»   » ಹರ್ಷ ನ 'ವರ್ಧನ' ತೆರೆ ಮೇಲೆ ಯಾವಾಗ?

ಹರ್ಷ ನ 'ವರ್ಧನ' ತೆರೆ ಮೇಲೆ ಯಾವಾಗ?

Posted By:
Subscribe to Filmibeat Kannada

'ಮೊಗ್ಗಿನ ಮನಸು' ಖ್ಯಾತಿಯ ಹರ್ಷ ಅಭಿನಯದ 'ವರ್ಧನ' ಚಿತ್ರದ ಶೂಟಿಂಗ್ ಕಳೆದ ಅಕ್ಟೋಬರ್ ನಲ್ಲೇ ಮುಕ್ತಾಯಗೊಂಡಿತ್ತು. ಎಲ್ಲವೂ ಅಂದು ಕೊಂಡಂತೆ ಆಗಿದ್ದಲ್ಲಿ ಚಿತ್ರ 2016 ರ ನವೆಂಬರ್ ತಿಂಗಳಲ್ಲಿ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿ ಚಿತ್ರತಂಡ ಈಗ ರಿಲೀಸ್ ಡೇಟ್ ಪ್ರಕಟಗೊಳಿಸಿದೆ.

ಸುಂದರ್ ಕೃಷ್ಣ ಅವರ ಪುತ್ರ ನಾಗೇಂದ್ರ ಅರಸ್ ಸುಮಾರು 190 ಸಿನಿಮಾಗಳಿಗೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದು, ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 6 ನೇ ಸಿನಿಮಾ 'ವರ್ಧನ'. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸದ್ದು ಮಾಡಿರುವ 'ವರ್ಧನ' ಹಲವು ವಿಶೇಷತೆಗಳಿಂದ ಕೂಡಿದೆಯಂತೆ.

'ವರ್ಧನ' ತೆರೆ ಮೇಲೆ ಯಾವಾಗ?

ಹರ್ಷ ನಾಯಕನಾಗಿ ಕಾಣಿಸಿಕೊಂಡಿರುವ 'ವರ್ಧನ' ಚಿತ್ರ ಫೆಬ್ರವರಿ 17 ರಂದು ತೆರೆ ಕಾಣುತ್ತಿದೆ.

ಹಾಸ್ಯ ಮತ್ತು ಸೆಂಟಿಮೆಂಟ್ ಝಲಕ್

'ವರ್ಧನ' ಚಿತ್ರ ಎಪ್ಪತ್ತರಷ್ಟು ಹಾಸ್ಯ ಮತ್ತು ಉಳಿದ ಮೂವತ್ತು ಭಾಗದಷ್ಟು ಸೆಂಟಿಮೆಂಟ್ ಇರುವ ಕಥೆಯನ್ನು ಹೊಂದಿದ್ದು, ಸಿನಿ ಪ್ರಿಯರನ್ನು ರಂಜಿಸುವಲ್ಲಿ ಯಾವುದೇ ಸಂಶಯವಿಲ್ಲವಂತೆ. ಕಾರಣ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿ ಸ್ಟಾರ್ ಆಗಿ ಟ್ರೆಂಡ್ ನಲ್ಲಿರುವ ಚಿಕ್ಕಣ್ಣ ಅಭಿನಯಿಸಿದ್ದಾರೆ.

ಚಿತ್ರದ ತಾರಾಗಣ

ಚಿತ್ರದಲ್ಲಿ ನಟ ಹರ್ಷ ಅವರಿಗೆ ನೇಹಾ ಪಾಟೀಲ್ ಜೋಡಿ ಆಗಿದ್ದು, ಉಳಿದಂತೆ ಪದ್ಮಜಾರಾವ್, ಶೋಭರಾಜ್, ಪೆಟ್ರೋಸ್ ಪ್ರಸನ್ನ, ಯತಿರಾಜ್, ಲಿಂಗರಾಜು ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಿರ್ದೇಶಕ ನಾಗೇಂದ್ರ ಅರಸ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಮ್ಯಾಥ್ಯೂಸ್ ಮನು ಸಂಗೀತ

'ವರ್ಧನ' ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದು, ರಾಕೇಶ್ ಸಿ.ತಿಲಕ್ ಛಾಯಾಗ್ರಹಣ ಇದೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನ, ಸಿದ್ದು ಸಂಭಾಷಣೆ ಚಿತ್ರಕ್ಕಿದೆ.

ಕೆ.ವಿ.ಎಸ್ ಪ್ರೊಡಕ್ಷನ್ ನಲ್ಲಿ ಚಿತ್ರ

ಮೊದಲಿನಿಂದಲೂ ಸಿನಿಮಾ ಮಾಡುವ ಆಸಕ್ತಿ ಹೊಂದಿದ್ದ ಉದ್ಯಮಿ ಕೆ.ಸುಧಾಕರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಉತ್ತಮ ಕಥೆ ಅಂತ ನಿರ್ಧರಿಸಿ, 'ವರ್ಧನ' ಸಿನಿಮಾವನ್ನು ಕೆ.ವಿ.ಎಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

English summary
Nagendra Urs Directorial 'Raaja Huli' And 'Gajapade' fame hero Harsha Starrer 'Vardhana' Movie Releasing on February 17th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada