»   » ಕೂದಲು ಬೆಳ್ಳಗಾಗಿದೆಯೇ, ಚಿಂತೆ ಬಿಡಿ ಅಂದ್ರು ಶಿವಣ್ಣ!

ಕೂದಲು ಬೆಳ್ಳಗಾಗಿದೆಯೇ, ಚಿಂತೆ ಬಿಡಿ ಅಂದ್ರು ಶಿವಣ್ಣ!

Posted By:
Subscribe to Filmibeat Kannada

ವರ್ಷ ವರ್ಷ ಹುಟ್ಟುಹಬ್ಬ ಬರುತ್ತಿದ್ದಂತೆಯೇ ವಯಸ್ಸು ಇನ್ನೊಂದು ವರ್ಷ ಜಾಸ್ತಿಯಾಯಿತಲ್ಲಾ ಎನ್ನುವ ಚಿಂತನೆ ಎಲ್ಲರಲ್ಲೂ ಕಾಡುವುದು ಸಹಜ.

ಗಂಡಸರ ಸಂಬಳ ಕೇಳಬಾರದು, ಹೆಂಗಸರ ವಯಸ್ಸು ಕೇಳಬಾರದು ಎನ್ನುವ ಗಾದೆಮಾತಿನ ಹಾಗೆ, ವಯಸ್ಸಿನ ಚಿಂತೆ ಹೆಂಗಸರಲ್ಲಿ ಸ್ವಲ್ಪ ಜಾಸ್ತಿಯೇ.

ವಯಸ್ಸಾದರೂ ಯಂಗ್ ಎಂಡ್ ಎನರ್ಜಟಿಕ್ ಆಗಿ ಕಾಣಿಸಿಕೊಳ್ಳಲು ಹಲವು ಸೂತ್ರಗಳಿವೆ. ಮೈಯನ್ನು ದಂಡಿಸಲು ಆಸಕ್ತಿ ಇರುವವರಿಗೆ ಯೋಗ, ವಾಕಿಂಗ್, ಜಿಮ್ ಹೀಗೆ ಹಲವಾರು ದಾರಿಗಳಿವೆ.

ಮೈದಂಡಿಸಿ ಆರೋಗ್ಯವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡರೂ, ನಿಮ್ಮ ತಲೆಗೂದಲು ಬೆಳ್ಳಗಿದ್ದರೆ ಏನು ಮಾಡುವುದು. ಇದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಈಗಾಗಲೇ ಚಾಲ್ತಿಯಲ್ಲಿರುವ ಹಳೇ ಸೂತ್ರಕ್ಕೆ ಹೊಸ ಟಚ್ ನೀಡಿದ್ದಾರೆ.

ಕನ್ನಡದ ನಟರು ಜಾಹೀರಾತಿನಲ್ಲಿ

ಅಣ್ಣಾವ್ರ ಕಾಲದಿಂದಲೂ ನಂದಿನಿ ಹಾಲಿನ ಜಾಹೀರಾತಿನಲ್ಲಿ ಬಿಟ್ಟರೆ ಕನ್ನಡದ ನಟರು ಇತರ ಕಮರ್ಷಿಯಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಉದಾಹರಣೆಗಳು ತೀರಾ ಅಪರೂಪ.

ನಂದಿನಿ ಹಾಲಿನ ಜಾಹೀರಾತು

ನಂದಿನಿ ಹಾಲಿನ ಜಾಹೀರಾತಿನಲ್ಲಿ ರಾಜ್, ಅಪ್ಪು, ರಮ್ಯಾ, ಉಪ್ಪಿ, ರಾಗಿಣಿ ಮುಂತಾದವರು ಬಿಡಿಗಾಸು ಪಡೆಯದೇ ಕಾಣಿಸಿಕೊಂಡಿದ್ದರು.

ಗೋದ್ರೆಜ್ ಹೇರ್ ಡೈ ಜಾಹೀರಾತಿನಲ್ಲಿ ಶಿವಣ್ಣ

ಹತ್ತೇ ನಿಮಿಷದಲ್ಲಿ ಹತ್ತು ವರ್ಷ ವಯಸ್ಸು ಕಮ್ಮಿಯಾದಂತೆ ಕಾಣಿಸಬೇಕೇ? ಕೂದಲು ಬೆಳ್ಳಗಾಗಿದೆಯೇ, ಗೋದ್ರೆಜ್ ಕಂಪೆನಿಯ ಜಾಹೀರಾತಿನಲ್ಲಿ ಇದಕ್ಕೆ ಶಿವಣ್ಣ ಕೊಟ್ಟ ಐಡಿಯಾದ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ

ಬಚ್ಚನ್ ಜೊತೆ ಶಿವಣ್ಣ

ಕಲ್ಯಾಣ್ ಜ್ಯೂವೆಲ್ಲರ್ಸ್ ಜಾಹೀರಾತಿನಲ್ಲಿ ಬಚ್ಚನ್, ಪ್ರಭು ಮುಂತಾದ ದಕ್ಷಿಣ ಚಿತ್ರೋದ್ಯಮದ ಪ್ರಮುಖರ ಜೊತೆ ಶಿವಣ್ಣ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಶಿವಣ್ಣ ಮತ್ತು ಸುಧಾರಾಣಿ ಜೊತೆಗಿರುವ ಕಲ್ಯಾಣ್ ಜ್ಯೂವೆಲ್ಲರ್ಸ್ ಜಾಹೀರಾತು ಈಗ ಹೆಚ್ಚಾಗಿ ಪ್ರಸಾರವಾಗುತ್ತಿದೆ.

ಅಪ್ಪು, ದೀಪು ಕೂಡಾ ಜಾಹೀರಾತಿನಲ್ಲಿ

ಪುನೀತ್ ರಾಜಕುಮಾರ್ ಮಣಪ್ಪುರಂ, ಪೆಪ್ಸಿ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ, ದೀಪು ಆಲಿಯಾಸ್ ಕಿಚ್ಚ ಸುದೀಪ್ ಇಂಟೆಕ್ಸ್, ಪ್ಯಾರಗಾನ್, ಟಾಟಾ ಸ್ಕೈ ಮುಂತಾದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸರಕಾರೀ ಪ್ರಾಯೋಜಿತ ಜಾಹೀರಾತು

ಬೆಂಗಳೂರು ಟ್ರಾಫಿಕ್ ಪೊಲೀಸ್ ಸುರಕ್ಷಾ ಸಪ್ತಾಹದ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಪುನೀತ್ ಮತ್ತು ರಾಧಿಕಾ ಸರ್ವ ಶಿಕ್ಷಣ ಅಭಿಯಾನ ಜಾಹೀರಾತಿನಲ್ಲಿದ್ದರು. ಸಿದ್ದು ಸರಕಾರದ ಮಹತ್ವಾಕಾಂಕ್ಷೆಯ ಜಾತಿ ಸಮೀಕ್ಷೆಗೆ ಸಂಬಂಧಪಟ್ಟ ಜಾಹೀರಾತಿನಲ್ಲಿ ಪುನೀತ್ ಜಾಹೀರಾತು ಗ್ರಾಮೀಣ ಭಾಗದಲ್ಲಿ ಈಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇಲ್ಲಿದೆ ವಿಡಿಯೋ

English summary
Hatrick Hero Shivraj Kumar in Godrej company Hair Dye Ad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada