For Quick Alerts
  ALLOW NOTIFICATIONS  
  For Daily Alerts

  'ಅಮೆರಿಕಾ ಅಮೆರಿಕಾ' ನಟಿ ಕಂಬ್ಯಾಕ್ ಆದ್ರೆ ಈ ಹೀರೋ ಜೊತೆ ನಟಿಸುವ ಆಸೆಯಂತೆ

  |

  ಅಮೆರಿಕಾ ಅಮೆರಿಕಾ, ದೊರೆ, ಬಂಗಾರದ ಮನೆ, ಸಂಭ್ರಮ, ರವಿಮಾಮ ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಹೇಮಾ ಪ್ರಭಾತ್ ಅದಾದ ಮೇಲೆ ಇಂಡಸ್ಟ್ರಿಯಿಂದ ದೂರವಾಗ್ತಾರೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾರಂಗದಿಂದ ದೂರ ಸರಿದ ನಟಿ, ದಾಂಪತ್ಯ ಜೀವನದ ಕಡೆ ಹೆಚ್ಚು ಗಮನ ಹರಿಸಿದರು.

  ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!

  ಪ್ರಭಾತ್ ಶಾಲೆ ಮುನ್ನಡೆಸುತ್ತಿದ್ದು, ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಡ್ಯಾನ್ಸ್ ತರಬೇತಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಒಂದು ವೇಳೆ ಹೇಮಾ ಪ್ರಭಾತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆದರೆ ಕನ್ನಡದ ಈ ನಟನ ಜೊತೆ ಸಿನಿಮಾ ಮಾಡುವ ಆಸೆಯಂತೆ. ಯಾರದು? ಮುಂದೆ ಓದಿ...

  ಯಶ್ ಅಂದ್ರೆ ಬಹಳ ಇಷ್ಟ

  ಯಶ್ ಅಂದ್ರೆ ಬಹಳ ಇಷ್ಟ

  ಈಗಿನ ನಟರಲ್ಲಿ ನಿಮಗೆ ಯಾರು ಇಷ್ಟ ಎಂದು ಕೇಳಿದ್ದಕ್ಕೆ ''ಯಶ್ ಅಂದ್ರೆ ಬಹಳ ಇಷ್ಟ'' ಎಂದರು. ಯಶ್ ಅಂದ್ರೆ ಮೊದಲಿನಿಂದಲೂ ಇಷ್ಟ. ಯಶ್ ತುಂಬಾ ಹಾರ್ಡ್ ವರ್ಕರ್. ಸುದೀಪ್ ಅವರನ್ನು ಕಂಡರೆ ಕೂಡ ಇಷ್ಟ. ಸುದೀಪ್ ಅವರ ವಾಯ್ಸ್, ಮ್ಯಾನರಿಸಂ, ಘನತೆ, ಎಷ್ಟೇ ಆದರೂ ಅವರು ಘನತೆ ಬಿಟ್ಟು ಹೋಗಲ್ಲ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಹೀರೋಯಿನ್ ಪೈಕಿ ರಾಧಿಕಾ ಇಷ್ಟ

  ಹೀರೋಯಿನ್ ಪೈಕಿ ರಾಧಿಕಾ ಇಷ್ಟ

  ಈಗಿನ ಹೀರೋಯಿನ್ ಪೈಕಿ ಯಾರು ಇಷ್ಟ ಎಂದು ಕೇಳಿದ್ದಕ್ಕೆ ''ರಾಧಿಕಾ ಪಂಡಿತ್ ಇಷ್ಟ, ಅವರು ಪರ್ಫಾಮೆನ್ಸ್ ತುಂಬಾ ಚೆನ್ನಾಗಿದೆ'' ಎಂದು ಶ್ಲಾಘಿಸಿದರು.

  ಯಶ್ ಜೊತೆ ನಟಿಸಲು ಇಷ್ಟ

  ಯಶ್ ಜೊತೆ ನಟಿಸಲು ಇಷ್ಟ

  ಮತ್ತೆ ನೀವು ಇಂಡಸ್ಟ್ರಿಗೆ ಕಂಬ್ಯಾಕ್ ಆದರೆ ಯಾರ ಜೊತೆಯಲ್ಲಿ ನಟಿಸಲು ಆಸೆ ಎಂದು ಕೇಳಿದ ಪ್ರಶ್ನೆಗೆ ''ಯಶ್ ಅವರ ಜೊತೆ ನಟಿಸಲು ಇಷ್ಟ ಪಡುತ್ತೇನೆ. ಆದರೆ ತಾಯಿ ಪಾತ್ರವಲ್ಲ, ಅಕ್ಕನ ಪಾತ್ರ ಮಾಡುತ್ತೇನೆ. ಸುದೀಪ್ ಜೊತೆಯೂ ನಟಿಸುತ್ತೇನೆ. ಈಗಿನ ಹೀರೋಗಳ ಜೊತೆ ಅಭಿನಯಿಸಬೇಕು ಎಂಬ ಆಸೆ ಖಂಡಿತಾ ಇದೆ'' ಎಂದು ಹೇಳಿಕೊಂಡಿದ್ದಾರೆ.

  ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!

  ಪುನೀತ್ ಜೊತೆ ಅವಕಾಶ ಮಿಸ್ ಆಗಿತ್ತು

  ಪುನೀತ್ ಜೊತೆ ಅವಕಾಶ ಮಿಸ್ ಆಗಿತ್ತು

  ಪುನೀತ್ ರಾಜ್ ಕುಮಾರ್ ಜೊತೆಯೂ ನಟಿಸುವ ಅವಕಾಶ ಸಿಕ್ಕರೆ ಚೆನ್ನಾಗಿರುತ್ತೆ. ಯಾಕಂದ್ರೆ, ಬೆಟ್ಟದ ಹೂವು ಸಿನಿಮಾ ಮಾಡುವ ವೇಳೆ ಅವರ ತಂಗಿ ಪಾತ್ರ ಮಾಡಬೇಕಿತ್ತು. ಆದರೆ, ಅವರಿಗಿಂತ ಸ್ವಲ್ಪ ಎತ್ತರ ಇದ್ದ ಕಾರಣ, ನನಗೆ ಆ ಅವಕಾಶ ಮಿಸ್ ಆಗಿತ್ತು'' ಎಂದು ಹೇಮಾ ಪ್ರಭಾತ್ ಈಗಿನ ನಟರ ಬಗ್ಗೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

  English summary
  Senior Actress Hema Prabhath want to act with this superstar of kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X