»   » ಮುಂಗಾರು 'ಮಳೆ' ಆರ್ಭಟ: ಗಣೇಶ್-ರವಿಚಂದ್ರನ್ ಪರದಾಟ

ಮುಂಗಾರು 'ಮಳೆ' ಆರ್ಭಟ: ಗಣೇಶ್-ರವಿಚಂದ್ರನ್ ಪರದಾಟ

Posted By:
Subscribe to Filmibeat Kannada

ಸಕಲೇಶಪುರದ ಹಸಿರು ಸಿರಿಯಲ್ಲಿ, ಮಳೆಯಲ್ಲಿ, ಮಂಜು ಮುಸುಕಿದ ವಾತಾವರಣದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಮುಂಗಾರು ಮಳೆ-2' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಇದೇ ವೇಳೆ ಗಣೇಶ್ ಮತ್ತು ರವಿಚಂದ್ರನ್ ಫೋನ್ ಗೆ ಸಿಗದೆ ನಾಪತ್ತೆ ಆದ ಪರಿಣಾಮ ಇಡೀ ಚಿತ್ರತಂಡ ಪರದಾಡಿದ ಘಟನೆ ಬಿಸಿಲೆ ಘಾಟ್ ನಲ್ಲಿ ನಡೆದಿದೆ. [ಮುಂಗಾರು ಮಳೆ 2 ಶೂಟಿಂಗ್ ಗೆ 'ಅರಣ್ಯ' ಕಟಂಕ]


heavy-rain-creats-trouble-ganesh-v-ravichandran-starrer-mungaru-male-2-shooting

ಅಸಲಿಗೆ ಆಗಿದ್ದೇನಪ್ಪಾ ಅಂದ್ರೆ, ಸಕಲೇಶಪುರ ಬಳಿ ಇರುವ ಬಿಸಿಲೆ ಅರಣ್ಯ ಪ್ರದೇಶದ ವ್ಯೂ ಪಾಯಿಂಟ್ ನಲ್ಲಿ 'ಮುಂಗಾರು ಮಳೆ-2' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಕಳೆದ ಎರಡು ದಿನಗಳಿಂದ ಅಲ್ಲಿ ಭಾರಿ ಮಳೆ ಸುರಿಯುತ್ತಿದೆ. ಬಿಸಿಲೆ ಘಾಟ್ ಪ್ರವೇಶಿಸುತ್ತಿದ್ದಂತೆ, ಎಲ್ಲಾ ನೆಟ್ ವರ್ಕ್ ಗಳು ಔಟ್ ಆಫ್ ರೀಚ್ ಆಗುತ್ತದೆ. [ಸಕಲೇಶಪುರ ಕನ್ನಡದ ಸ್ಟಾರ್ ನಟರಿಗೆ ಶೂಟಿಂಗ್ ಹಾಟ್ಸ್ಪಾಟ್]


ಶೂಟಿಂಗ್ ನಡೆಯುತ್ತಿದ್ದ ವೇಳೆ ಜೋರಾಗಿ ಮಳೆ ಬಂದ ಪರಿಣಾಮ ಚಿತ್ರತಂಡ ದಿಕ್ಕಾಪಾಲಾಗಿ ಓಡಿತ್ತು. ಗಣೇಶ್ ಮತ್ತು ರವಿಚಂದ್ರನ್ ಒಂದು ಕಡೆ ಓಡಿದರು. ಯಾವುದೇ ನೆಟ್ ವರ್ಕ್ ಕನೆಕ್ಟ್ ಆಗದ ಪರಿಣಾಮ ಚಿತ್ರತಂಡಕ್ಕೂ ಇಬ್ಬರು ನಟರಿಗೂ ಕನೆಕ್ಷನ್ ಕಟ್ ಆಯ್ತು. ['ಮುಂಗಾರು ಮಳೆ'ಯಲಿ ಗೋಲ್ಡನ್ ಸ್ಟಾರ್ ಜೊತೆಯಲಿ ಕ್ರೇಜಿ ಸ್ಟಾರ್!]


ಮಳೆ ನಿಂತ ಮೇಲೆ ಕೆಲ ಕಾಲ ಪರದಾಡಿದ ಬಳಿಕ ಗಣೇಶ್ ಮತ್ತು ರವಿಚಂದ್ರನ್ 'ಮುಂಗಾರು ಮಳೆ-2' ಚಿತ್ರತಂಡ ಸೇರಿಕೊಂಡಿದ್ದಾರೆ. ಇಂತಹ ಅನೇಕ ಅಡಚಣೆಗಳು ಎದುರಾಗುತ್ತಿದ್ದರೂ, ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಅನ್ನುತ್ತಾರೆ ನಿರ್ದೇಶಕ ಶಶಾಂಕ್.

English summary
Heavy Rain in Sakaleshpur, Hassan has created trouble for Ganesh-V.Ravichandran starrer 'Mungaru Male-2'. Currently, Shashank directorial 'Mungaru Male-2' shooting is progress in Bisile Forest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada