For Quick Alerts
  ALLOW NOTIFICATIONS  
  For Daily Alerts

  'ವೇದ' ಶಿವಣ್ಣ ಆರ್ಭಟಕ್ಕೆ ಕ್ಷಣಗಣನೆ: ರಾಜ್ಯಾದ್ಯಂತ ಭರ್ಜರಿ ಸಂಭ್ರಮಾಚರಣೆಗೆ ಶಿವ ಸೈನ್ಯ ಸಿದ್ಧ!

  |

  ವರ್ಷಾಂತ್ಯಕ್ಕೆ 'ವೇದ' ಆಗಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಆಕ್ಷನ್ ಎಂಟರ್‌ಟೈನರ್ 'ವೇದ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ(ಡಿಸೆಂಬರ್ 23) ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

  ಗೀತಾ ಪಿಕ್ಚರ್ಸ್ ಹಾಗೂ ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಈ 'ವೇದ' ಸಿನಿಮಾ ನಿರ್ಮಾಣ ಆಗಿದೆ. ಎ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬರುತ್ತಿರುವ 4ನೇ ಸಿನಿಮಾ ಇದು. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅದಿತಿ ಅರುಣ್ ಸಾಗರ್ ಹಾಗೂ ಉಮಾಶ್ರೀ ಚಿತ್ರದ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.

  Vedha Booking Open: ಬೆಳಗ್ಗೆ 5, 6, 6.30ಕ್ಕೆ ಎಲ್ಲೆಲ್ಲಿ ಶೋ? ಬುಕ್ಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ?Vedha Booking Open: ಬೆಳಗ್ಗೆ 5, 6, 6.30ಕ್ಕೆ ಎಲ್ಲೆಲ್ಲಿ ಶೋ? ಬುಕ್ಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ?

  ಶಿವಣ್ಣನ ಸಿನಿಮಾ ಅಂದರೆ ದೊಡ್ಮೆನೆ ಅಭಿಮಾನಿಗಳಿಗೆ ಹಬ್ಬ. ಥಿಯೇಟರ್‌ಗಳಲ್ಲಿ 'ವೇದ' ಚಿತ್ರವನ್ನು ಕೂಡ ಬಹಳ ಸಂಭ್ರಮದಿಂದ ಸ್ವಾಗತಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಯಾವ ಯಾವ ಥಿಯೇಟರ್‌ಗಳಲ್ಲಿ ಹೇಗೆ ಸಂಭ್ರಮಾಚರಣೆ ಮಾಡಬೇಕು ಎನ್ನುವ ಬಗ್ಗೆ ಸಿದ್ಧತೆ ನಡೆದಿದೆ.

  ಶಿವ ಸೈನ್ಯದಿಂದ ಸಂಭ್ರಮಾಚರಣೆ

  ಶಿವ ಸೈನ್ಯದಿಂದ ಸಂಭ್ರಮಾಚರಣೆ

  ರಾಜ್ಯಾದ್ಯಂತ 300ಕ್ಕೂ ಅಧಿಕ ಸ್ಟ್ರೀನ್‌ಗಳಲ್ಲಿ 'ವೇದ' ಸಿನಿಮಾ ರಿಲೀಸ್ ಆಗ್ತಿದೆ. 5 ದಿನ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿತ್ತು. ಈಗಾಗಲೇ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಟಿಕೆಟ್ ಬುಕ್ ಮಾಡಿಕೊಂಡು ಕಾಯುತ್ತಿದ್ದಾರೆ. ಶಿವಸೈನ್ಯ ಅಭಿಮಾನಿ ಸಂಘದಲ್ಲಿ ವಿವಿಧ ಜಿಲ್ಲೆಗಳ ಥಿಯೇಟರ್‌ ಅಂಗಳದಲ್ಲಿ ಸಂಭ್ರಮಾಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. 'ವೇದ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ.

  ಎಲ್ಲೆಲ್ಲಿ ಹೇಗೆ ಸಂಭ್ರಮಾಚರಣೆ?

  ಎಲ್ಲೆಲ್ಲಿ ಹೇಗೆ ಸಂಭ್ರಮಾಚರಣೆ?

  ಬೆಂಗಳೂರಿನ ಶಿವಸೈನ್ಯ ಅಭಿಮಾನಿ ಸಂಘ ನರ್ತಕಿ ಥಿಯೇಟರ್‌ನಲ್ಲಿ ಬೆಳಗ್ಗೆ 10.30 ಶೋಗೂ ಮೊದಲು ಪರದೆ ಮುಂದೆ ಸಂಭ್ರಮಾಚರಣೆ ಮಾಡಲಿದ್ದಾರೆ. ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಿವಸೈನ್ಯ ತಂಡ ಶಿವಣ್ಣನ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ. ಚಾಮರಾಜನಗರದಲ್ಲಿ ಶಿವಣ್ಣನ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ. ಇನ್ನು ನೆಲಮಂಗಲದ ರೂಪ ಥಿಯೇಟರ್‌ನಲ್ಲಿ ಶಿವಣ್ಣನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ, ಹೂವಿನ ಹಾರ ಹಾಕಿ ಪಟಾಕಿ ಸಿಡಿಸಲಾಗುತ್ತದೆ. ಶೋ ಮುಗಿದ ಬಳಿಕ ಅಭಿಮಾನಿಗಳಿಗೆ ಬಿರಿಯಾನಿ ಹಂಚಲು ಸಿದ್ಧತೆ ನಡೆಸಿದ್ದಾರೆ.

  ಆಟೋಗಳಲ್ಲಿ 'ವೇದ' ಪ್ರಚಾರ

  ಆಟೋಗಳಲ್ಲಿ 'ವೇದ' ಪ್ರಚಾರ

  ಈಗಾಗಲೇ 'ವೇದ' ಚಿತ್ರಕ್ಕಾಗಿ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ಶಿವಣ್ಣನ ಮನೆಯಲ್ಲೇ ಪ್ರೀ ರಿಲೀಸ್‌ ಈವೆಂಟ್ ಮಾಡಲಾಗಿತ್ತು. ಹಂಪಿನಗರದ ಕ್ರೀಡಾಂಗಣದಲ್ಲಿ ಆಟೋಗಳನ್ನ ವೇದ ಅಕ್ಷರ ರೀತಿಯಲ್ಲಿ ನಿಲ್ಲಿಸಿ ಅಭಿಮಾನಿಗಳು ಪ್ರಚಾರ ಮಾಡಿದ್ದಾರೆ. ಅ ವಿಡಿಯೋ ಈ ವೈರಲ್ ಆಗಿದೆ. ಇನ್ನು ಚಿತ್ರತಂಡ ಕೆಜಿ ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಬರ್ತಿದೆ.

  60ರ ದಶಕದ ಕಥೆ

  60ರ ದಶಕದ ಕಥೆ

  ಈ ಬಾರಿ ಫ್ಯಾಂಟಸಿ, ಮೈಥಾಲಜಿ ಬಿಟ್ಟು 60 ದಶಕದಲ್ಲಿ ನಡೆದ ಒಂದು ಕಾಲ್ಪನಿಕ ಕಥೆಯನ್ನು ವೇದ ಚಿತ್ರದಲ್ಲಿ ಹೇಳಲಾಗ್ತಿದೆ. ಶಿವಣ್ಣ 2 ಶೇಡ್‌ಗಳಿರೋ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ರಿವೇಂಜ್‌ ಡ್ರಾಮಾದಲ್ಲಿ ಶಿವಣ್ಣನ ಜೊತೆಗೆ ಅದಿತಿ, ಶ್ವೇತ ಚೆಂಗಪ್ಪ, ವೀಣಾ ಪೊನ್ನಪ್ಪ ಕೂಡ ಪವರ್‌ಫುಲ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಚಿತ್ರಕ್ಕಿದೆ. 'ವೇದ' ಚಿತ್ರದ ಪ್ರೀಮಿಯರ್ ಶೋಗಳು ನಡೀತಿಲ್ಲ. ಆದರೆ ಬೆಳಗ್ಗೆ 5 ಗಂಟೆಗೆ ಹಲವೆಡೆ ಮೊದಲ ಪ್ರದರ್ಶನ ಶುರುವಾಗಲಿದೆ.

  English summary
  Here’s how Fans plans on making Shivarajkumar’s Vedha Movie Release special. Action entertainer movie is all set to release This Week. Know more.
  Thursday, December 22, 2022, 17:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X