For Quick Alerts
  ALLOW NOTIFICATIONS  
  For Daily Alerts

  'ಹಫ್ತಾ' ಟ್ರೇಲರ್ ಮೆಚ್ಚಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ಸ್

  |

  'ಹಫ್ತಾ' ಸಿನಿಮಾ ದಿನೇ ದಿನೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

  ಸಿನಿಮಾದ ಟ್ರೇಲರ್ ಅನ್ನು ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಚ್ಚುತ್ ಕುಮಾರ್, ದುನಿಯಾ ವಿಜಯ್ ನಟಿ ಶಾನ್ವಿ ಶ್ರೀವತ್ಸವ, ನಿರ್ದೇಶಕ ಪ್ರೇಮ್ ಟ್ರೇಲರ್ ನೋಡಿ ಇಷ್ಟ ಪಟ್ಟಿದ್ದಾರೆ.

  ದೊಡ್ಡ ಪ್ರತಿಕ್ರಿಯೆ ಪಡೆದ 'ಹಫ್ತಾ' ಟೈಟಲ್ ಸಾಂಗ್

  ಭೂಗತ ಲೋಕದ ಕಥೆ ಸಿನಿಮಾದಲ್ಲಿ ಇದೆ. ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು, ಶಾರ್ಪ್ ಶೂಟರ್ ಆಗಿ ನಟ ವರ್ಧನ್ ತೀರ್ಥಹಳ್ಳಿ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಈ ನಟ ಈಗ ಕಷ್ಟ ಪಟ್ಟು ಹೀರೋ ಪಟ್ಟ ಪಡೆದಿದ್ದಾರೆ.

  ಆಕ್ಷನ್ ಹಾಗೂ ಮಾಸ್ ಡೈಲಾಗ್ ಗಳು ಚಿತ್ರದ ಹೈಲೈಟ್ ಆಗಿದೆ. ವರ್ಧನ್ ಎರಡು ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಂಗಳಮುಖಿಯಾಗಿ ಅವರ ನಟನೆ ಟ್ರೇಲರ್ ನಲ್ಲಿ ಗಮನ ಸೆಳೆದಿದೆ.

  ಇನ್ನು, 'ರಾಮ ರಾಮ ರೇ' ಖ್ಯಾತಿಯ ನಟಿ ಬಿಂಬ ಶ್ರೀ ಚಿತ್ರದ ನಾಯಕಿಯಾಗಿದ್ದಾರೆ. ರಾಘವ್ ನಾಗ್, ಸೌಮ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಸಾಂಗ್ ಹಿಟ್ ಆಗಿದೆ.

  'ಹಫ್ತಾ' ಸಿನಿಮಾದ ಟ್ರೇಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

  ಪ್ರಕಾಶ್ ಹೆಬ್ಬಾಳ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೂರಿ ಸಿಸಿಟಿಕ್ ಕ್ಯಾಮರಾ ವರ್ಕ್, ವಿಜಯ್ ಯರ್ಡೆ ಸಂಗೀತ, ಗೌತಮ್ ಶ್ರೀ ವತ್ಸ ಹಿನ್ನಲೆ ಸಂಗೀತ ನೀಡಿದ್ದಾರೆ. ಜೂನ್ 21 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  English summary
  Actor Vardhan Thirthahalli's 'Haftha' kannada movie trailer getting good responses from audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X