For Quick Alerts
  ALLOW NOTIFICATIONS  
  For Daily Alerts

  'ಯಶ್'ಗಾಗಿ ಸ್ಪೆಷಲ್ ವಿಡಿಯೋ ಡೆಡಿಕೇಟ್ ಮಾಡಿದ ವಿಶಾಲ್

  |

  ರಾಕಿಂಗ್ ಸ್ಟಾರ್, ರಾಮಾಚಾರಿ, ಮಾಸ್ಟರ್ ಪೀಸ್, ರಾಜಾಹುಲಿಯ ಖದರ್ ಏನು ಅಂತ ಕರ್ನಾಟಕಕ್ಕೆ ಗೊತ್ತು. ತಮಿಳುನಾಡು, ಆಂಧ್ರದಲ್ಲೂ ಕೆಲವರಿಗೆ ಗೊತ್ತು ಅಂದುಕೊಳ್ಳಿ. ಆದ್ರೆ, ಪರಭಾಷಿಗರಿಗೆ ಹೆಚ್ಚಾಗಿ ಯಶ್ ಬಗ್ಗೆ ಗೊತ್ತಿಲ್ಲ.

  ಅದನ್ನ ಗೊತ್ತು ಮಾಡುವ ಉದ್ದೇಶದಿಂದ ತಮಿಳು ನಟ ವಿಶಾಲ್ ವಿಶೇಷವಾದ ವಿಡಿಯೋವೊಂದನ್ನ ತಯಾರಿಸಿದ್ದಾರೆ. ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಾರು, ಅವರು ಆ ಪಟ್ಟಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನ ಐದು ನಿಮಿಷಗಳ ವಿಡಿಯೋ ಮೂಲಕ ತಮಿಳುನಾಡಿನ ಜನತೆಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

  'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

  ಹೌದು, ಬಸ್ ಕಂಡಕ್ಟರ್ ಮಗನೊಬ್ಬ ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ನಟನಾದ ಕಥೆಯನ್ನ ಹೇಳಲಾಗಿದೆ. ಮೊಗ್ಗಿನ ಮನಸ್ಸು ಚಿತ್ರದಿಂದ ಆರಂಭವಾದ ಸಿನಿಪಯಣ ಈಗ ಕೆಜಿಎಫ್ ವರೆಗೂ ಹೇಗೆ ಸಾಗಿದೆ ಎಂಬುದನ್ನ ಪ್ರಸ್ತಾಪಿಸಲಾಗಿದೆ.

  ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್

  ಓರ್ವ ನಟನಾಗಿ ಮಾತ್ರವಲ್ಲದೇ ಯಶೋಮಾರ್ಗದ ಮೂಲಕ ಸಮಾಜಿಕ ಕೆಲಸಗಳು, ರೈತರಿಗೆ ನೆರವಾಗುವಂತಹ ಕೆಲಸಗಳಲ್ಲಿ ಯಶ್ ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನ ತಮಿಳು ಜನಕ್ಕೆ ತಿಳಿಸಿದ್ದಾರೆ.

  ಕೆಜಿಎಫ್ ರೆಸ್ಪಾನ್ಸ್ ನೋಡಿ ಚಿತ್ರಮಂದಿರ ಹೆಚ್ಚಿಸಿದ ತಮಿಳುನಾಡು.!

  ಈ ವಿಡಿಯೋದಿಂದ ಯಶ್ ಬಗ್ಗೆ ಅನೇಕ ವಿಷ್ಯಗಳನ್ನ ತಮಿಳು ಜನರು ತಿಳಿದುಕೊಂಡಿದ್ದಾರೆ. ಯಶ್ ಅವರ ಸಾಧನೆ ಮತ್ತು ಛಲಕ್ಕೆ ಹ್ಯಾಟ್ಸಾಪ್ ಹೇಳಿದ್ದಾರೆ.

  ಸದ್ಯ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡು ನೂರು ಕೋಟಿ ಗಳಿಸಿದೆ. ತಮಿಳಿನಲ್ಲೂ ಕೆಜಿಎಫ್ ರಿಲೀಸ್ ಆಗಿದ್ದು, ಅಲ್ಲಿಯೂ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

  English summary
  Tamil actor vishal's vishal film factory presented of special video of kannada actor Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X