Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ 'ಟಗರು ಪಾರ್ಟ್-2'
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ಟಗರು' ಸಿನಿಮಾ ರಿಲೀಸ್ ಆಗಿ ಎರಡು ವರ್ಷ. ಕನ್ನಡ ಚಿತ್ರಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿ, ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದ ಟಗರು ಶತದಿನೋತ್ಸವವನ್ನು ಆಚರಿಸಿ ಸಂಭ್ರಮಿಸಿತ್ತು.
ಟಗರು ಶಿವನ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಅದೆ ಟಗರು ಶಿವ ಮತ್ತೆ ಪಾರ್ಟ್-2 ಮೂಲಕ ಎಂಟ್ರಿ ಕೊಡುವುದಾಗಿ ಹೇಳಿ ಚಿತ್ರಾಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು. ಆದರೆ ಎರಡು ವರ್ಷವಾದರು ಟಗರು ಪಾರ್ಟ್-2 ಬಗ್ಗೆ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಜೊತೆಗೆ ಟಗರು ಹವಾ ಇನ್ನು ಕೂಡ ಕಡಿಮೆ ಆಗಿಲ್ಲ. ಇದರ ಜೊತೆಗೀಗ ಟಗರು-2 ಚಿತ್ರದ ಬಗ್ಗೆ ಬ್ರೇಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ.
ಮತ್ತೊಂದು
ರಿಮೇಕ್
ಸಿನಿಮಾದಲ್ಲಿ
ಶಿವರಾಜ್
ಕುಮಾರ್?

ಟಗರು-2ಗೆ ಶಿವಣ್ಣ ನಿರ್ಮಾಣ?
ಸುಕ್ಕ ಸೂರಿ ನಿರ್ದೇಶನ, ಕಲಾವಿದರ ಆಯ್ಕೆ, ಪಾತ್ರಗಳ ಹೆಸರು, ಸ್ಕ್ರೀನ್ ಪ್ಲೇ ಪ್ರತಿಯೊಂದು ವಿಭಾಗದಲ್ಲೂ ಟಗರು ಚಿತ್ರಪ್ರಿಯರ ಗಮನ ಸೆಳೆದಿತ್ತು. ಈಗ ಟಗರು ಪಾರ್ಟ್-2 ಬಗ್ಗೆ ಸುದ್ದಿಯೊಂದು ಕೇಳಿ ಬರುತ್ತಿದೆ. ಹೌದು, ಟಗರು-2 ಚಿತ್ರಕ್ಕೆ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರಂತೆ. ಶಿವಣ್ಣ ಹೋಮ್ ಬ್ಯಾನರ್ ನಲ್ಲಿಯೆ ಸಿನಿಮಾ ಮೂಡಿ ಬರುತ್ತಿದೆಯಂತೆ. ಹ್ಯಾಟ್ರಿಕ್ ಹೀರೋ ನಿರ್ಮಾಣದಲ್ಲಿ ಈಗಾಗಲೆ ವೆಬ್ ಸಿರೀಸ್ ಕೂಡ ತಯಾರಾಗುತ್ತಿದೆ.
'ಎಷ್ಟು
ದಿನ
ಅಂತ
ಒಳ್ಳೆಯವನಾಗಿ
ಇರಲಿ,
ಕೆಟ್ಟವನಾಗಿ
ನೋಡೋಣ'
ಶಿವಣ್ಣ
ಹೀಗೆ
ಹೇಳಿದ್ದೇಕೆ?

2020 ಕೊನೆಯಲ್ಲಿ ಅಥವಾ 2021ರಲ್ಲಿ ಸಿನಿಮಾ ಆರಂಭ
ನಿರ್ದೇಶಕ ಸೂರಿ ಮತ್ತು ಶಿವಣ್ಣ ಕಾಂಬಿನೇಶನ್ ನಲ್ಲಿ ಟಗರು-2 ಸಿನಿಮಾ ಮುಂದಿನ ವರ್ಷ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಯಾಕಂದ್ರೆ ಶಿವಣ್ಣ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಜೊತೆಗೆ ನಿರ್ದೇಶಕ ಸೂರಿ ಕೂಡ ಬ್ಯುಸಿಯಾಗಿದ್ದಾರೆ. ಹಾಗಾಗಿ ಟಗರು-2 ತಡವಾಗುವ ಸಾಧ್ಯತೆ ಇದೆ. ಆದರೆ ಶಿವಣ್ಣ ನಿರ್ಮಾಣದಲ್ಲಿಯೆ ತಯಾರಾಗುತ್ತಿರುವುದು ವಿಶೇಷ.

125ನೇ ಸಿನಿಮಾ ಭೈರತಿ ರಣಗಲ್?
ಶಿವಣ್ಣ ಸೆಂಚುರಿ ಬಾರಿಸಿ ಈಗ 125ನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಶಿವಣ್ಣ 125ನೇ ಸಿನಿಮಾವಾಗಿ 'ಭೈರತಿ ರಣಗಲ್' ಸೆಟ್ಟೇರುವ ಸಾಧ್ಯತೆ ಇದೆ. 'ಮಫ್ತಿ' ಚಿತ್ರದಲ್ಲಿ ಶಿವಣ್ಣ ನಿರ್ಮಾಹಿಸಿದ ಪಾತ್ರದ ಹೆಸರೆ ಸಿನಿಮಾವಾಗಿ ಬರುತ್ತಿದೆ. ಈ ಚಿತ್ರದಲ್ಲಿ ಶಿವಣ್ಣನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 'ಭೈರತಿ ರಣಗಲ್' ಚಿತ್ರಕ್ಕೂ 'ಮಪ್ತಿ' ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇಂಜಿನಿಯರಿಂಗ್
ಪದವಿ
ಪಡೆದ
ಕನ್ನಡದ
ಸ್ಟಾರ್
ನಟರಿವರು

ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚಿಗೆ ಅವರೆ ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕ ಯೋಗಿ ಜಿ ರಾಜ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಖಳನಟನಾಗಿ ಮಿಂಚಲಿದ್ದಾರೆ. ಈಗಾಗಲೆ ಚಿತ್ರದ ಕಥೆ ನಿರ್ಮಾಣವಾಗುತ್ತಿದೆಯಂತೆ. ಮೊದಲ ಬಾರಿಗೆ ಶಿವಣ್ಣ ಪೂರ್ಣಪ್ರಮಾಣದ ನೆಗೆಟಿವ್ ಪಾತ್ರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಶಿವಣ್ಣ ಬಳಿ ಸದ್ಯ ದ್ರೋಣ, ಎಸ್ ಆರ್ ಕೆ ಸಿನಿಮಾಗಳು ಇವೆ.