For Quick Alerts
  ALLOW NOTIFICATIONS  
  For Daily Alerts

  ಮುದ್ದಿನ ನಾಯಿ ಕಳೆದುಕೊಂಡು ಕಣ್ಣೀರು ಹಾಕಿದ ನಟಿ

  |

  ನಟಿ ಹರಿಪ್ರಿಯ ಪ್ರೀತಿಯಿಂದ ಸಾಕಿದ್ದ ನಾಯಿ ನಿಧನ ಹೊಂದಿದೆ. ನಾಯಿಯೊಂದಿಗೆ ಆತ್ಮೀಯ ಬಂಧ ಹೊಂದಿದ್ದ ಹರಿಪ್ರಿಯ ನಾಯಿಯ ಅಗಲಿಕೆಗೆ ಕಣ್ಣೀರು ಹಾಕಿದ್ದಾರೆ.

  ಲಕ್ಕಿ ಹೆಸರಿನ ನಾಯಿಯನ್ನು ಹರಿಪ್ರಿಯ ಸಾಕಿದ್ದರು. ನಾಯಿಯ ಹಲವು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಆ ನಾಯಿ ನಿಧನ ಹೊಂದಿದೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ಹರಿಪ್ರಿಯ, ''ಲಕ್ಕಿ, ಒಂದು ಅದ್ಭುತವಾದ ಜೀವ. ಲಕ್ಕಿ ನಮ್ಮೊಂದಿಗೆ 8.5 ವರ್ಷ ಇದ್ದ ನಮಗೆಲ್ಲ ಬಹಳ ಖುಷಿ ಹಾಗೂ ನೆನಪುಳಿಯುವ ಸುಂದರ ಕ್ಷಣಗಳನ್ನು ನೀಡಿ ಹೋಗಿದ್ದಾನೆ. ನಾನು ಅವನೊಂದಿಗೆ ಇದ್ದಾಗ ಸುರಕ್ಷಿತ ಭಾವ ಅನುಭವಿಸುತ್ತಿದ್ದೆ. ನಾವು ಒಟ್ಟಿಗೆ ಆಟವಾಡುತ್ತಿದ್ದೆವು, ಒಟ್ಟಿಗೆ ಪ್ರವಾಸ ಹೋಗುತ್ತಿದ್ದೆವು, ಒಬ್ಬರನ್ನೊಬ್ಬರು ಕಾಡಿಸುತ್ತಿದ್ದೆವು ಕೂಡ'' ಎಂದಿದ್ದಾರೆ ಹರಿಪ್ರಿಯ.

  ಮತ್ತೊಂದು ಟ್ವೀಟ್‌ನಲ್ಲಿ, ''ಲಕ್ಕಿ, ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನಿನಗೆ ಹೇಳುವುದೊಂದೆ, ನೀನು ಎಲ್ಲಿಗೇ ಹೋಗಿದ್ದರೂ ಅಲ್ಲಿ ಒಳ್ಳೆಯವನಾಗಿರು. ನೀನು ಪುನರ್ಜನ್ಮ ಪಡೆದು ಬಂದಲ್ಲಿ ನನ್ನನ್ನು ಗುರುತಿಸಿ ಮಾತನಾಡು. ನನಗೆ ಗೊತ್ತಿದೆ ನೀನು ನನ್ನ ಸುತ್ತ-ಮುತ್ತಲೆ ಮತ್ತೆ ಹುಟ್ಟುತ್ತೀಯ. ನಿನಗೆ ಗುಡ್ ಬೈ ಹೇಳಲು ನೋವಾಗುತ್ತದೆ. ನಾವುಗಳೆಲ್ಲರೂ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ'' ಎಂದಿದ್ದಾರೆ ಹರಿಪ್ರಿಯ.

  ಮುದ್ದಿನ ನಾಯಿ ಲಕ್ಕಿಯ ಹಲವು ಚಿತ್ರಗಳನ್ನು ಹರಿಪ್ರಿಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾಯಿಯ ಬಗ್ಗೆ ಬಹಳ ಪ್ರೀತಿಯಿಟ್ಟಿದ್ದ ಹರಿಪ್ರಿಯ ಈ ಲಾಕ್‌ಡೌನ್ ಅವಧಿಯಲ್ಲಿ ಲಕ್ಕಿಯೊಂದಿಗೆ ಸಾಕಷ್ಟು ಸಮಯ ಕಳೆದಿದ್ದರು.

  Haripriya Lost Her Lovely Pet Dog Lucky

  Recommended Video

  ವೈದ್ಯರಿಗೆ ಧನ್ಯವಾದ ಹೇಳುತ್ತಿರುವ ನಟಿ Ragini | Filmibeat Kannada

  ಇನ್ನು ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟಿ ಹರಿಪ್ರಿಯ ನಟಿಸಿರುವ ಒಂದು ಸಿನಿಮಾ ಬಿಡುಗಡೆಗೆ ತಯಾರಾಗಿವೆ. ಸತೀ್ ನೀನಾಸಂ ಜೊತೆಗೆ ನಟಿಸಿರುವ 'ಪೆಟ್ರೋಮ್ಯಾಕ್ಸ್' ಬಿಡುಗಡೆಗೆ ಬಹುತೇಕ ರೆಡಿಯಾಗಿದೆ. ದಿಗಂತ್ ಜೊತೆಗೆ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ಜೊತೆಗೆ 'ಲಗಾಮ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಜೊತೆಗೆ 'ಬೆಲ್ ಬಾಟಂ 2' ಇನ್ನಷ್ಟೆ ಪ್ರಾರಂಭವಾಗಬೇಕಿದೆ.

  English summary
  Actress Haripriya lost her pet dog named Lucky. She posted an emotional post on twitter and shared photos of her dog.
  Wednesday, June 30, 2021, 23:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X