»   » ರಿಯಲ್‌ ಸ್ಟಾರ್‌ಗೆ ರಿಲೀಫ್; ಹೈಕೋರ್ಟ್‌ನಿಂದ ಸರ್ಕಾರದ ಮೇಲ್ಮನವಿ ವಜಾ

ರಿಯಲ್‌ ಸ್ಟಾರ್‌ಗೆ ರಿಲೀಫ್; ಹೈಕೋರ್ಟ್‌ನಿಂದ ಸರ್ಕಾರದ ಮೇಲ್ಮನವಿ ವಜಾ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇಂದು(ಸೋಮವಾರ) ವಜಾಗೊಳಿಸಿದೆ. ಈ ಪ್ರಕರಣದಿಂದಾಗಿ ನಟ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ನಟ-ನಿರ್ದೇಶಕ ಉಪೇಂದ್ರ ಅವರು 2005 ರಲ್ಲಿ ತಾವರೆಕೆರೆಯ ಬ್ಯಾಲಾಳುವಿನಲ್ಲಿ 17 ಎಕರೆ 10 ಗುಂಟೆ ಜಮೀನು ಖರೀದಿಸಿದ್ದರು. ಇದು ವ್ಯವಸಾಯದ ಜಮೀನು ಆದ ಕಾರಣ, ಉಪೇಂದ್ರ ಅವರು ಈ ಭೂಮಿ ಖರೀದಿಸಿರುವುದು ಭೂಕಂದಾಯ ಕಾಯ್ದೆ 79ಎ, ಬಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಉಪವಿಭಾಗಾಧಿಕಾರಿ ಅವರು ಜಮೀನನ್ನು ವಶಪಡಿಸಿಕೊಂಡಿದ್ದರು.

High Court Rejects Review Petition by Govt against Actor Upendra Over Land Issue

ಉಪೇಂದ್ರ ಅವರು ಜಮೀನು ಖರೀದಿಸಿದ್ದ ಈ ಪ್ರಕರಣ ಕೆಲ ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದಾಗ, ಉಪವಿಭಾಗಾಧಿಕಾರಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಪುನಃ ರಾಜ್ಯ ಸರ್ಕಾರ ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಸಹ ಹೈಕೋರ್ಟ್ ಈಗ ವಜಾಗೊಳಿಸಿದೆ.

ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್ ತೀರ್ಪಿನಲ್ಲಿ, ' ಉಪೇಂದ್ರ ಅವರು ಜಮೀನನ್ನು ಕಾನೂನಿನ ಪ್ರಕಾರ ಖರೀದಿಸಿದ್ದಾರೆ, ಯಾವುದೇ ಕಾನೂನು ಬಾಹಿರ ನಿಯಮಗಳು ಇದಕ್ಕೆ ಕನೆಕ್ಟ್ ಆಗುವುದಿಲ್ಲ' ಎಂದು ಹೇಳಲಾಗಿದೆ.

English summary
High Court Rejects Review Petition by Govt against Actor Upendra Over Land Issue

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada