For Quick Alerts
  ALLOW NOTIFICATIONS  
  For Daily Alerts

  'ಹೆಡ್ ಬುಷ್' ಸಿನಿಮಾ ಪ್ರಿ ರಿಲೀಸ್ ಈವೆಂಟ್: ದೊಡ್ಡದಿದೆ ಅತಿಥಿಗಳ ಪಟ್ಟಿ! ಯಾರೆಲ್ಲ ಬರ್ತಾರೆ?

  |

  ನಟ ಡಾಲಿ ಧನಂಜಯ ಮತ್ತು ಶೃತಿ ಹರಿಹರನ್ ನಾಯಕ-ನಾಯಕಿಯಾಗಿ ನಟಿಸಿರುವ 'ಹೆಡ್ ಬುಷ್' ಸಿನಿಮಾ ಅಕ್ಟೋಬರ್ 21ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ದಾವಣಗೆರೆ ನಗರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಲಾಗಿದೆ.

  ನಾಳೆ ಅಂದರೆ ಅಕ್ಟೋಬರ್ 16 ರಂದು ಸಂಜೆ ಆರು ಗಂಟೆಗೆ ನಗರದ ಬಾಪೂಜಿ ಎಂಬಿಎ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಧನಂಜಯ ಹಾಗೂ ಚಿತ್ರತಂಡದ ಜೊತೆಗೆ ಮೋಹಕ ತಾರೆ ರಮ್ಯಾ, ಡಿಂಪಲ್‌ ಕ್ವೀನ್ ರಚಿತಾರಾಮ್, ನೀನಾಸಂ ಸತೀಶ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ.‌ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಅಮೃತ ಐಯ್ಯಂಗಾರ್, ಸಪ್ತಮಿ ಗೌಡ ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದು ವಿಶೇಷ. ಗೌರವಾನ್ವಿತ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಕಾಂಗ್ರೆಸ್ ಮುಖಂಡರಾದ ಶಿವಗಂಗಾ ಶ್ರೀನಿವಾಸ್, ಗಣೇಶ್ ಹುಲ್ಲುಮನಿ ಮತ್ತಿತರರು ಸಹ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಚಲನಚಿತ್ರದಲ್ಲಿ ಅಭಿನಯಿಸಿರುವ ಡಾಲಿ ಧನಂಜಯ, ಶೃತಿ ಹರಿಹರನ್ ಪ್ರಮುಖ ಆಕರ್ಷಣೆ. ಲೂಸ್ ಮಾದ ಖ್ಯಾತಿಯ ಯೋಗಿ , ವಸಿಷ್ಠ ಸಿಂಹ , ಪಾಯಲ್ ರಜಪೂತ್ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಲಿದೆ.

  ಹಲವು ಅತಿಥಿಗಳು ಬರಲಿದ್ದಾರೆ

  ಹಲವು ಅತಿಥಿಗಳು ಬರಲಿದ್ದಾರೆ

  ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಿದರೆ ಸಿನಿಮಾ ಗೆಲ್ಲುತ್ತೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸಿನಿಮಾ ರಂಗದವರು ಆಡಿಯೊ, ಟ್ರೈಲರ್, ಪ್ರಿರಿಲೀಸ್ ಈವೆಂಟ್ ನಡೆಸುತ್ತಾರೆ. ಹೆಡ್ ಬುಷ್ ಚಿತ್ರ ತಂಡ ಸಹ ಇದೇ ವಿಶ್ವಾಸ ಹೊಂದಿದೆಯಂತೆ. ಪತ್ರಿಕಾಗೋಷ್ಠಿಯಲ್ಲಿ ಡಾಲಿ ಧನಂಜಯ ಅಭಿಮಾನಿಗಳ ಸಂಘದ ಅಧ್ಯಕ್ಷ ಚೇತನ್, ನಿಖಿತ್ ಶೆಟ್ಟಿ, ಚಂದನ್, ಪ್ರಮೋದ್ ಪೈ, ನಿಖಿತ್ ಶೆಟ್ಟಿ, ಕೆ.‌ ಕಿರಣ್, ಅಜಯ್, ನಿಂಗರಾಜ್, ಯುವರಾಜ್, ಶ್ರೀಕಾಂತ್ ಬಗೇರಾ ಮತ್ತಿತರರು ಹಾಜರಿದ್ದರು.

  ಭೂಗತ ಪಾತಕಿಗಳ ಕುರಿತ ಸಿನಿಮಾ

  ಭೂಗತ ಪಾತಕಿಗಳ ಕುರಿತ ಸಿನಿಮಾ

  ಡಾಲಿ ಧನಂಜಯ್ ನಟಿಸಿರುವ 'ಹೆಡ್ ಬುಷ್' ಸಿನಿಮಾ ಬೆಂಗಳೂರು ಭೂಗತ ಲೋಕದಲ್ಲಿ ನಡೆದ ನಿಜ ಘಟನೆಗಳನ್ನು ಆಧರಿಸಿ ಮಾಡಲಾದ ಕತೆಯನ್ನು ಹೊಂದಿದೆ. ಸಿನಿಮಾವನ್ನು ಶೂನ್ಯ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಡಾಲಿ ಧನಂಜಯ್, ಭೂಗತ ಪಾತಕಿ ಜಯರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಜಯರಾಜ್-ಕೊತ್ವಾಲ್ ಕಾಲದಲ್ಲಿ ಇದ್ದ ಅನೇಕ ನಿಜ ರೌಡಿಗಳ ಪಾತ್ರಗಳು ಸಿನಿಮಾದಲ್ಲಿದ್ದು, ಲೂಸ್ ಮಾದ ಯೋಗಿ, ರಘು ಮುಖರ್ಜಿ ಇನ್ನೂ ಕೆಲವು ಪ್ರಮುಖ ನಟರು ವಿವಿಧ ರೌಡಿಗಳ ಪಾತ್ರಗಳಲ್ಲಿ ನಟಿಸಿದ್ದಾರೆ.

  ಅಗ್ನಿ ಶ್ರೀಧರ್ ಚಿತ್ರಕತೆ

  ಅಗ್ನಿ ಶ್ರೀಧರ್ ಚಿತ್ರಕತೆ

  ಸಿನಿಮಾವನ್ನು ಶೂನ್ಯ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆಯನ್ನು ಮಾಜಿ ಭೂಗತ ಪಾತಕಿ ಅಗ್ನಿ ಶ್ರೀಧರ್ ಬರೆದಿದ್ದಾರೆ. ಈ ಹಿಂದೆ ಇವರು 'ಆ ದಿನಗಳು', 'ಕಳ್ಳರ ಸಂತೆ', 'ಎದೆಗಾರಿಕೆ', 'ಕಿರಗೂರಿನ ಗಯ್ಯಾಳಿಗಳು', ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ. ಶಿವರಾಜ್ ಕುಮಾರ್ ನಟನೆಯ 'ತಮಸ್ಸು' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ 'ಸೈಲೆಂಟ್ ಸುನೀಲ' ಸಿನಿಮಾಕ್ಕೂ ಚಿತ್ರಕತೆ ಬರೆದಿದ್ದಾರೆ. 'ಹೆಡ್ ಬುಷ್' ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಸಹ ಮಾಡಿರುವುದು ವಿಶೇಷ.

  ಅಕ್ಟೋಬರ್ 21 ಕ್ಕೆ ಸಿನಿಮಾ ಬಿಡುಗಡೆ

  ಅಕ್ಟೋಬರ್ 21 ಕ್ಕೆ ಸಿನಿಮಾ ಬಿಡುಗಡೆ

  'ಹೆಡ್ ಬುಷ್' ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಡಾಲಿ ಧನಂಜಯ್ ಎಲ್ಲೇ ಹೋದರು ರೆಟ್ರೋ ಲುಕ್‌ನಲ್ಲಿ, ಅಂಬಾಸಿಡರ್ ಕಾರಿನಲ್ಲಿ ಹೋಗುತ್ತಿದ್ದಾರೆ. ದುಬೈಗೆ ಕ್ರಿಕೆಟ್ ಆಡಲು ಹೋದಾಗಲೂ ರೆಟ್ರೊ ಲುಕ್‌ನಲ್ಲಿ ಹೋಗಿದ್ದರು. ವಿದೇಶದಲ್ಲಿಯೂ ರೆಟ್ರೋ ಲುಕ್‌ನಲ್ಲಿ ಡಾಲಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಫಿಲಂಫೇರ್‌ಗೂ ಸಹ ರೆಟ್ರೊ ಲುಕ್‌ನಲ್ಲಿಯೇ ಡಾಲಿ ಧನಂಜಯ್ ಬಂದಿದ್ದರು. ಅದೂ 80-90 ರ ದಶಕದ ಭೂಗತ ಪಾತಕಿಗಳ ಮೆಚ್ಚಿನ ಅಂಬಾಸಿಡರ್ ಕಾರಿನಲ್ಲಿ ಫಿಲಂ ಫೇರ್‌ಗೆ ಬಂದಿದ್ದಿದ್ದು ವಿಶೇಷ. 'ಹೆಡ್ ಬುಷ್' ಸಿನಿಮಾ ಅಕ್ಟೋಬರ್ 21 ರಂದು ತೆರೆಗೆ ಬರಲಿದೆ.

  English summary
  Dali Dhananjay starrer Head-Bush movie pre release event is organized in Davangere on October 16. Actress Ramya, Rachita Ram, Saptami Gowda and many other attending the event.
  Saturday, October 15, 2022, 18:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X