»   » ಕನ್ನಡದ ನಟಿಯರ ಮೇಲಿನ ಅನ್ಯಾಯದ ವಿರುದ್ದ ಹರಿಪ್ರಿಯಾ ರಣಕಹಳೆ..!

ಕನ್ನಡದ ನಟಿಯರ ಮೇಲಿನ ಅನ್ಯಾಯದ ವಿರುದ್ದ ಹರಿಪ್ರಿಯಾ ರಣಕಹಳೆ..!

Posted By:
Subscribe to Filmibeat Kannada

ಸಂಭಾವನೆ ತಾರತಮ್ಯದ ಬಗ್ಗೆ ನಾಯಕಿಯರು ಆಗಾಗ ಧ್ವನಿ ಎತ್ತುತ್ತಿರುತ್ತಾರೆ. ಕನ್ನಡದ ನಟಿ ಹರಿಪ್ರಿಯಾ ಕೂಡ ಈಗ ಇಂತಹ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.

ಎಲ್ಲ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯದ ವಿರುದ್ದ ನಟಿಯರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ನಟಿ ರಮ್ಯಾ, ಐಂದ್ರಿತಾ ರೇ ಕೂಡ ಈ ಹಿಂದೆ ಇದೇ ವಿಷಯವಾಗಿ ಗುಡುಗಿದ್ದರು. ಇದೀಗ ನಟಿ ಹರಿಪ್ರಿಯಾ ಕೂಡ ಹೀರೋಗಳಿಗಿಂತ ನಮಗ್ಯಾಕೆ ಸಂಭಾವನೆ ಕಮ್ಮಿ..? ಅಂತ ರಣಕಹಳೆ ಊದಿದ್ದಾರೆ. ಮುಂದೆ ಓದಿರಿ....

ಮೋಹಕ ಪ್ರಿಯೆಯ 'ಸಂಹಾರ' ನೋಟ

ಅರ್ಧದಷ್ಟೂ ಇಲ್ಲ.!

''ಕನ್ನಡದ ಸ್ಟಾರ್ ನಟರ ಸಂಭಾವನೆಯಲ್ಲಿ ಅರ್ಧದಷ್ಟೂ ಹಣವನ್ನು ನಟಿಯರಿಗೆ ನೀಡುವುದಿಲ್ಲ. ಕತೆ ಹೇಳುವಾಗಲೇ ಕಡಿಮೆ ಬಜೆಟ್ ಸಿನಿಮಾ ಅಡ್ಜಸ್ಟ್ ಮಾಡಿಕೊಳ್ಳಿ ಅಂತಾರೆ'' ಎಂದು 'ವಿಜಯ ಕರ್ನಾಟಕ' ಪತ್ರಿಕೆಗೆ ನಟಿ ಹರಿಪ್ರಿಯಾ ಹೇಳಿಕೆ ನೀಡಿದ್ದಾರೆ.

ಹೆಚ್ಚು ಸಂಭಾವನೆ ಯಾಕೆ ಕೊಡಬಾರದು..?

''ನಾಯಕಿ ಗ್ಲಾಮರಸ್ ಆಗಿರಬೇಕು, ಇಮೇಜ್ ಇರಬೇಕು, ಒಳ್ಳೆ ಅರ್ಟಿಸ್ಟ್ ಆಗಿರಬೇಕು ಅಂತ ಬಯಸುವ ನಿರ್ಮಾಪಕರು ಅದೆಲ್ಲಾ ಇರುವ ನಟಿಯರಿಗೆ ಹೆಚ್ಚು ಸಂಭಾವನೆ ಯಾಕೆ ಕೊಡಬಾರದು..?'' - ಹರಿಪ್ರಿಯಾ, ನಟಿ

'ನೀರ್ ದೋಸೆ' ತಿಂದ ಮೇಲೆ ಫಾರಿನ್ ನಲ್ಲಿ ಹರಿಪ್ರಿಯಾ ಪ್ರತ್ಯಕ್ಷ

ಪರಭಾಷಾ ನಟಿಯರಿಗೆ

''ಪರಭಾಷಾ ನಟಿಯರು ಕನ್ನಡಕ್ಕೆ ಬಂದಾಗ ಹೆಚ್ಚು ಸಂಭಾವನೆ ನೀಡುವುದರ ಜೊತೆಗೆ, ಸ್ಟಾರ್ ಹೋಟೆಲ್, ಫ್ಲೈಟ್ ಚಾರ್ಜ್... ಎಲ್ಲವನ್ನು ಕೊಡುತ್ತಾರೆ. ಕನ್ನಡದ ನಟಿಯರಿಂದ ಈ ಹಣ ಉಳಿಯುತ್ತೆ ಅಂತನಾದ್ರೂ ನಮ್ಮ ಸಂಭಾವನೆ ಹೆಚ್ಚಿಸಬಹುದಲ್ವಾ'' - ಹರಿಪ್ರಿಯಾ, ನಟಿ

ಇದು ಅನ್ಯಾಯ

''ಒಳ್ಳೆ ಕತೆ ಬಂದಾಗ ನಾನು ಖಂಡಿತ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಮ್ಮೊಮ್ಮೆ ಕೂತು ಇದರ ಬಗ್ಗೆ ಯೋಚಿಸಿದಾಗ ಬೇಸರವಾಗುತ್ತದೆ. ಸಮಾನತೆ ಬಗ್ಗೆ ಮಾತನಾಡುವ ನಾವು ಹಣದ ವಿಷಯಕ್ಕೆ ಬಂದಾಗ ಲಿಂಗಭೇದ ಮಾಡುವುದು ಅನ್ಯಾಯ'' - ಹರಿಪ್ರಿಯಾ, ನಟಿ

ಅಪ್ಪು ಜೊತೆ ಮಿರ ಮಿರ ಮಿಂಚಿದ ಹರಿಪ್ರಿಯಾ

ರಮ್ಯಾ ವಾದ ಮಾಡಿದ್ದರು

ಕನ್ನಡದಲ್ಲಿ ಸಂಭಾವನೆ ತಾರತಮ್ಯದ ಬಗ್ಗೆ ಮೊದಲು ಮಾತನಾಡಿದ್ದು ನಟಿ ರಮ್ಯಾ. ಆ ಬಳಿಕ ಐಂದ್ರಿತಾ ರೇ ಕೂಡ ಈ ಬಗ್ಗೆ ದನಿ ಎತ್ತಿದ್ದರು.

ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

English summary
Kannada Actress Haripriya Raise Her Voice Against Remuneration Discrimination In Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada