Don't Miss!
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಿಜಾಬ್ ವಿವಾದ: ರಮ್ಯಾ, ಸಂಜನಾ ಗಲ್ರಾನಿ ಏನಂದ್ರು?
ಕರ್ನಾಟಕದ ಕೆಲವು ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ v/s ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ. ಹಲವು ಕಡೆ ಕಲ್ಲು ತೂರಾಟ, ಲಾಠಿ ಚಾರ್ಜ್ ಆಗಿದೆ. ಹಲವು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಶಿಕ್ಷಕರು, ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರವು ಮೂರು ದಿನಗಳ ಕಾಲ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಈ ವಿವಾದ ಉಗ್ರಸ್ವರೂಪ ಪಡೆದುಕೊಳ್ಳುತ್ತಿದ್ದ ಹಾಗೆ ಒಬ್ಬೊಬ್ಬರೇ ಈ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಕನ್ನಡದ ನಟಿ ರಮ್ಯಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹಿಜಾಬ್ ವಿವಾದದ ಬಗ್ಗೆ ಸಿನಿಮಾ ತಾರೆಯರೂ ಕೂಡ ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ರಮ್ಯಾ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ರಮ್ಯಾ ಜೊತೆಗೆ ನಟಿ ಸಂಜನಾ ಗಲ್ರಾನಿ, ನಟ ಕಿರಣ್ ಶ್ರೀನಿವಾಸ್ ಅವರು ಕೂಡ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ಗಳ ಬಗ್ಗೆಯೂ ಜನ ಪರ ವಿರೋಧ ಚರ್ಚಗೆ ಇಳಿದು ಬಿಟ್ಟಿದ್ದಾರೆ. ಹಾಗಿದ್ದರೆ ಈ ವಿಚಾರವಾಗಿ ರಮ್ಯಾ ಅವರು ಹಂಚಿಕೊಂಡ ಎರಡು ಪೋಸ್ಟ್‌ಗಳನ್ನು ಏನೇನಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಇದರಿಂದ ತುಂಬಾ ಬೇಸರ ಆಗುತ್ತಿದೆ: ನಟಿ ರಮ್ಯಾ!
ಮೊದಲನೆಯದಾಗಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಿಜಾಬ್ ವಿಚಾರವಾಗಿ ನಡೆದ ಗಲಭೆಯ ವಿಡಿಯೋ. ಇದರಲ್ಲಿ ಒಂದು ಕಡೆ ಶಾಲಾ ಸಮವಸ್ತ್ರದಲ್ಲಿ ಇರುವ ವಿದ್ಯಾರ್ಥಿಗಳು ಇದ್ದಾರೆ. ಮತ್ತೊಂದು ಕಡೆ ಹಿಜಾಬ್, ಬುರ್ಕಾ ತೊಟ್ಟ ವಿದ್ಯಾರ್ಥಿಗಳು ಇದ್ದಾರೆ. ಇದನ್ನು ಹಂಚಿಕೊಂಡು ನಟಿ ರಮ್ಯಾ "ಭಾರತೀಯ ಯುವ ಪೀಳಿಗೆ ಹೀಗೆ ಬೇರೆ ಆಗುತ್ತಿವುದನ್ನು ನೋಡಿದರೆ ಬಹಳ ಬೇಸರ ಆಗುತ್ತಿದೆ." ಎಂದು ಬರೆದು ಕೊಂಡಿಡದ್ದಾರೆ.

ಎಲ್ಲಿಂದ ಶುರುವಾಯ್ತು ಈ ನಾನ್ಸ್‌ಸೆನ್ಸ್: ರಮ್ಯಾ!
ಇನ್ನು ನಟಿ ರಮ್ಯಾ ಈ ಬಗ್ಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮನಸ್ಥಿತಿ ಹೇಗೆ ಇರುತ್ತದೆ ಎನ್ನುವುದನ್ನು ಈ ಪೋಸ್ಟ್ ಹೇಳುತ್ತದೆ. " ನಮಗೆ ನಮ್ಮ ಪಕ್ಕದಲ್ಲಿ ನಿಂತಿರುವ ವಿದ್ಯಾರ್ಥಿ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ, ಮತ್ತಿತ್ತರೆ ಯಾವ ಧರ್ಮದವರು ಎಂದು ಗೊತ್ತಿರುತ್ತಿರಲಿಲ್ಲ.. ನಮಗೆ ಗೊತ್ತಿದ್ದದ್ದು ಇಷ್ಟೇ, ಯಾರ ಬಳಿ ರುಚಿಕರವಾದ ಊಟದ ಬಾಕ್ಸ್ ಇದೆ, ಯಾರು ತುಂಬಾ ದೂರಕ್ಕೆ ಚೆಂಡು ಒದೆಯುತ್ತಾರೆ, ಯಾರು ಪುಸ್ತಕದ ಹುಳು ಇನ್ನು ಹೆಚ್ಚೆಚ್ಚು... ಆದರೆ ಈ ಅಸಂಬದ್ಧತೆ ಎಲ್ಲಿಂದ ಶುರುವಾಗಿಯ್ತು.? ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.

'ಪೆರಿಯಾರ್' ಸಂದೇಶ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ!
ಇದೇ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ನಟಿ ಸಂಜನಾ ಗಲ್ರಾನಿ ಕೂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅವರು ತಮ್ಮ ಪೋಸ್ಟ್ ಮೂಲಕ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಆಯ್ಕೆ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ಪೆರಿಯಾರ್ ಅವರ ಪ್ರಸಿದ್ಧ ಸಂದೇಶ ಹೀಗಿದೆ. "ಮಹಿಳೆಯರು ಯಾವ ಬಟ್ಟೆ ಧರಿಸಬೇಕು ಎಂದು ಅವರೇ ನಿರ್ಧಾರ ಮಾಡಲಿ. ಅವರ ಅಲ್ಮೆರಾದಲ್ಲಿ ನಿಮಗೇನು ಕೆಲಸ..?".

ಇದೊಂದು ರಾಜಕೀಯ ಆಟ ಎಂದ ನಟ ಕಿರಣ್ ಶ್ರೀನಿವಾಸ್!
ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯ ಬಗ್ಗೆ ನಟ ಕಿರಣ್ ಶ್ರೀನಿವಾಸ್ ಅವರು ಕೂಡ ತಮ್ಮ, ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ಇದೊಂದು ರಾಜಕೀಯ ಆಟ ಎಂದಿದ್ದಾರೆ. "ಬಹಳಷ್ಟು ಜನ ವಿದ್ಯಾರ್ಥಿಗಳು (ಕರ್ನಾಟಕ) ಮೊದಲ ಬಾರಿಗೆ ಮತದಾರರಾಗಲಿದ್ದಾರೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸಿ, ಈ ಮೊದಲ ಮತದಾರರು ಹೇಗೆ ರಾಜಕೀಯ ಪ್ರಚಾರಕ್ಕೆ ಒಳಗಾಗುತ್ತಾರೆ ಎಂದು. ಮತ್ತು ಇಲ್ಲಿ ರಾಜಕೀಯ ಮಾಡಿ ರಾಜಕಾರಣಿಗಳು ಗೆಲ್ಲುತ್ತಾರೆ. ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಾರೆ." ಎಂದು ಬರೆದುಕೊಂಡಿದ್ದಾರೆ.