For Quick Alerts
  ALLOW NOTIFICATIONS  
  For Daily Alerts

  ನಟಿ ಕಮ್ ಸಂಸದೆ ರಮ್ಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ

  |

  ಗಂಡಸರ ಸಂಬಳ ಕೇಳಬಾರದು, ಹೆಂಗಸರ ವಯಸ್ಸು ಕೇಳಬಾರದು ಎನ್ನುವ ಮಾತಿದೆ. ಆದರೂ ದಿನಗಳು ನಾಗಾಲೋಟದಲ್ಲಿ ಓಡುತ್ತಿರ ಬೇಕಾದರೆ ವಯಸ್ಸು ಬೇಡವೆಂದರೂ ಏನಾಗಾಲಿ ಮುಂದೆ ಸಾಗುತ್ತಿರುತ್ತಿದೆ.

  29.11.1982ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಮ್ಮ ಲಕ್ಕಿ ಸ್ಟಾರ್ ಕಮ್ ಸಂಸದೆ ರಮ್ಯಾಗೆ ಇಂದು (ನ 29 ಶುಕ್ರವಾರ) ಹುಟ್ಟುಹಬ್ಬದ ಸಂಭ್ರಮ. ನಮ್ಮೆಲ್ಲಾ ಓದುಗರ ಕಡೆಯಿಂದ ರಮ್ಯಾ ಮೇಡಂಗೆ ಹುಟ್ಟು ಹಬ್ಬದ ಶುಭಾಶಯಗಳು.

  ರಮ್ಯಾ ಅವರೇ, ಉತ್ಸಾಹದಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುತ್ತಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದೀರಿ. ಆ ಉದ್ದೇಶಕ್ಕಾಗಿಯೇ ಮಂಡ್ಯದಲ್ಲಿ ಮನೆ ಬೇರೆ ಮಾಡಿದ್ದೀರಿ. ಜನತಾ ಜನಾರ್ಧನನ ನೋವಿಗೆ, ಕಷ್ಟಕ್ಕೆ ಸ್ಪಂಧಿಸಿ ಜನ ಮೆಚ್ಚುವ ಕೆಲಸ ನಿಮ್ಮ ಕಡೆಯಿಂದ ಆಗಲಿ.

  2014ರ ನಿಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗಲೂ 'ನಟಿ ಕಮ್ ಸಂಸದೆ ರಮ್ಯಾ'ಎಂದು ಸಂಬೋಧಿಸುತ್ತಾ ನಿಮಗೆ ಶುಭಾಶಯ ಹೇಳುವಂತಾಗಲಿ.

  ಹಾಗೆಯೇ, ಚಿತ್ರರಂಗದಲ್ಲಿ ನಿಮ್ಮನ್ನೇ ನಂಬಿ ಹಣ ಹೂಡಿರುವ ನಿರ್ಮಾಪಕರಿಗೂ ನಿಮ್ಮಿಂದ ಒಳ್ಳೆದಾಗಲಿ, ಆ ಮೂಲಕ ಕನ್ನಡ ಚಿತ್ರರಂಗ ಇನ್ನಷ್ಟು ಪ್ರಕಾಶಮಾನವಾಗಿ ಬೆಳೆಯಲು ನಿಮ್ಮ ಅಳಿಲು ಸೇವೆ ಮುಂದುವರಿಯಲಿ ಎನ್ನುವುದು ನಮ್ಮ ಆಶಯ. ಈ ಮಧ್ಯೆ, ರಮ್ಯಾ ತನ್ನ ಬ್ಯೂಸಿ ಶೆಡ್ಯೂಲ್ ನಡುವೆಯೂ ಶಿವರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಆರ್ಯನ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.

  ಈ ವರ್ಷ ರಮ್ಯಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ.

  ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಇದುವರೆಗೆ ಸುಮಾರು ಮೂವತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಅವರ ಪ್ರಮುಖ 11 ಸೂಪರ್ ಹಿಟ್ ಸ್ವಮೇಕ್ ಚಿತ್ರಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

  ಅಭಿ

  ಅಭಿ

  ರಮ್ಯಾ ವೃತ್ತಿ ಜೀವನಕ್ಕೆ ಕಾಲಿಟ್ಟ ಮೊದಲ ಈ ಚಿತ್ರ 2003ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್ ಹೋಮ್ ಬ್ಯಾನರಿನಲ್ಲಿ ಮೂಡಿ ಬಂದ ಚಿತ್ರದಲ್ಲಿ ನಾಯಕನಾಗಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದರು. ದಿನೇಶ್ ಬಾಬು ಚಿತ್ರವನ್ನು ನಿರ್ದೇಶಿಸಿದ್ದರು.

  ಎಕ್ಸ್ ಕ್ಯೂಸ್ ಮಿ

  ಎಕ್ಸ್ ಕ್ಯೂಸ್ ಮಿ

  ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ 2003ರಲ್ಲಿ ಬಿಡುಗಡೆಯಾಗಿತ್ತು. ಅಜಯ್ ರಾವ್ ಮತ್ತು ಸುನಿಲ್ ರಾವ್ ನಿರ್ದೇಶನದ ಈ ಚಿತ್ರ ರಮ್ಯಾ ಹಿಟ್ ಚಿತ್ರಗಳ ಪೈಕಿ ಇದು ಕೂಡಾ.

  ಆಕಾಶ್

  ಆಕಾಶ್

  ರಾಜ್ ಕುಮಾರ್ ಬ್ಯಾನರಿನಲ್ಲಿ ಮೂಡಿ ಬಂದ ಮತ್ತೊಂದು ಸೂಪರ್ ಹಿಟ್ ಚಿತ್ರ. ಪುನೀತ್, ರಮ್ಯಾ, ಅವಿನಾಶ್, ಕಿಶೋರ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತು.

  ಅಮೃತಧಾರೆ

  ಅಮೃತಧಾರೆ

  ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿತ್ತು. ಅಮಿತಾಬ್ ಅತಿಥಿ ಕಲಾವಿದನಾಗಿ ನಟಿಸಿದ್ದ ಈ ಚಿತ್ರದಲ್ಲಿ ರಮ್ಯಾ, ಧ್ಯಾನ್, ಭವ್ಯಾ ಪ್ರಮುಖ ಭೂಮಿಕೆಯಲ್ಲಿದ್ದರು.

  ಸೇವಂತಿ ಸೇವಂತಿ

  ಸೇವಂತಿ ಸೇವಂತಿ

  ರಮ್ಯಾ ನಾಯಕಿಯಾಗಿ ನಟಿಸಿದ್ದ, ಕಲಾ ಸಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ರಮ್ಯಾ, ವಿಜಯ್ ರಾಘವೇಂದ್ರ, ದೊಡ್ಡಣ್ಣ, ಮು.ಮಂ ಚಂದ್ರು ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು.

  ಜೊತೆ ಜೊತೆಯಲಿ

  ಜೊತೆ ಜೊತೆಯಲಿ

  ದಿನಕರ್ ತೂಗುದೀಪ್ ನಿರ್ದೇಶನದ ಮತ್ತೊಂದು ಸೂಪರ್ ಹಿಟ್ ಚಿತ್ರ. ಲವ್ಲಿ ಸ್ಟಾರ್ ಪ್ರೇಮ್, ಶರಣ್, ದೊಡ್ಡಣ್ಣ ಪ್ರಮುಖು ತಾರಾಗಣದಲ್ಲಿರುವ ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು.

  ಅರಸು

  ಅರಸು

  ರಾಜ್ ಬ್ಯಾನರಿನ ಮತ್ತೊಂದು ಸಿನಿರಸಿಕರ ಮನಗೆದ್ದ ಚಿತ್ರ. ಪುನೀತ್, ಮೀರಾ ಜಾಸ್ಮಿನ್, ರಮ್ಯಾ, ಕೋಮಲ್, ಶ್ರೀನಿವಾಸಮೂರ್ತಿ ಮತ್ತು ಅತಿಥಿ ಪಾತ್ರದಲ್ಲಿ ಬಂದು ಹೋದ ಶ್ರೇಯಾ ಶರಣ್ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರ 2007ರಲ್ಲಿ ಬಿಡುಗೊಡೆಗೊಂಡಿತ್ತು.

  ಮುಸ್ಸಂಜೆ ಮಾತು

  ಮುಸ್ಸಂಜೆ ಮಾತು

  ಈ ಚಿತ್ರ ನಿರ್ದೇಶಕ ಮಹೇಶ್ ಅವರಿಗೆ ಮುಸ್ಸಂಜೆ ಮಹೇಶ್ ಎಂದೇ ಬಿರುದು ಕೊಟ್ಟಿತ್ತು. ಯಾಕೆಂದರೆ ಚಿತ್ರದ ಹಾಡು ಆ ಪಾಟಿ ಹಿಟ್ ಆಗಿದ್ದವು. ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ಸುದೀಪ್, ರಮ್ಯಾ, ಗಂಗಾವತಿ ಪ್ರಾಣೇಶ್, ಮಂಡ್ಯ ರಮೇಶ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು.

  ಸಂಜು ವೆಡ್ಸ್ ಗೀತಾ

  ಸಂಜು ವೆಡ್ಸ್ ಗೀತಾ

  ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ಭಾಷಿಗರ ಮನಗೆದ್ದ ಚಿತ್ರದ ಹಾಡುಗಳು. ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ, ತಬ್ಲಾ ನಾಣಿ, ಅವಿನಾಶ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು.

  ಸಿದ್ಲಿಂಗು

  ಸಿದ್ಲಿಂಗು

  ಡಬಲ್ ಮೀನಿಂಗ್ ಡೈಲಾಗುಗಳು ಚಿತ್ರದಲ್ಲಿದ್ದರೂ ಜನ ಮೆಚ್ಚಿದ ಚಿತ್ರ. ನಮ್ಮ ಲೂಸ್ ಮಾದ ಯಾನೆ ಯೋಗಿ, ರಮ್ಯಾ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಟನೆಗಾಗಿ ರಮ್ಯಾಗೆ ಫಿಲಂ ಫೇರ್ ಅವಾರ್ಡ್ ಕೂಡಾ ಸಿಕ್ಕಿತ್ತು.

  ಕಠಾರಿವೀರ ಸುರ ಸುಂದರಾಂಗಿ

  ಕಠಾರಿವೀರ ಸುರ ಸುಂದರಾಂಗಿ

  ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಮೊದಲ 3ಡಿ ತಂತ್ರಜ್ಞಾನದ ಚಿತ್ರ. ಸಚಿವ ಅಂಬರೀಶ್, ರಿಯಲ್ ಸ್ಟಾರ್ ಉಪೇಂದ್ರ, ರಮ್ಯಾ, ದೊಡ್ಡಣ್ಣ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಹಾಲಿ ಶಾಸಕ ಮುನಿರತ್ನಂ ನಾಯ್ಡು ನಿರ್ಮಿಸಿದ್ದರು. 2012ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಸುರೇಶ್ ಕೃಷ್ಣ ನಿರ್ದೇಶಿಸಿದ್ದರು.

  English summary
  Happy Birthday wishes to Actress turned Mandya MP Ramya who turns 32 today (29.11.13)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X