twitter
    For Quick Alerts
    ALLOW NOTIFICATIONS  
    For Daily Alerts

    'ಹೆಡ್‌ ಬುಷ್' ವೀರಗಾಸೆ ವಿವಾದ: 'ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ಧ'ವೆಂದು ಕಿಡಿಕಾರಿದ ಅಗ್ನಿ ಶ್ರೀಧರ್!

    |

    ಧನಂಜಯ್ ನಟಿಸಿ, ನಿರ್ದೇಶಿಸಿರೋ 'ಹೆಡ್ ಬುಷ್' ಸಿನಿಮಾ ರಿಲೀಸ್ ಆಗಿದೆ. ಸಿನಿಮಾಗೆ ಬಾಕ್ಸಾಫೀಸ್‌ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದರ ಹಿಂದೆನೇ 'ಹೆಡ್ ಬುಷ್' ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡಿದೆ. ವೀರಗಾಸೆ ಹಾಗೂ ಕರಗ ಬಗ್ಗೆ ಸಿನಿಮಾದಲ್ಲಿ ಅವಹೇಳಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ.

    ಐತಿಹಾಸಿ ಸುಪ್ರಸಿದ್ಧ ವೀರಗಾಸೆ ಹಾಗೂ ಕರಗ ಆಚರಣೆಗೆ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಈ ಸಂಬಂಧ 'ಹೆಡ್‌ ಬುಷ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಲು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದ ಮುಖಂಡರು ಮುಂದಾಗಿದ್ದಾರೆ.

    'ಹೆಡ್ ಬುಷ್' ಚಿತ್ರತಂಡದ ವಿರುದ್ಧ ಹಿಂದೂ ಸಂಘಟನೆ ದೂರು'ಹೆಡ್ ಬುಷ್' ಚಿತ್ರತಂಡದ ವಿರುದ್ಧ ಹಿಂದೂ ಸಂಘಟನೆ ದೂರು

    ತೀವ್ರ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಲೇಖಕ ಅಗ್ನಿ ಶ್ರೀಧರ್ ಆಕ್ರೋಶ ಹೊರಹಾಕಿದ್ದಾರೆ. ಇದರ ಜೊತೆಗೆನೇ 'ಹೆಡ್ ಬುಷ್' ಸಿನಿಮಾದಲ್ಲಿ ಕರಗವನ್ನು 'ದುಜುಬಿ' ಅಂತ ಹೇಳಿದ್ದು ಯಾಕೆ ಅನ್ನೋದನ್ನೂ ಹೇಳಿದ್ದಾರೆ. ಅಲ್ಲದೆ, ಕೆಣಕುವವರ ಜೊತೆ ಸಂವಾದಕ್ಕೂ ಸಿದ್ಧ, ಜಗಳಕ್ಕೂ ಸಿದ್ಧ ಅಂತ ಕಿಡಿಕಾರಿದ್ದಾರೆ.

    ಸಂವಾದಕ್ಕೂ ಸಿದ್ಧ-ಜಗಳಕ್ಕೂ ಸಿದ್ಧ!

    ಸಂವಾದಕ್ಕೂ ಸಿದ್ಧ-ಜಗಳಕ್ಕೂ ಸಿದ್ಧ!

    ವಿವಾದ ತಾರಕ್ಕೇರುತ್ತಿದ್ದಂತೆ ಅಗ್ನಿ ಶ್ರೀಧರ್ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಫಸ್ಟ್‌ ನ್ಯೂಸ್ ಜೊತೆ ಮಾತಾಡಿರೋ ಅಗ್ನಿ ಶ್ರೀಧರ್ ಕೆಣಕುವವರ ವಿರುದ್ಧ ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ದ ಎಂದಿದ್ದಾರೆ. "ಯಶಸ್ಸಿನ ಹಿಂದೆ ವಿವಾದ ಇದ್ದೇ ಇರುತ್ತೆ. ಸಿನಿಮಾ ಯಶಸ್ಸು ಅಂತೂ ಆಗಿದೆ. ಆದಾಗ ಕೆಲವರು ವಿವಾದ ಸೃಷ್ಟಿ ಮಾಡುತ್ತಾರೆ. ನಿಜವಾಗಿಯೂ ಹೃದಯದಿಂದ ಬಂದಿರೋದಕ್ಕೆ ಸ್ಪಷ್ಟನೆ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ಯಾಕಂದ್ರೆ, ಕ್ರಿಯೇಟರ್ ನಾನು. ಬರೀ ಧನಂಜಯ ಎಲ್ಲಾ ಮಾತಾಡುವುದಕ್ಕೆ ಆಗುವುದಿಲ್ಲ. ಈ ಜವಾಬ್ದಾರಿಯನ್ನು ನಾನೇ ಹೊತ್ತುಹೊಳ್ಳುತ್ತೇನೆ. ಆದರೆ, ಬೇಕಂತ ಕೆಣಕುವುದಕ್ಕೆ ಬರುತ್ತಿದ್ದಾರಲ್ಲ. ಅವರೊಂದಿಗೆ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಸಂವಾದಕ್ಕೂ ಸಿದ್ಧವಾಗಿದ್ದೇನೆ. ಜಗಳಕ್ಕೂ ಸಿದ್ಧವಾಗಿದ್ದೇನೆ. " ಎಂದು ಅಗ್ನಿ ಶ್ರೀಧರ್ ಆಕ್ರೋಶ ಹೊರಹಾಕಿದ್ದಾರೆ.

    'ದುಜುಬಿ ಕರಗ' ಸಿನಿಮಾದಲ್ಲಿ ಬಳಸಿದ್ದೇಕೆ?

    'ದುಜುಬಿ ಕರಗ' ಸಿನಿಮಾದಲ್ಲಿ ಬಳಸಿದ್ದೇಕೆ?

    "ಇಡೀ ತಿಗಳರ ಸಮುದಾಯ ನನಗೆ ಬಹಳ ಹತ್ತಿರ. ಕಾರಣವೇನು ಅಂದರೆ, ನಾವು ದ್ರಾವಿಡಿಯನ್ ಮೂವ್‌ಮೆಂಟ್‌ ಬಗ್ಗೆ ಬಹಳ ಮಾತಾಡುತ್ತಿರುತ್ತೇವೆ. ಇಡೀ ತಿಗಳರನ್ನು ಆದಿ ದ್ರಾವಿಡರು ಅಂತ ಪರಿಗಣಿಸಿದ್ದೇವೆ. ತಿಗರ ಮಹಾಸಂಘದ ಅಧ್ಯಕ್ಷ ಸುಬ್ಬಣ್ಣ, ನಾನು ಅವರು ಪರಸ್ಪರ ಬಹಳ ಗೌರವ ಇಟ್ಟುಕೊಂಡಿದ್ದೇವೆ. ಎಲ್ಲರೂ ಸಿನಿಮಾ ನೋಡಿದ್ದಾರೆ. ತುಂಬಾ ಮೆಚ್ಚಿದ್ದಾರೆ. ಅವರಿಗೆ ಅಲ್ಲೊಂದು ಪದ ನಿಜವಾಗಲೂ ಶಾಕ್ ಆಗಿದೆ. 'ದುಜುಬಿ ಕರಗ' ಈ ಪದ ಬಂದಾಗ ಕೆಲವರು ಎರಡು ಬಾರಿ ನೋಡಿದ್ದಾರೆ. ಈ ಪದ ಹೇಳಿರುವವನು ಒಬ್ಬ ರೌಡಿ. ಇಲ್ಲಿ ಧನಂಜಯ ಹೇಳಲ್ಲ. ಆ ಸಿನಿಮಾ ಕ್ರಿಯೇಟ್ ಮಾಡಿದ ನಾನು ಹೇಳಲ್ಲ. ಆ ಪದ ಹೇಳದೆ ಹೋದರೆ ಕರಗದ ಮಹತ್ವವನ್ನು ಹೇಗೆ ಹೇಳಬೇಕು?" ಎಂದು ಅಗ್ನಿ ಶ್ರೀಧರ್ ಪ್ರಶ್ನೆ ಮಾಡಿದ್ದಾರೆ.

    ಶಿವಶಂಕರ್ ಅವರ ಬಗ್ಗೆ ಮಾತಾಡಲು ಸಾಧ್ಯವೇ?

    ಶಿವಶಂಕರ್ ಅವರ ಬಗ್ಗೆ ಮಾತಾಡಲು ಸಾಧ್ಯವೇ?

    "ತಿಗಳರ ಸಮಾಜದ ಶಿವಶಂಕರ್ ಬಗ್ಗೆ ಮಾತಾಡಿರುವುದು ಹಲವರಿಗೆ ಘಾಸಿ ಆಗಿರೋದು ಗೊತ್ತು. ಆದರೆ, ಅದು ಶಿವಶಂಕರ್‌ ಅವರ ಬಗ್ಗೆ ಅಲ್ಲ ಅದು. ಆ ಹುಡುಗನ ಬಗ್ಗೆ. ಕರಗ ಎತ್ತಿದ ನಂತರ ಮಾತಾಡಿದ್ದೇವಾ? ಎತ್ತಿದ ನಂತರ ಅವರ ಬಗ್ಗೆ ಚರ್ಚೆ ಬಂದಿದೆಯಾ? ಇದು ಸಾಧ್ಯನಾ? ನಾನಲ್ಲ. ತಿಗಳರ ಸಮುದಾಯ ಬಿಟ್ಟು ಬಿಡಿ. ಅವರ ಬಗ್ಗೆ ಗೊತ್ತಿದ್ದವರು ಅಪಶಬ್ಧ, ಲೇವಡಿಯ ಪದವನ್ನು ಬಳಸಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿಗೆ ನಾನೇನು ಹೇಳುವುದಿಲ್ಲ." ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    'ನಾವು ನಿಮ್ಮ ಗುಲಾಮರಲ್ಲ'

    'ನಾವು ನಿಮ್ಮ ಗುಲಾಮರಲ್ಲ'

    "ಹೆದರಿಸೋಕೆ ಬರಬೇಡಿ ನಮ್ಮನ್ನು ನಿಮ್ಮ ಗುಲಾಮರ ನಾವು. ಇದನ್ನೆಲ್ಲಾ ಬಿಟ್ಟು ಬಿಡಿ. ಇಲ್ಲಿ ಧನಂಜಯ್‌ನದ್ದು ಏನೂ ಇಲ್ಲ. ಇದು ನನ್ನದು. ಧನಂಜಯ ದುಡ್ಡು ಹಾಕಿದ್ದಾನೆ ಅಷ್ಟೇ. ಆಕ್ಟ್ ಮಾಡಿದ್ದಾನೆ ಅಷ್ಟೇ. ಎಷ್ಟು ಕೆರಳಿಸೋದು ನೀವು. ಹೆದರಿಸುವುದಕ್ಕೆ ಬರುತ್ತೀರಾ? ಹಿಂದೂ ಸಂಘಟನೆಗಳು..? ಯಾರು ಹಿಂದೂ ಸಂಘಟನೆ. ನಾನೇನು ಮುಸ್ಲಿಂ? ಕಿಶ್ಚಿಯನಾ? ನಾನು ಪಕ್ಕಾ ಇಲ್ಲಿನ ದ್ರಾವಿಡ. ದ್ರಾವಿಡ ಆರ್ಮಿಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿನಿ ನೋಡಿ." ಎಂದು ಕ್ರಾಂತಿಯ ಸುಳಿವು ನೀಡಿದ್ದಾರೆ."

    English summary
    Head Bush Veeragase And Karaga Controversy: Writer Agni Shridhar Reaction, Know More.
    Wednesday, October 26, 2022, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X