twitter
    For Quick Alerts
    ALLOW NOTIFICATIONS  
    For Daily Alerts

    ಧನಂಜಯ್‌ನ 'ಜಮಾಲಿಗುಡ್ಡ'ದಲ್ಲಿ 2ನೇ ವಿಶ್ವಯುದ್ಧ : ಡಾಲಿ 'ಹಿರೋಷಿಮಾ', ಯಶ್ 'ನಾಗಸಾಕಿ'!

    |

    ಹಿರೋಷಿಮಾ ಹಾಗೂ ನಾಗಸಾಕಿ ಜಪಾನ್‌ನ ಎರಡು ಜಗತ್ಪ್ರಸಿದ್ಧ ನಗರಗಳು. ಶಿಕ್ಷಣ ಪಡೆದ ಪ್ರತಿಯೊಬ್ಬ ಪ್ರಜೆಗೂ ಜಪಾನ್‌ನ ಈ ಎರಡೂ ನಗರಗಳ ಹಿನ್ನೆಲೆ ಚೆನ್ನಾಗಿ ಗೊತ್ತಿರುತ್ತೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಪರಮಾಣು ದಾಳಿ ನಡೆಸಿದ ಆ ಎರಡು ನಗರಗಳು ಇವನೇ.

    ಪರಮಾಣ ದಾಳಿಯನ್ನು ಮುಂದಿಟ್ಟುಕೊಂಡೇ ಇಂದಿಗೂ ಹಿರೋಷಿಮಾ ಹಾಗೂ ನಾಗಸಾಕಿ ನಗರಗಳನ್ನು ಗುರುತಿಸುತ್ತಾರೆ. ಕನ್ನಡಿಗರಿಗೂ ಈ ಎರಡು ನಗರಗಳು ಬಹಳ ಚಿರಪರಿಚಿತ. ಈಗ ಈ ಎರಡು ನಗರಗಳ ಹೆಸರನ್ನೇ ಕನ್ನಡ ಸಿನಿಮಾವೊಂದರ ಎರಡು ಪಾತ್ರಗಳಿಗೆ ಇಡಲಾಗಿದೆ.

    'ಉತ್ತರಕಾಂಡ' ಕನ್ನಡದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್'? ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ!'ಉತ್ತರಕಾಂಡ' ಕನ್ನಡದ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್'? ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ!

    ಡಾಲಿ ಧನಂಜಯ್ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಸಿನಿಮಾದಲ್ಲಿ ಎರಡು ಕ್ಯಾರೆಕ್ಟರ್‌ಗಳ ಹೆಸರು 'ಹೀರೊಷಿಮಾ' ಹಾಗೂ 'ನಾಗಸಾಕಿ'. ಅಷ್ಟಕ್ಕೂ ಅಪ್ಪಟ ಕನ್ನಡ ಸಿನಿಮಾದ ಎರಡು ಪಾತ್ರಗಳಿಗೆ ಈ ಹೆಸರನ್ನೇ ಇಟ್ಟಿದ್ದೇಕೆ? ಅನ್ನೋದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

    ಡಾಲಿ 'ಹಿರೋಷಿಮಾ', ಯಶ್ 'ನಾಗಸಾಕಿ'!

    ಡಾಲಿ 'ಹಿರೋಷಿಮಾ', ಯಶ್ 'ನಾಗಸಾಕಿ'!

    'ಹೆಡ್ ಬುಷ್' ಸಿನಿಮಾ ಬಳಿಕ ರಿಲೀಸ್‌ಗೆ ರೆಡಿಯಾಗಿರೋ ಡಾಲಿ ಧನಂಜಯ್ ಹೊಸ ಸಿನಿಮಾ 'ಒನ್ಸ್ ಅಪನ್‌ ಎ ಟೈಮ್ ಜಮಾಲಿಗುಡ್ಡ'. ಈ ಸಿನಿಮಾ ಇನ್ನೇನು ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆಗಲೇ ಸಿನಿಮಾ ಬಗ್ಗೆ ಒಂದೊಂದೇ ಸುಳಿವುಗಳನ್ನು ಬಿಟ್ಟುಕೊಡುತ್ತಿದೆ. ಅಂದ್ಹಾಗೆ ಡಾಲಿ ಪಾತ್ರದ ಹೆಸರು 'ಹಿರೋಷಿಮಾ' ಹಾಗೇ ಯಶ್ ಶೆಟ್ಟಿ ಹೆಸರು 'ನಾಗಸಾಕಿ'. ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿರೋದು ಈ ಪಾತ್ರಗಳ ಹಿನ್ನೆಲೆ ಸಿನಿಮಾದಲ್ಲಿ ರೋಚಕವಾಗಿದೆ.

    ಹಿರೋಷಿಮಾ, ನಾಗಸಾಕಿ ಹೆಸರುಗಳೇ ಯಾಕೆ?

    ಹಿರೋಷಿಮಾ, ನಾಗಸಾಕಿ ಹೆಸರುಗಳೇ ಯಾಕೆ?

    ಅಸಲಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಅಪ್ಪಟ ಕನ್ನಡದ ಸಿನಿಮಾ. ಇದರಲ್ಲಿ ಜಪಾನ್‌ ದೇಶದ ಎರಡು ನಗರಗಳ ಹೆಸರು ಯಾಕಿಟ್ರು ಅನ್ನೋದು ಇಂಟ್ರೆಸ್ಟಿಂಗ್ ಸ್ಟೋರಿ. ಇಲ್ಲಿ ಡಾಲಿ ಪಾತ್ರದ ಹೆಸರು 'ಹಿರೋಷಿಮಾ'. ಹಾಗೇ ಇನ್ನೊಂದು ನಟ ಯಶ್ ಶೆಟ್ಟಿ ಪಾತ್ರದ ಹೆಸರು 'ನಾಗಸಾಕಿ'. ಸಿನಿಮಾದಲ್ಲಿ ಧನಂಜಯ್ ಹಾಗೂ ಯಶ್ ಇಬ್ಬರೂ ಯಾವುದೋ ಕಾರಣಕ್ಕೆ ಜೈಲು ಸೇರಿತ್ತಾರೆ. ಅಲ್ಲಿ ಇಬ್ಬರ ಪರಿಚಯವಾಗುತ್ತೆ. ಅಲ್ಲಿ ಇಬ್ಬರಿಗೂ ಹಿರೋಷಿಮಾ ಹಾಗೂ ನಾಗಸಾಕಿ ಅನ್ನೋ ಹೆಸರನ್ನು ನಾಮಕರಣ ಮಾಡಲಾಗುತ್ತೆ. ಅಸಲಿಗೆ ಇದೇ ಹೆಸರು ಇಟ್ಟಿದ್ದು ಯಾಕೆ? ಅನ್ನೋದು ಸಿನಿಮಾದಲ್ಲಿ ರಿವೀಲ್ ಆಗಲಿದೆ.

    'ಜಮಾಲಿಗುಡ್ಡ'ದಲ್ಲಿ ಯಾರೆಲ್ಲಾ ಇದ್ದಾರೆ?

    'ಜಮಾಲಿಗುಡ್ಡ'ದಲ್ಲಿ ಯಾರೆಲ್ಲಾ ಇದ್ದಾರೆ?

    'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'ದಲ್ಲಿ ಕೇವಲ ಡಾಲಿ ಧನಂಜಯ್ ಹಾಗೂ ಯಶ್ ಶೆಟ್ಟಿ ಅಷ್ಟೇ ಇಲ್ಲ. ಇನ್ನೂ ಹಲವು ಪಾತ್ರಗಳು ವಿಶಿಷ್ಟ ಹೆಸರುಗಳಿಂದಲೇ ಗಮನ ಸೆಳೆಯುತ್ತಿದೆ. ಮೊಹಮ್ಮದ್ ಶಕೀಲ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ, ಪಾಯಲ್ ಪಾತ್ರದಲ್ಲಿ ಭಾವನಾ ರಾಮಣ್ಣ, ಜೋಸೆಫ್ ಡಿಸೋಜಾ ಪಾತ್ರದಲ್ಲಿ ನಂದ ಕಿಶೋರ್, ಎಸ್ ಐ ರೂಪ ಪಾತ್ರದಲ್ಲಿ ರುಶಿಕಾ ರಾಜ್, ಬಾಳೆ ಗೌಡನಾಗಿ ನಂದ ಗೋಪಾಲ್, ಪುಟ್‌ಲಿಂಗನಾಗಿ ಸಂತೋಷ ಹಾಗೂ ಚುಕ್ಕಿ ಪಾತ್ರದಲ್ಲಿ ಬೇಬಿ ಪ್ರಾಣ್ಯ ಪಿ ರಾವ್ ನಟಿಸಿದ್ದಾರೆ.

    'ಜಮಾಲಿಗುಡ್ಡ' ಈ ವರ್ಷದ ಕೊನೆಯ ಸಿನಿಮಾ

    'ಜಮಾಲಿಗುಡ್ಡ' ಈ ವರ್ಷದ ಕೊನೆಯ ಸಿನಿಮಾ

    ಡಾಲಿ ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಈ ವರ್ಷ ಬಿಡುಗಡೆಯಾಗುತ್ತಿರುವ ಕೊನೆಯ ಕನ್ನಡ ಸಿನಿಮಾ. ಹೀಗಾಗಿ ನಿರೀಕ್ಷೆಗಳು ಗರಿಗೆದರಿವೆ. ಅಲ್ಲದೆ ಡಾಲಿ ಧನಂಜಯ್ ಮತ್ತೊಂದು ವಿಶಿಷ್ಟವಾದ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 30ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಇದೇ ಸಿನಿಮಾ 'ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ' ಅನ್ನೋ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.

    'ರತ್ನನ್ ಪ್ರಪಂಚ' ಬಳಿಕ ಡಾಲಿ ಧನಂಜಯ್ ಹೊಸ ಅಧ್ಯಾಯ 'ಉತ್ತರಕಾಂಡ'!'ರತ್ನನ್ ಪ್ರಪಂಚ' ಬಳಿಕ ಡಾಲಿ ಧನಂಜಯ್ ಹೊಸ ಅಧ್ಯಾಯ 'ಉತ್ತರಕಾಂಡ'!

    English summary
    Hiroshima And Nagasaki Character Secret In Dhananjay Starrer Jamaligudda Movies, Know More.
    Wednesday, November 16, 2022, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X