For Quick Alerts
  ALLOW NOTIFICATIONS  
  For Daily Alerts

  ಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮ

  By Pavithra
  |
  ಸಿಹಿ ಸುದ್ದಿ ಕೊಟ್ಟ ನೀರ್ ದೋಸೆ ಬೆಡಗಿ ಹರಿಪ್ರಿಯ | Filmibeat Kannada

  ಕನ್ನಡ ಸಿನಿಮಾರಂಗದ ಬ್ಯೂಟಿ ಕ್ವೀನ್ , ನೀರ್ ದೋಸೆ ಬೆಡಗಿ ಹರಿಪ್ರಿಯಾ ಸಿನಿಮಾರಂಗದಲ್ಲಿ ಕ್ವಾಟರ್ ಸೆಂಚುರಿ ಬಾರಿಸಿದ್ದಾರೆ. ಅರೆ..ಹರಿಪ್ರಿಯ ಚಿತ್ರರಂಗಕ್ಕೆ ಬಂದು ಆಗಲೇ 25 ವರ್ಷವಾಯ್ತಾ ಅಂತ ಆಶ್ಚರ್ಯ ಪಡಬೇಡಿ . ನಾವು ಹೇಳುತ್ತಿರುವುದು ಅವರು ಅಭಿನಯ ಮಾಡಿದ ಸಿನಿಮಾಗಳ ಬಗ್ಗೆ.

  ಹೌದು ಹರಿಪ್ರಿಯಾ ತಮ್ಮ 25ನೇ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ನವ ನಿರ್ದೇಶಕ ಶಂಕರ್ ಸಿನಿಮಾವನ್ನ ಡೈರೆಕ್ಟ್ ಮಾಡುತ್ತಿದ್ದು ಚಿತ್ರದ ಮುಹೂರ್ತ ಕೂಡ ಈಗಾಗಲೇ ಮಾಡಿ ಮುಗಿಸಿದ್ದಾರೆ. ಹರಿಪ್ರಿಯಾ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವುದರ ಜೊತೆಯಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಹಾಗಾಗಿ ಹರಿಪ್ರಿಯಾಗೆ ಈಗ ಸಿಲ್ವರ್ ಜೂಬ್ಲಿ ಸಂಭ್ರಮ.

  ಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ

  ತಮ್ಮ 25 ನೇ ಸಿನಿಮಾ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಹರಿಪ್ರಿಯಾ "ನನ್ನ ವೃತ್ತಿ ಜೀವನವನ್ನ ನಿನ್ನೆಯಷ್ಟೇ ಆರಂಭ ಮಾಡಿದ್ದೇನೆ ಎನ್ನುವಂತೆ ಅನ್ನಿಸುತ್ತಿದೆ. ಆದರೆ ನಾನು 25ನೇ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಬೇರೆ ಭಾಷೆಯ ಚಿತ್ರಗಳನ್ನ ಸೇರಿಸಿಕೊಂಡರೆ 36 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದು ನನ್ನ ಜೀವನದ ಅತೀ ಮುಖ್ಯವಾದ ಹಂತ"

  ಇದಕ್ಕಾಗಿ ಅವಕಾಶ ಕೊಟ್ಟ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನ ತಿಳಿಸುತ್ತೇನೆ. ನನ್ನ ಬೆನ್ನಿಗೆ ನಿಂತ ನಮ್ಮ ಅಮ್ಮನನ್ನ ಈ ಕ್ಷಣದಲ್ಲಿ ನೆನಪಿಸಿಕೊಳ್ಳಲೇಬೇಕು.

  ಇದೇ ರೀತಿಯಲ್ಲಿ ನನ್ನ ಸಿನಿಮಾ ಪ್ರಯಾಣವನ್ನ ಮುಂದುವರೆಸುತ್ತೇನೆ. ನಿಮ್ಮನ್ನು ರಂಜಿಸುತ್ತೇನೆ" ಎಂದು ಬರೆದಿದ್ದಾರೆ.

  25 ಸಿನಿಮಾ ಟೈಟಲ್ ಲಾಂಚ್ ಆಗುವ ಮುನ್ನ ಸಿನಿಮಾತಂಡ ಹರಿಪ್ರಿಯಾ ಅವರ ಪೋಸ್ಟರ್ ಲಾಂಚ್ ಮಾಡಿದೆ. ಹರಿಪ್ರಿಯಾ ಅಭಿನಯದ ಎಲ್ಲಾ ಸಿನಿಮಾಗಳ ಲುಕ್ ಇದರಲ್ಲಿ ಬಳಕೆ ಮಾಡಲಾಗಿದ್ದು ಸ್ಯಾಂಡಲ್ ವುಡ್ ಬ್ಯೂಟಿಗೆ ಈ ಮೂಲಕ ಶುಭಾಶಯ ಕೋರಿದ್ದಾರೆ.

  ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾ

  English summary
  Kannada film actress Haripriya's 25th film will start filming shortly afterwards. Harpriya expressed her happiness about acting in the 25th Kannada film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X