»   » ಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿ ನಿಂದ ದೊಡ್ಮನೆ ಮೊಮ್ಮಗ

ಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿ ನಿಂದ ದೊಡ್ಮನೆ ಮೊಮ್ಮಗ

Posted By:
Subscribe to Filmibeat Kannada

ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಹಿಂದಿ ಭಾಷೆಯ ನಾಮ ಫಲಕ ಹಾಕುತ್ತಿರುವ ಬಗ್ಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗದ ಅನೇಕರು ಸಹ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಈಗ ನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಗುರು ರಾಜ್ ಕುಮಾರ್ ಸಹ ಹಿಂದಿ ಹೇರಿಕೆ ಬಗ್ಗೆ ಮಾತನಾಡಿದ್ದಾರೆ.

ಗುರು ರಾಜ್ ಕುಮಾರ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಬರೆದುಕೊಂಡಿದ್ದಾರೆ. ''ಹಿಂದಿ ನಮ್ಮ ಐಡೆಂಟಿಟಿ (ಗುರುತು) ಖಂಡಿತವಾಗಿಯೂ ಅಲ್ಲ. ಈ ರೀತಿ ಹಿಂದಿ ಭಾಷೆಯ ಹೇರಿಕೆ ನಮ್ಮ ಮೇಲೆ ದಯವಿಟ್ಟು ಬೇಡ. ನಾವು ಹೆಮ್ಮೆ ಪಡಬೇಕಾಗಿರುವುದು, ಕನ್ನಡ ನಮ್ಮ ಭಾಷೆಯೆಂದು.. ಹಿಂದಿಯಲ್ಲ'' ಎಂದು ಹೇಳಿದ್ದಾರೆ.

ಕನ್ನಡ ಓಕೆ, ಹಿಂದಿ ಯಾಕೆ: ಹಿಂದಿ ಹೇರಿಕೆಗೆ ಕನ್ನಡ ಚಿತ್ರರಂಗದ ಧಿಕ್ಕಾರ!

Guru rajkumar Opposes Hindi imposition on Namma Metro.

ನಟ ಜಗ್ಗೇಶ್, ನಿರ್ದೇಶಕ ಬಿ.ಸುರೇಶ್, ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಜನ 'ನಮ್ಮ ಮೆಟ್ರೋ'ದಲ್ಲಿ ಹಿಂದಿ ಬಳಕೆಯನ್ನು ವಿರೋಧಿಸಿದ್ದಾರೆ. ಈ ಸಾಲಿಗೆ ಈಗ ದೊಡ್ಮನೆ ಮೊಮ್ಮಗ ಗುರು ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.

English summary
Dr Rajkumar Grandson 'Guru Rajkumar' raise his voice against Hindi imposition in Namma Metro.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada