For Quick Alerts
  ALLOW NOTIFICATIONS  
  For Daily Alerts

  ಮುಂದಿನ ವರ್ಷ ಪೂರ್ತಿ ಚಿತ್ರಮಂದಿರದಲ್ಲೇ ಇರಲಿದ್ದಾರೆ ಹರಿಪ್ರಿಯಾ.!

  |
  Hariprriya : ವರ್ಷ ಪೂರ್ತಿ ಥಿಯೆಟರ್ ನಲ್ಲೆ ಕಾಲ ಕಳೆಯಲಿದ್ದಾರೆ ಹರಿಪ್ರಿಯ..! | FILMIBEAT KANNADA

  ಇತ್ತೀಚಿಗೆ ಯಾವ ಸಿನಿಮಾ ಶುರುವಾದರೂ ಅಲ್ಲಿ ಹರಿಪ್ರಿಯಾ ಕಾಣಿಸ್ತಿದ್ದಾರೆ. 'ನೀವೇನ್ ಮೇಡಂ ಇಲ್ಲಿ' ಅಂದ್ರೆ, ಈ ಚಿತ್ರಕ್ಕೆ ನಾಯಕಿ ನಾನೇ ಅಂತಾರೆ. ಒಂದಾದ ನಂತರ ಇನ್ನೊಂದು, ಅದಾದ ಬಳಿಕ ಮತ್ತೊಂದು. ಅಬ್ಬಾ....ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗ್ತಿದ್ದಾರೆ.

  2018ರಲ್ಲಿ ಹರಿಪ್ರಿಯಾ ಅಭಿನಯದ ಒಟ್ಟು ನಾಲ್ಕು ಸಿನಿಮಾಗಳು ಬಿಡುಡೆಯಾಗಿದೆ. ದುನಿಯಾ ವಿಜಯ್ ಜೊತೆ 'ಕನಕ', ತೆಲುಗು ನಟ ಬಾಲಕೃಷ್ಣ ಜೊತೆ 'ಜೈಸಿಂಹ', ಚಿರು ಸರ್ಜಾ ಜೊತೆ 'ಸಂಹಾರ' ಹಾಗೂ ದಿನಕರ್ ನಿರ್ದೇಶನದ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾಗಳು ಬಂದಿದ್ದವು.

  ಈಡೇರುತ್ತಿದೆ ನಟಿ ಹರಿಪ್ರಿಯಾ ಬಹು ದಿನದ ಬಯಕೆ

  ಈ ವರ್ಷ ನಾಲ್ಕೈದು ಸಿನಿಮಾ ಮಾಡಿದ್ದ ಹರಿಪ್ರಿಯಾ ಮುಂದಿನ ವರ್ಷ ಪೂರ್ತಿ ಚಿತ್ರಮಂದಿರದಲ್ಲೇ ಇರ್ತಾರೆ. ಅವರ ಅಭಿಮಾನಿಗಳಂತೂ ಥಿಯೇಟರ್ ನ ಮನೆ ಮಾಡ್ಕೋಂಡ್ರು ಅಚ್ಚರಿಯಿಲ್ಲ. ಹೌದು, 2018ನೇ ವರ್ಷ ಮುಗಿದೇ ಇಲ್ಲ. ಅಷ್ಟರಲ್ಲೇ ಮುಂದಿನ ವರ್ಷಕ್ಕೆ ಬೇಜಾನ್ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿ ನಿಂತಿದೆ. ಹರಿಪ್ರಿಯಾ ಅಭಿನಯಿಸಿರುವ 8 ಚಿತ್ರಗಳು ಮುಂದಿನ ವರ್ಷ ಬರಲಿದೆ.? ಮುಂದೆ ಓದಿ.....

  'ಕಥಾ ಸಂಗಮ'ಕ್ಕೂ ಮುಂಚೆ 'ಬೆಲ್ ಬಾಟಂ'

  'ಕಥಾ ಸಂಗಮ'ಕ್ಕೂ ಮುಂಚೆ 'ಬೆಲ್ ಬಾಟಂ'

  ನಿರ್ದೇಶಕ ರಿಷಭ್ ಶೆಟ್ಟಿ ನಿರ್ದೇಶನದ 'ಕಥಾ ಸಂಗಮ' ಸಿನಿಮಾ ಶುರುವಾಗಿ ತುಂಬಾ ದಿನ ಆಯ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಬಟ್, ಅದೇನ್ ಆಯ್ತೋ ಗೊತ್ತಿಲ್ಲ. ಸದ್ದು ಸುದ್ದಿಯಲ್ಲದೇ ಸೈಲೆಂಟ್ ಆಗಿದೆ. ಅಂದ್ಹಾಗೆ, 'ಕಥಾ ಸಂಗಮ' ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಬಹುಶಃ ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುಂಚೆಯೇ ಅಂದ್ರೆ, ಮುಂದಿನ ವರ್ಷದ ಆರಂಭದಲ್ಲೇ ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ಅಭಿನಯದ 'ಬೆಲ್ ಬಾಟಂ' ಸಿನಿಮಾ ಬರಲಿದೆ.

  ಹರಿಪ್ರಿಯಾ ಹುಟ್ಟುಹಬ್ಬಕ್ಕೆ ಸಿಕ್ಕ 4 ವಿಶೇಷ ಉಡುಗೊರೆಗಳು

  'ಸೂಜಿದಾರ' ಜೊತೆ 'ಪಾರ್ವತಮ್ಮನ ಮಗಳು'

  'ಸೂಜಿದಾರ' ಜೊತೆ 'ಪಾರ್ವತಮ್ಮನ ಮಗಳು'

  ರಂಗಕರ್ಮಿ ಮೌನೇಶ್ ಬಡಿಗೇರ್ ನಿರ್ದೇಶನ ಹಾಗೂ ಹರಿಪ್ರಿಯಾ ನಟಿಸಿರುವ 'ಸೂಜಿದಾರ' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ನಂತರ ಅದು ಯಾಕೋ ಸೈಲೆಂಟ್ ಆಗಿದೆ. ಬಹುಶಃ ಈ ಸಿನಿಮಾನೂ ಮುಂದಿನ ವರ್ಷ ಬರಬಹುದು. ನಂತರ 'ಕನ್ನಡ ಗೊತ್ತಿಲ್ಲ' ಎಂಬ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯಿಸುತ್ತಿದ್ದಾರೆ.

  'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ

  'ಕನ್ನಡ ಗೊತ್ತಿಲ್ಲ' ಜೊತೆ 'ಕುರುಕ್ಷೇತ್ರ' ಸರ್ಪ್ರೈಸ್

  'ಕನ್ನಡ ಗೊತ್ತಿಲ್ಲ' ಜೊತೆ 'ಕುರುಕ್ಷೇತ್ರ' ಸರ್ಪ್ರೈಸ್

  ಹರಿಪ್ರಿಯಾ ಅವರು 25ನೇ ಸಿನಿಮಾ 'ಡಾಟರ್ ಆಫ್ ಪಾರ್ವತಮ್ಮ'. ಈ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ. ಶೂಟಿಂಗ್ ಕೂಡ ನಡೆದಿದೆ. ಹರಿಪ್ರಿಯಾ ಹಾಗೂ ಹಿರಿಯ ನಟಿ ಸುಮಲತಾ ನಟಿಸಿದ್ದಾರೆ. ಅದಕ್ಕೂ ಮೊದಲೇ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಬರುತ್ತೆ. ಈ ಚಿತ್ರದಲ್ಲಿ ವಿಶೇಷ ಹಾಡಿಗೆ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ.

  'ಎಲ್ಲಿದ್ದೆ ಇಲ್ಲಿ ತನಕ' ಮತ್ತು 'ಬಿಚ್ಚುಗತ್ತಿ'

  'ಎಲ್ಲಿದ್ದೆ ಇಲ್ಲಿ ತನಕ' ಮತ್ತು 'ಬಿಚ್ಚುಗತ್ತಿ'

  ಈಗಾಗಲೇ ಹರಿಪ್ರಿಯಾ ಅಭಿನಯದ ಆರು ಸಿನಿಮಾಗಳು ಮುಂದಿನ ವರ್ಷಕ್ಕೆ ಕಾದು ಕುಂತಿದೆ. ಇದೀಗ, ಸೃಜನ್ ಲೋಕೇಶ್ ನಾಯಕನಾಗಿರುವ 'ಎಲ್ಲಿದ್ದೆ ಇಲ್ಲಿ ತನಕ' ಹಾಗೂ ರಾಜವರ್ಧನ್ ಅಭಿನಯದ 'ಬಿಚ್ಚುಗತ್ತಿ' ಚಿತ್ರಗಳಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಈ ಎರಡು ಸಿನಿಮಾ ಮುಂದಿನ ವರ್ಷವೇ ರಿಲೀಸ್ ಆಗಲಿದೆಯಂತೆ. ಸದ್ಯಕ್ಕೆ ಏಂಟು ಸಿನಿಮಾ ಆಯ್ತು. ಇನ್ನೂ ಹಲವು ಚಿತ್ರಗಳು ಹರಿಪ್ರಿಯಾ ಖಾತೆಗೆ ಬರಲಿದೆ. ಒಟ್ನಲ್ಲಿ, ಮುಂದಿನ ವರ್ಷಪೂರ್ತಿ ಥಿಯೇಟರ್ ನಲ್ಲೇ ಇರ್ತಾರೆ ಅನ್ನೋದು ಮಾತ್ರ ಪಕ್ಕಾ.

  ಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ : ಹರಿಪ್ರಿಯಾ ಜೊತೆ ಮಜಾ

  English summary
  Kannada actress haripriya starrer kurukshetra, soojidara, bell bottom, ellidde illeethanka and other four movies will release next year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X