»   » ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50ನೇ ಚಿತ್ರ 'ಕುರುಕ್ಷೇತ್ರ'ದ ಮತ್ತೊಂದು ಪಾತ್ರ ಅಂತಿಮವಾಗಿದೆ. ದುರ್ಯೋಧನ ಪಾತ್ರದಲ್ಲಿ ದರ್ಶನ್ ಹಾಗೂ ಶ್ರೀಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದ್ರೀಗ, ಚಿತ್ರದ ನಾಯಕಿ ಯಾರಾಗಬಹುದು ಎಂಬ ದೊಡ್ಡ ಚರ್ಚೆ ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡಿತಿದೆ. ಹೀಗಿರುವಾಗ, 'ಕುರುಕ್ಷೇತ್ರ' ಅಡ್ಡಾದಿಂದ ನಾಯಕಿ ಪಾತ್ರ ಅಂತಿಮವಾಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

ಅನುಷ್ಕಾ ಶೆಟ್ಟಿ, ನಯನತಾರ, ಸೇರಿದಂತೆ ಹಲವು ಬಹುಭಾಷಾ ನಟಿಯರ ಹೆಸರು ಕೇಳಿ ಬಂದಿತ್ತು. ಆದ್ರೆ, ಇವರನ್ನೆಲ್ಲಾ ಹಿಂದಿಕ್ಕಿರುವ ಕನ್ನಡದ ಚೆಲುವೆ 'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ಟಿದ್ದಾರಂತೆ. ಯಾರದು? ಮುಂದೆ ಓದಿ.....

'ಕುರುಕ್ಷೇತ್ರ'ದಲ್ಲಿ ಕನ್ನಡದ ನಟಿ

ಮೂಲಗಳ ಪ್ರಕಾರ ದರ್ಶನ್ ಅಭಿನಯಿಸಲಿರುವ 'ಕುರುಕ್ಷೇತ್ರ' ಚಿತ್ರಕ್ಕೆ ಮೊದಲ ನಟಿ ಆಯ್ಕೆಯಾಗಿದೆ. ಪರಭಾಷೆ ತಾರೆಯರನ್ನ ಹಿಂದಿಕ್ಕಿರುವ ಸ್ಯಾಂಡಲ್ ವುಡ್ ಚೆಲುವೆ ಮೊದಲ ನಾಯಕಿ ಆಗಿ ದರ್ಶನ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರಂತೆ.

'ಕುರುಕ್ಷೇತ್ರ'ದ ದ್ರೌಪದಿ ಪಾತ್ರಕ್ಕಾಗಿ ಈ ನಟಿಗೆ ಆಫರ್ ನೀಡಲಾಗಿದ್ಯಂತೆ!

ಯಾರದು ನಟಿ?

'ಕುರುಕ್ಷೇತ್ರ' ಚಿತ್ರಕ್ಕೆ ಚೆಂದನವನದ ಚೆಂದದ ಬೊಂಬೆ ಹರಿಪ್ರಿಯಾ ಆಯ್ಕೆ ಆಗಿದ್ದಾರಂತೆ. ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ.

'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.

ಹರಿಪ್ರಿಯಾ ಪಾತ್ರವೇನು?

'ಕುರುಕ್ಷೇತ್ರ' ಸಿನಿಮಾಗೆ ಹರಿಪ್ರಿಯಾ ಆಯ್ಕೆಯಾಗಿರುವುದು ಬಹುತೇಕ ಖಚಿತವೆನ್ನಲಾಗಿದೆ. ಆದ್ರೆ, ಹರಿಪ್ರಿಯಾ ಅವರು ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ ಎಂಬುದು ನಿಗೂಡವಾಗಿ ಉಳಿದಿದೆ. ಯಾಕಂದ್ರೆ, ಹರಿಪ್ರಿಯಾ ಅವರ ಪಾತ್ರದ ಬಗ್ಗೆ ಕುತೂಹಲ ಉಳಿಸಿಕೊಳ್ಳುವ ಉದ್ದೇಶದಿಂದ ಪಾತ್ರದ ಬಗ್ಗೆ ಬಹಿರಂಗಪಡಿಸದಿರಲು ತೀರ್ಮಾನಿಸಿದ್ದಾರಂತೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

'ಕುರುಕ್ಷೇತ್ರ'ದಲ್ಲಿ ಎಷ್ಟು ಜನ ನಾಯಕಿಯರು?

'ಕುರುಕ್ಷೇತ್ರ' ಸ್ಕ್ರಿಪ್ಟ್ ನಲ್ಲಿ ದ್ರೌಪದಿ, ಸುಭದ್ರ, ರುಕ್ಮಿಣಿ, ಸತ್ಯಭಾಮಾ, ಕುಂತಿ, ಸೇರಿದಂತೆ ಹಲವು ನಾಯಕಿ ಪಾತ್ರಗಳು ಬರಲಿವೆ. ಹೀಗಾಗಿ, 'ಕುರುಕ್ಷೇತ್ರ' ಚಿತ್ರದಲ್ಲಿ ಹಲವು ನಾಯಕಿಯರು ಅಭಿನಯಿಸಲಿದ್ದಾರೆ. ಆದ್ರೆ, ಯಾರು ಯಾವ ಪಾತ್ರದಲ್ಲಿ ಬಣ್ಣ ಹಚ್ಚಬಹುದು ಎಂದು ಕಾದುನೋಡಬೇಕಿದೆ.

ಹರಿಪ್ರಿಯಾ ಫುಲ್ ಬ್ಯುಸಿ

ಸದ್ಯ, ಹರಿಪ್ರಿಯಾ ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಧ್ರುವಸರ್ಜಾ ಅಭಿನಯದ 'ಭರ್ಜರಿ' ಚಿತ್ರೀಕರಣ ಮುಗಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ'ದಲ್ಲಿ ಹಾಡೊಂದನ್ನ ಮುಗಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ 'ಸಂಹಾರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಈಗ ಲೇಟೆಸ್ಟ್ 'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ಟಿದ್ದಾರಂತೆ.

'ಬಾಹುಬಲಿ' ತಂತ್ರಜ್ಞರು

ಕನ್ನಡದ 'ಕುರುಕ್ಷೇತ್ರ' ಚಿತ್ರದಲ್ಲಿ ವಿಎಫ್ಎಕ್ಸ್ ಕೆಲಸಕ್ಕಾಗಿ 'ಬಾಹುಬಲಿ' ಚಿತ್ರದಲ್ಲಿ ಗ್ರಾಫಿಕ್ಸ್ ಮಾಡಿದ ಕೆಲವು ತಂತ್ರಜ್ಞರನ್ನ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

ಮುಂಬೈನಿಂದ ಕಲಾ ನಿರ್ದೇಕರು

ಇನ್ನು 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದ್ದು, ಮುಂಬೈನಿಂದ ಕಲಾನಿರ್ದೇಶಕರು ಹಾಗೂ ಸೆಟ್ ತರಿಸಲಾಗುತ್ತಿದೆಯಂತೆ.

ದರ್ಶನ್ 'ಮುನಿಸು' ಅಂತೆ-ಕಂತೆ ಅಷ್ಟೆ... ಕಿವಿಗೆ ಹಾಕಿಕೊಳ್ಳಬೇಡಿ

ಯಾವಾಗ 'ಕುರುಕ್ಷೇತ್ರ'

ಸದ್ಯ, ದರ್ಶನ್ ಅವರ ಕಾಸ್ಟ್ಯೂಮ್ ಸಿದ್ದವಾಗಿದೆ. ರವಿಚಂದ್ರನ್ ಅವರ ಶಸ್ತ್ರಾಸ್ತ್ರಗಳ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ. ಶಾಸಕ ಮುನಿರತ್ನ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದ ಪ್ರಯುಕ್ತ ಜುಲೈ ಅಂತ್ಯದಲ್ಲಿ 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಲಿದೆಯಂತೆ.

'ಕುರುಕ್ಷೇತ್ರ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಕೊಟ್ರು 'ಬಿಗ್' ನ್ಯೂಸ್

English summary
According to Source Actress Haripriya Officially Joining to the Darshan's Kurukshetra For Female Lead Role. The Movie Directed by Naganna, and Produced By Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada