twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡಿದ ಗೃಹ ಸಚಿವರು

    By Bharath Kumar
    |

    ಬೆಂಗಳೂರಿನ ಹೆಬ್ಬಾಳ ಸಮೀಪದಲ್ಲಿರುವ 'ಮಾನ್ಯತ ಟೆಕ್ ಪಾರ್ಕ್'ನಿಂದ ಸ್ಥಳೀಯರಿಗೆ ಟ್ರಾಫಿಕ್ ಸಮಸ್ಯೆ ಆಗುತ್ತಿದೆ ಎಂದು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ದೂರು ನೀಡಿದ್ದರು.

    ಶಿವಣ್ಣನ ಮನವಿಗೆ ಸ್ಪಂದಿಸಿದ್ದ ರಾಮಲಿಂಗಾ ರೆಡ್ಡಿ ಅವರು ಇಂದು (ನವೆಂಬರ್ 9) ಮಾನ್ಯತ ಟೆಕ್ ಪಾರ್ಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಟ್ರಾಪಿಕ್ ಸಮಸ್ಯೆ ಆಗಲು ಕಾರಣವೇನು? ಅದಕ್ಕೆ ಪರಿಹಾರವೇನು ಮಾಡಬೇಕು ಎಂದು ಅಧಿಕಾರಿಗಳ ಜೊತೆ ಸ್ಥಳದಲ್ಲೇ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

    ಗೃಹ ಸಚಿವರನ್ನ ಭೇಟಿ ಮಾಡಿದ ಶಿವರಾಜ್ ಕುಮಾರ್ ದಂಪತಿಗೃಹ ಸಚಿವರನ್ನ ಭೇಟಿ ಮಾಡಿದ ಶಿವರಾಜ್ ಕುಮಾರ್ ದಂಪತಿ

    Home Minister Ramalinga reddy visit to manyata tech park

    ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು ''ರಸ್ತೆಯ ಅಗಲಿಕರಣ ಮಾಡಬಹುದು. ಬ್ರಿಡ್ಜ್ ನಿರ್ಮಾಣ ಮಾಡಿದ್ರೆ ಅನುಕೂಲವಾಗಬಹುದು. ಸಂಜೆ ವೇಳೆ ಒನ್ ವೇ ಮಾಡಿದ್ರೆ ಸಹಕಾರಿ ಆಗಬಹುದು ಎಂಬ ಸಲಹೆಯನ್ನ ಅಧಿಕಾರಿಗಳು ನೀಡಿದ್ದಾರೆ. ಹೀಗಾಗಿ, ಜಾರ್ಜ್ ಮತ್ತು ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಇನ್ನು ಶಿವರಾಜ್ ಕುಮಾರ್ ಮಾತನಾಡಿ ''ಇದು ನಮ್ಮ ವೈಯಕ್ತಿಕ ವಿಚಾರವಲ್ಲ. ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಆರಾಮಾಗಿ ಇರಬೇಕು ಎನ್ನುವ ದೃಷ್ಠಿ. ಟೆಕ್ ಪಾರ್ಕ್ ವಿರುದ್ಧ ಯಾವುದು ಆರೋಪ ಮಾಡ್ತಿಲ್ಲ. ಜನರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶ ಅಷ್ಟೇ'' ಎಂದು ಪ್ರತಿಕ್ರಿಯಿಸಿದರು.

    English summary
    Home Minister Ramalinga reddy visit to manyata tech park after Kannada actor shiva rajkumar request.
    Thursday, November 9, 2017, 18:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X