For Quick Alerts
  ALLOW NOTIFICATIONS  
  For Daily Alerts

  ಧನಂಜಯ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ, ಚಿತ್ರರಂಗದವರೂ ಸಾಥ್!

  |

  ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾ ವಿವಾದಕ್ಕೆ ಕಾರಣವಾಗಿ, ಧನಂಜಯ್ ವಿರುದ್ಧ ಹಿಂದು ಪರ ಸಂಘಟನೆಗಳು ಕೆಲವೆಡೆ ದೂರು ದಾಖಲಿಸಿವೆ.

  ಈ ನಡುವೆ ಸಾಮಾನ್ಯ ಪ್ರೇಕ್ಷಕರು ಹಲವರು ಧನಂಜಯ್ ಪರವಾಗಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಪರ ಪೋಸ್ಟ್‌ ಹಾಕುತ್ತಿದ್ದಾರೆ. 'ಐ ಸ್ಟ್ಯಾಂಡ್ ವಿತ್ ಧನಂಜಯ್' ಅಭಿಯಾನ ಸಹ ಜೋರಾಗಿಯೇ ನಡೆಯುತ್ತಿದೆ.

  ಆ ನಟರು ಮಾಡಿದರೆ ತಪ್ಪಲ್ಲ, ಧನಂಜಯ್ ಮಾಡಿದರೆ ತಪ್ಪೆ? ನೆಟ್ಟಿಗರ ಪ್ರಶ್ನೆಆ ನಟರು ಮಾಡಿದರೆ ತಪ್ಪಲ್ಲ, ಧನಂಜಯ್ ಮಾಡಿದರೆ ತಪ್ಪೆ? ನೆಟ್ಟಿಗರ ಪ್ರಶ್ನೆ

  ಈ ನಡುವೆ ಚಿತ್ರರಂಗದ ಕೆಲವರು ಸಹ ನಟ ಧನಂಜಯ್ ಪರವಾಗಿ ನಿಂತಿದ್ದಾರೆ. ಗೀತರಚನೆಕಾರ, ನಿರ್ದೇಶಕ ಕವಿರಾಜ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಿರ್ದೇಶಕ ಬಿಎಂ ಗಿರಿರಾಜ್, ಹಿರಿಯ ನಿರ್ದೇಶಕ ವಿಜಯಪ್ರಸಾದ್, ನಟ ಮೈಸೂರು ಪೂರ್ಣ, ಚಕ್ರವರ್ತಿ ಚಂದ್ರಚೂಡ್, ಇನ್ನೂ ಕೆಲವರು ಧನಂಜಯ್ ಪರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

  'ಯಶ್, ರಿಷಭ್ ಶೆಟ್ಟಿ ರೀತಿ ಧನಂಜಯ್ ಸಾಮರ್ಥ್ಯವಿರುವ ಕಲಾವಿದ'

  'ಯಶ್, ರಿಷಭ್ ಶೆಟ್ಟಿ ರೀತಿ ಧನಂಜಯ್ ಸಾಮರ್ಥ್ಯವಿರುವ ಕಲಾವಿದ'

  ''ಯಶ್, ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌. ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು. ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ ಎಂದಿದಿದ್ದಾರೆ ನಿರ್ದೇಶಕ, ಗೀತ ರಚನೆಕಾರ ಕವಿರಾಜ್.

  ಧನಂಜಯ್ ವಿವರಣೆ ಸಮಂಜಸವಾಗಿದೆ: ಕವಿರಾಜ್

  ಧನಂಜಯ್ ವಿವರಣೆ ಸಮಂಜಸವಾಗಿದೆ: ಕವಿರಾಜ್

  ''ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಗೀತರಚನೆಯ ಅನುಭವವಿರುವ ನನ್ನ ಖಚಿತ ನಿಲುವು. ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ, ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ'' ಎಂದು ಫೇಸ್‌ಬುಕ್‌ನಲ್ಲಿ ಕವಿರಾಜ್ ಬರೆದುಕೊಂಡಿದ್ದಾರೆ.

  ನಿರ್ದೇಶಕ ವಿಜಯೇಂದ್ರ ಪ್ರಸಾದ್ ಮಾತು

  ನಿರ್ದೇಶಕ ವಿಜಯೇಂದ್ರ ಪ್ರಸಾದ್ ಮಾತು

  ಧನಂಜಯ್ ಜೊತೆ 'ತೋತಾಪುರಿ' ಸಿನಿಮಾದಲ್ಲಿ ಕೆಲಸ ಮಾಡಿರುವ ನಿರ್ದೇಶಕ ವಿಜಯೇಂದ್ರಪ್ರಸಾದ್ ಸಹ ಫೇಸ್‌ಬುಕ್‌ನಲ್ಲಿ ಧನಂಜಯ್ ಬಗ್ಗೆ ಬರೆದುಕೊಂಡಿದ್ದು, ''ಮೊದಲಿಗೆ ಕ್ಷಮೆ ಕೇಳುತ್ತಲೇ ನನ್ನ ಒಂದಷ್ಟು ಸಾಲುಗಳು ಒಂದು ಜೀವದ ಬಗ್ಗೆ. ಆ ಜೀವವೇ ಧನಂಜಯ. ಈ ಜೀವವನ್ನ ನಾನು ಹತ್ತಿರದಿಂದ ಕಂಡಿದ್ದೇನೆ. ನಾನು ಕಂಡ ಹಾಗೆ ಈ ಜೀವವು ಹೇಳದಷ್ಟು ನೋವುಗಳನ್ನ ಉಂಡಿದ್ದರೂ ಯಾರಿಗೂ ನೋವು , ಅಪಮಾನ, ಅವಮಾನ ಮಾಡುವಂತ ಜೀವವಲ್ಲ. ಕಡೇಗೆ ದ್ವೇಷ ಸಾಧಿಸುವ ಜೀವವೂ ಅಲ್ಲ. ಪ್ರೀತಿ, ಮಮತೆಗೆ ಹಂಬಲಿಸುವ ಜೀವ ಹಾಗೆ ಇತರರ ಯಶಸ್ಸನ್ನು ಸಂಭ್ರಮಿಸುವ ಜೀವ. ಬೆವರಿನಿಂದಲ್ಲೇ ಬೆಳೆಯುತ್ತಿರುವ ಈ ಜೀವ ನಾನು ಕಂಡ ಹಾಗೆ ಸ್ವಚ್ಛ ಮತ್ತು ಪರಿಶುದ್ಧ. ದಯಮಾಡಿ ಯಾರೂ ಈ ಜೀವವನ್ನ ತಪ್ಪು ತಿಳಿಯಬೇಡಿ ಹಾಗೆ ಅಪಾರ್ಥವೂ ಮಾಡಿಕೊಳ್ಳಬೇಡಿ. ಇಷ್ಟು ಮಾತ್ರ ಹೇಳಬಲ್ಲೆ. ಒಂದು ಹಿಡಿ ಪ್ರೀತಿಯೂ ಇರಲಿ ಹಾಗೆ ಕ್ಷಮೆಯೂ ಇರಲಿ'' ಎಂದಿದ್ದಾರೆ.

  'ಮೊದಲು ಮಾನವನಾಗು' ಟ್ವೀಟ್‌ ನೆನಪಿಸಿದ ಗಿರಿರಾಜ್

  'ಮೊದಲು ಮಾನವನಾಗು' ಟ್ವೀಟ್‌ ನೆನಪಿಸಿದ ಗಿರಿರಾಜ್

  ನಿರ್ದೇಶಕ ಬಿಎಂ ಗಿರಿರಾಜ್ ಸಹ ಧನಂಜಯ್‌ ಬಗ್ಗೆ ಪೋಸ್ಟ್ ಹಾಕಿದ್ದು, ಹಿಂದೊಮ್ಮೆ ತಪ್ಪು ಮಾಹಿತಿ ಮೂಲಕ ಕೋಮು ಹಿಂಸೆ ಪ್ರಚೋದಿಸುವ ಟ್ವೀಟ್‌ ಮಾಡಿದ್ದ ಚಕ್ರವರ್ತಿ ಸೂಲಿಬೆಲೆಗೆ, 'ಮೊದಲು ಮಾನವನಾಗು' ಎಂದು ಧನಂಜಯ್ ಮಾಡಿದ್ದ ಟ್ವೀಟ್ ಅನ್ನು ನೆನಪಿಸಿ, ಇದೇ ಕಾರಣಕ್ಕೆ ಕೆಲವರು ಉದ್ದೇಶಪೂರ್ವಕ ದಾಳಿಯನ್ನು ಧನಂಜಯ್ ವಿರುದ್ಧ ಮಾಡುತ್ತಿದ್ದಾರೆ ಎಂದಿದ್ದಾರೆ. ನಿರ್ದೇಶಕ ಮಂಸೋರೆ ಸಹ ಪೋಸ್ಟ್‌ ಹಂಚಿಕೊಂಡಿದ್ದು, ''ನೆಲದ ಬಗ್ಗೆ ಅಪಾರವಾದ ಕಾಳಜಿ, ಮನುಷ್ಯತ್ವ, ಮಾನವೀಯ ಕಾಳಜಿ ಇರುವ ಧನಂಜಯ್‌ ರವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಅವಶ್ಯಕವಾಗಿದ್ದಾರೆ. ಅವರೊಂದಿಗೆ ಕನ್ನಡ ಚಿತ್ರರಂಗ ನಿಲ್ಲಬೇಕು'' ಎಂದಿದ್ದಾರೆ. ಇವರುಗಳು ಮಾತ್ರವೇ ಅಲ್ಲದೆ, ಚಿತ್ರರಂಗಕ್ಕೆ ಸಂಬಂಧಿಸಿದ ಹಲವರು ಧನಂಜಯ್ ಪರವಾಗಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

  English summary
  Head Bush controversy: Movie industry people extend their support to actor Dhananjay. Kaviraj, Manso re, BM Giriraj, Vijay Prasad and many shared social media post supporting Dhananjay
  Thursday, October 27, 2022, 13:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X