Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾ ಕ್ಷೇತ್ರದಲ್ಲಿ ರವಿ ಬೆಳಗೆರೆ ಹೆಜ್ಜೆ ಗುರುತು
ಖ್ಯಾತ ಪತ್ರಕರ್ತ, ನಿರೂಪಕ, ಲೇಖಕ, ಕಾದಂಬರಿಕಾರ, ಚಿತ್ರಕಥೆ ಬರಹಗಾರ, ನಟ, ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕ, ಅಲ್ಲದೆ 'ಪ್ರಾರ್ಥನಾ ಶಾಲೆ'ಯ ಸಂಸ್ಥಾಪಕ ಕೂಡ ಆಗಿದ್ದ ರವಿ ಬೆಳಗೆರೆ ಇನ್ನು ನೆನಪು ಮಾತ್ರ.
ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ಅಕ್ಷರ ಸಾಂಗತ್ಯದಲ್ಲಿ ರವಿ ಬೆಳಗೆರೆ ಪ್ರಭಾವಿಸದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಾಗಲ್ಲ. ಹೀಗಿರುವಾಗ ಸಿನಿಮಾ ಕ್ಷೇತ್ರ ಅವರಿಂದ ಹೊರಗುಳಿಯಲು ಸಾಧ್ಯವಿಲ್ಲ. ರವಿ ಬೆಳಗೆರೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಚಿತ್ರರಂಗದ ಘಟಾನುಘಟಿಗಳ ಜೊತೆ ನಂಟು ಹೊಂದಿದ್ದರು.
380
ರೂಪಾಯಿಯನ್ನ
ಇಟ್ಟುಕೊಂಡು
ಬೆಂಗಳೂರಿಗೆ
ಬಂದ
ರವಿ
ಬೆಳಗೆರೆ
ಇಂದು
ಕೋಟ್ಯಧೀಶ್ವರ.!
ಅಷ್ಟೆಯಲ್ಲ ಕೆಲವು ಸಿನಿಮಾಗಳಲ್ಲಿಯೂ ನಟಿಸಿುವ ಮೂಲಕ ಬೆಳ್ಳೆ ಪರದೆ ಮೇಲು ರಾರಾಜಿಸಿದ್ದಾರೆ. ಆದರೆ ರವಿ ಬೆಳಗೆರೆ ನಟನಾಗಿ ಖ್ಯಾತಿಗಳಿಸಲು ಸಾಧ್ಯವಾಗಿಲ್ಲ. ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾ ಮೂಲಕ ರವಿ ಬೆಳಗೆರೆ ಬೆಳ್ಳೆ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ ಶಿವರಾಜ್ ಕುಮಾರ್ ಅಭಿನಯದ ಮಾದೇಶ, ವಾರಸ್ದಾರ, ಡೆಡ್ಲಿ ಸೋಮ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೆಲವು ಸಿನಿಮಾಗಳನ್ನು ಮಾಡಿದರೂ ಸಹ ಬಣ್ಣದ ಲೋಕದಲ್ಲಿ ರವಿ ಬೆಳಗೆರೆ ಯಶಸ್ಸು ಕಾಣಲಿಲ್ಲ. ಸಾಕಷ್ಟು ಸಿನಿಮಾಗಳಿಗೆ ಆಫರ್ ಬಂದರೂ ರವಿ ಬೆಳಗೆರೆ ಮತ್ತೆ ಬಣ್ಣ ಹಚ್ಚುವ ಆಸಕ್ತಿ ತೋರಿಲ್ಲ. ಒಂದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ ಎಂದು ರವಿ ಬೆಳಗೆರೆ ಅಭಿನಯದ ಕಡೆ ಹೆಚ್ಚು ಒಲವು ತೋರಿಲ್ಲ. ಆದರೆ ಚಿತ್ರರಂಗದ ಜೊತೆಗಿನ ಅವರ ನಂಟು ದೂರವಾಗಿರಲಿಲ್ಲ.
ಸಿನಿಮಾ
ಮಂದಿ
v/s
ರವಿ
ಬೆಳಗೆರೆ:
ಹಲವು
ವಿವಾದಗಳು
Recommended Video
ಸಿನಿಮಾ ಜೊತೆಗೆ ರವಿ ಬೆಳಗೆರೆ ಧಾರಾವಹಿಯಲ್ಲೂ ನಟಿಸಿದ್ದಾರೆ. ರವಿ ಬೆಳಗೆರೆ ಅಳಿಯ ಸ್ರೀನಗರ ಕಿಟ್ಟಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚಿಗೆ ರವಿ ಬೆಳಗೆರೆ ಅವರ ಒಂದು ಕಾದಂಬರಿಯನ್ನು ಸಿನಿಮಾ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿತ್ತು. ಭೂಗತ ಮಾಫಿಯಾ, ರೌಡಿಸಂ, ಕ್ರೌರ್ಯದ ಬಗ್ಗೆ ಇರುವ ಒಮರ್ಟಾ ಕಾದಂಬರಿ ಸಿನಿಮಾವಾಗಿ ತೆರೆಮೇಲೆ ಬರುತ್ತಿದೆ ಎನ್ನಲಾಗಿತ್ತು. ಗುಳ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ರವಿ ಬೆಳಗೆರೆ ಸಹ ಒಪ್ಪಿಕೊಂಡಿದ್ದರಂತೆ.