ಬೀದರ್ ಜನರಿಗೆ ನೆರವಾದ ಯಶೋಮಾರ್ಗರಾಯಚೂರಿನ ನಂತರ ಬೀದರ್ ಜನರಿಗೆ ನೆರವಾದ ಯಶೋಮಾರ್ಗ

  ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದಕ್ಕಿಂತಲೂ ಮುನ್ನ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದರು. ಈಗ ಅವರ ಫೌಂಡೇಷನ್ ಮತ್ತಷ್ಟು ಸಕ್ರಿಯರಾಗಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಕೆರೆ ಹೂಳೆತ್ತುವ ಕೆಲಸ ಮಾಡಿದ್ದು ಗೊತ್ತೇ ಇದೆ. ಈಗ ದೇವಸ್ಥಾನದ ಪುಷ್ಕರಣೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

  ಯಶೋಮಾರ್ಗ ಮತ್ತೊಂದು ಒಳ್ಳೆ ಕೆಲಸ

  ಯಶೋಮಾರ್ಗ ಮತ್ತೊಂದು ಒಳ್ಳೆ ಕೆಲಸ

  ರಾಕಿಂಗ್ ಸ್ಟಾರ್ ಯಶ್ ಆಲ್ ಇಂಡಿಯಾ ಸೂಪರ್‌ಸ್ಟಾರ್ ಆಗಿದ್ದಾರೆ. ಕರ್ನಾಟಕದ ಜನರು ಯಶ್‌ರನ್ನು ನಟನಾಗಿ ನೋಡಿದ್ದಷ್ಟೇ ಅಲ್ಲ. ಒಳ್ಳೆ ಕೆಲಸಗಳಲ್ಲಿ ಭಾಗಿಯಾಗಿದ್ದನ್ನು ನೋಡಿದ್ದಾರೆ. ಈಗಾಗಲೇ ಯಶೋಮಾರ್ಗ ಕರ್ನಾಟಕದಲ್ಲಿ ತುಂಬಾನೇ ಫೇಮಸ್ ಆಗಿದೆ. ಯಶೋಮಾರ್ಗ ಮಾಡಿರುವ ಒಳ್ಳೆ ಕೆಲಸಗಳು ಕನ್ನಡಿಗರಿಗೆ ಗೊತ್ತಿದೆ. ಈಗ ಇದೇ ಯಶೋಮಾರ್ಗದ ಮೂಲಕ ಮತ್ತಷ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಕೆಳದಿ ಅರಸ ಕಾಲದಲ್ಲಿ ಈ ಕಲ್ಯಾಣಿ ನಿರ್ಮಾಣ ಮಾಡಲಾಗಿತ್ತು. ಈಗ ಪುಷ್ಕರಣೆ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.

  ಯಶ್‌ಗೆ ಛತ್ರಪತಿ ಶಿವಾಜಿ ಅವತಾರವೆತ್ತಿ ಎಂದ ಮಹಾರಾಷ್ಟ್ರ ಫ್ಯಾನ್ಸ್: ಕನ್ನಡಿಗರು ಏನಂದ್ರು ನೋಡಿ?ಯಶ್‌ಗೆ ಛತ್ರಪತಿ ಶಿವಾಜಿ ಅವತಾರವೆತ್ತಿ ಎಂದ ಮಹಾರಾಷ್ಟ್ರ ಫ್ಯಾನ್ಸ್: ಕನ್ನಡಿಗರು ಏನಂದ್ರು ನೋಡಿ?

  ಪುಷ್ಕರಣೆ ಕ್ಲೀನಿಂಗ್

  ಪುಷ್ಕರಣೆ ಕ್ಲೀನಿಂಗ್

  ಯಶ್ ಅಭಿಮಾನಿಗಳು ಯಶೋಮಾರ್ಗ ಮಾಡುತ್ತಿರುವ ಈ ಒಳ್ಳೆಯ ಕೆಲಸದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. "ಯಶೋಮಾರ್ಗದ ಸ್ಫೂರ್ತಿಯಿಂದ ಗುಬ್ಬಿ ಅಯ್ಯಪ್ಪ ಸ್ವಾಮಿಯವರ ದೇವಸ್ಥಾನದ ಪಕ್ಕದ ಪುಷ್ಕರಣಿ ಸ್ವಚ್ಚತಾಕಾರ್ಯ ಮತ್ತು ದೇವಾಲಯಕ್ಕೆ ಬಣ್ಣದ ಕೆಲಸಗಳನ್ನು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಗುಬ್ಬಿ (ತಾ) ಇವರ ಕಾರ್ಯಕರ್ತರೆಲ್ಲರೂ ಸೇರಿ ದಿನಾಂಕ 13/8/22 ರಿಂದ ಪ್ರಾರಂಭಿಸಲು ಇಚ್ಚಿಸಲಾಗಿದೆ." ಎಂದು ತಿಳಿಸಿದೆ.

  ಇತ್ತೀಚೆಗ ಕಲ್ಯಾಣಿಯ ಜೀರ್ಣೋದ್ಧಾರ

  ಇತ್ತೀಚೆಗ ಕಲ್ಯಾಣಿಯ ಜೀರ್ಣೋದ್ಧಾರ

  ಯಶ್ ಅವರ 'ಯಶೋಮಾರ್ಗ' ಇತ್ತೀಚೆಗಷ್ಟೇ ಕಲ್ಯಾಣಿಯ ಜೀರ್ಣೋದ್ಧಾರ ಮಾಡಿತ್ತು. 15ನೇ ಶತಮಾನದಲ್ಲಿ ಕೆಳದಿಯ ಅರಸ ರಾಜ ವೆಂಕಟಪ್ಪ ನಾಯಕ ಈ ಕಲ್ಯಾಣಿಯನ್ನು ಕಟ್ಟಿಸಿದ್ದರು. ಇವರ ಕಾಲದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಕಲ್ಯಾಣಿಯನ್ನು ನಿರ್ಮಾಣಗೊಂಡಿತ್ತು ಎಂದು ಇತಿಹಾಸ ಹೇಳುತ್ತಿದೆ. ಇದರಲ್ಲಿ ಸಾಗರ ತಾಲೂಕಿನ ಆನಂದಪುರದ ಮಲಂದೂರು ಗ್ರಾಮದ ಮಹಂತಿ ಮಠ ಅಥವಾ ಚಂಪಕ ಸರಸಿಯ ಕಲ್ಯಾಣಿ ಕೂಡ ಒಂದು. ಇದೇ ಕಲ್ಯಾಣಿಯನ್ನು ಕೆಲವು ದಿನಗಳ ಹಿಂದಷ್ಟೇ ಜೀರ್ಣೋದ್ಧಾರ ಮಾಡಿದ್ದರು.

  ಯಶ್ 19ನೇ ಅನೌನ್ಸ್ ಮಾಡೋದ್ಯಾವಾಗ?

  ಯಶ್ 19ನೇ ಅನೌನ್ಸ್ ಮಾಡೋದ್ಯಾವಾಗ?

  'ಕೆಜಿಎಫ್ 2' ಬಳಿಕ ಯಶ್ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಯಶ್ 19ನೇ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಆದರೆ, ಇದೂವರೆಗೂ ಯಶ್ ಆ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಈ ಕಾರಣಕ್ಕೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದಾರೆ. ಮೂಲಗಳ ಪ್ರಕಾರ, ಯಶ್ ಮುಂದಿನ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ.

  English summary
  Gubbi Ayyappa Swamy Temple Holy Pond Cleaning By Yash Foundation Yashomarga, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X