»   » ಪ್ರಕಾಶ್ ರೈ ಅಭಿನಯದ ಸೂಪರ್ ಹಿಟ್ ಕನ್ನಡ ಚಿತ್ರಗಳು

ಪ್ರಕಾಶ್ ರೈ ಅಭಿನಯದ ಸೂಪರ್ ಹಿಟ್ ಕನ್ನಡ ಚಿತ್ರಗಳು

Posted By:
Subscribe to Filmibeat Kannada

ದಕ್ಷಿಣ ಕನ್ನಡದ ಪುತ್ತೂರು ಮೂಲದವರಾದ ಪ್ರಕಾಶ್ ರೈ ಕನ್ನಡದಲ್ಲಿ ಇದೇ ಹೆಸರಿನಲ್ಲಿ ಪ್ರಖ್ಯಾತರು, ಇತರ ಭಾಷೆಗಳಲ್ಲಿ ಪ್ರಕಾಶ್ ರಾಜ್ ಎಂದೇ ಫೇಮಸ್ . ಸಿನಿಮಾ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ದೂರದರ್ಶನದ ಧಾರವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸ್ಕೊಳ್ಳುತ್ತಿದ್ದ ಪ್ರಕಾಶ್ ರೈ'ಹರಕೆಯ ಕುರಿ' ಎನ್ನುವ ಚಿತ್ರದಲ್ಲಿ ನಟಿಸಿ ಪ್ರಶಂಸೆಗೆ ಒಳಗಾಗಿದ್ದರು.

ಹರಕೆಯ ಕುರಿ ಚಿತ್ರದಲ್ಲಿನ ಅಮೋಘ ನಟನೆಯ ನಂತರ ಪ್ರಕಾಶ್ ರೈ ಅವರನ್ನು ನಟಿ ಗೀತಾ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರಿಗೆ ಪರಿಚಯಿಸಿದರು. ಬಾಲಚಂದರ್ ಗರಡಿಯಲ್ಲಿ ಪಳಗಿದ ಮೇಲೆ ಪ್ರಕಾಶ್ ರೈಗೆ ಅಲ್ಲಿಂದ ಬಿಡುವು ಸಿಗದಷ್ಟು ಸಿನಿಮಾಗಳು ಬರಲಾರಂಭಿಸಿತು. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಪ್ರಕಾಶ್ ರಾಜ್ ಇಲ್ಲದ ಸಿನಿಮಾವೇ ಕಮ್ಮಿ ಎನ್ನುವ ಮಟ್ಟಿಗೆ ಅವರ ಮಾರುಕಟ್ಟೆ ಬೆಳೆದಿತ್ತು.

ಹಿಂದಿ, ಮಲಯಾಳಂ ಭಾಷೆಗಳಲ್ಲೂ ನಟಿಸಿರುವ ಪ್ರಕಾಶ್ ರೈ ಇದುವರೆಗೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷದಲ್ಲಿ ತಮ್ಮದೇ ಹೋಂ ಬ್ಯಾನರಿನಲ್ಲಿ 'ನಾನು ನನ್ನ ಕನಸು' ಕನ್ನಡ ಚಿತ್ರವನ್ನು ನಿರ್ಮಿಸಿದ್ದರು.

2008ರಲ್ಲಿ ತಮಿಳು ಕಾಂಚೀವರಂ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಒಲಿದಿತ್ತು. ತಮಿಳು, ತೆಲುಗಿನ ಚಿತ್ರಗಳಲ್ಲಿ ಪ್ರಕಾಶ್ ರೈ ಅವರಿಗೆ ಸಂದಿರುವ ರಾಜ್ಯ ಮತ್ತು ಫಿಲಂಫೇರ್ ಪ್ರಶಸ್ತಿಗಳು ಹಲವಾರು. ಕನ್ನಡದ ಮೇಲಿನ ಪ್ರೀತಿಗಾಗಿ ಪ್ರಕಾಶ್ ರೈ ಉತ್ತಮ ಕಥೆ, ಚಿತ್ರಕತೆ ಇದ್ದಲ್ಲಿ ಸಂಭಾವನೆ ಸ್ವೀಕರಿಸದೇ ನಟಿಸಿ ಹೃದಯವಂತಿಕೆ ಮೆರೆದ ಉದಾಹರಣೆಗಳೂ ಇವೆ. ಅವರು ನಟಿಸಿದ ಕೆಲವು ಪ್ರಮುಖ ಸೂಪರ್ ಹಿಟ್ ಕನ್ನಡ ಚಿತ್ರಗಳು ಸ್ಲೈಡಿನಲ್ಲಿ..

ರಾಮಾಚಾರಿ

1991ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಪ್ರಕಾಶ್ ರೈ ನಾಯಕಿ ಮಾಲಾಶ್ರೀ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರವಿಚಂದ್ರನ್ ಚಿತ್ರದ ನಾಯಕ.

ನಿಷ್ಕರ್ಷ

1994ರಲ್ಲಿ ಬಿಡುಗಡೆಯಾದ ಮತ್ತೊಂದು ಸೂಪರ್ ಹಿಟ್ ಚಿತ್ರ. ಡಾ. ವಿಷ್ಣುವರ್ಧನ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ ಜಾವೇದ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಾಗಮಂಡಲ

ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಭೂಮಿಕೆಯಲ್ಲಿದ್ದರು. 1997ರಲ್ಲಿ ಚಿತ್ರ ಬಿಡುಗಡೆಗೊಂಡಿತ್ತು. ಚಿತ್ರದಲ್ಲಿನ ನಟನೆಗಾಗಿ ಪ್ರಕಾಶ್ ರೈಗೆ ಪ್ರಶಸ್ತಿಗಳ ಸರಮಾಲೆಯೇ ಹರಿದು ಬಂದಿತ್ತು.

ಪ್ರೀತ್ಸೋದ್ ತಪ್ಪಾ

2001ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್, ಶಿಲ್ಪಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿದ್ದರು. ಪ್ರಕಾಶ್ ರೈ ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರೀತಿ ಪ್ರೇಮ ಪ್ರಣಯ

ಕವಿತಾ ಲಂಕೇಶ್ ನಿರ್ದೇಶನದ ಈ ಚಿತ್ರ 2003ರಲ್ಲಿ ಬಿಡುಗಡೆಯಾಯಿತು. ಅನಂತ್ ನಾಗ್, ಭಾರತಿ ವಿಷ್ಣುವರ್ಧನ್, ಅನು ಪ್ರಭಾಕರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ ಡಾ. ಅಶೋಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಜಯ್

ಮೆಹರ್ ನಿರ್ದೇಶನದ ಈ ಚಿತ್ರ 2006ರಲ್ಲಿ ಬಿಡುಗಡೆಯಾಯಿತು. ಪುನೀತ್ ರಾಜಕುಮಾರ್, ಅನುರಾಧಾ ಮೆಹ್ತಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ ವಿಲನ್ ಪಾತ್ರಧಾರಿ.

ನಾನು ನನ್ನ ಕನಸು

2010ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಪ್ರಕಾಶ್ ರೈ, ಅಮೂಲ್ಯ, ಸಿತಾರ ಪ್ರಮುಖ ಭೂಮಿಕೆಯಲ್ಲಿದ್ದರು. ತಮಿಳೂ ರಿಮೇಕ್ ಚಿತ್ರವಾಗಿರುವ ಈ ಚಿತ್ರವನ್ನು ಪ್ರಕಾಶ್ ರೈ ನಿರ್ದೇಶಿಸಿದ್ದರು.

ಪುಟ್ಟಕ್ಕನ ಹೈವೇ

2011ರಲ್ಲಿ ಬಿಡುಗಡೇಯಾದ ಬಿ ಸುರೇಶ್ ನಿರ್ದೇಶನದ ಚಿತ್ರ. ಶೃತಿ, ಪ್ರಕಾಶ್ ರೈ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ಮಾಪಕರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು.

English summary
Leading actor of Southern Film industry Prakash Rai's list of super hit movies in Kannada. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada