twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಪ್ರೇಮಿಗಳಿಗೆ ಮತ್ತೆ ನಿರಾಸೆ: ಫ್ಯಾಕ್ಟ್ ಚೆಕ್‌ನಲ್ಲಿ ಹೊರಬಿದ್ದ ಮಾಹಿತಿ

    |

    ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ್ಮೇಲೆ ಸಿನಿಮಾರಂಗ ಸಂಪೂರ್ಣವಾಗಿ ಬಂದ್ ಆಗಿತ್ತು. ಶೂಟಿಂಗ್, ಕೆಲಸ, ಕಾರ್ಯಕ್ರಮಗಳು, ಚಿತ್ರಮಂದಿರ ಎಲ್ಲವೂ ಸ್ಥಗಿತವಾಗಿತ್ತು. ಇದೀಗ, ಚಿತ್ರೀಕರಣಕ್ಕೆ ಸರ್ಕಾರಗಳು ಅನುಮತಿ ನೀಡಿದೆ. ಧಾರಾವಾಹಿ, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳು ಶೂಟಿಂಗ್ ಆರಂಭಿಸಿದೆ.

    ಅರ್ಧಕ್ಕೆ ನಿಂತಿದ್ದ ಚಿತ್ರೀಕರಣ ಆರಂಭವಾಗಿದೆ ಎಂಬ ಖುಷಿ ಒಂದು ಕಡೆಯಾದರೆ, ಸಿನಿಮಾ ಮುಗಿಸಿ ಬಿಡುಗಡೆ ಮಾಡಬೇಕು ಎಂದುಕೊಂಡಿರುವ ಚಿತ್ರತಂಡಗಳಿಗೆ ಇನ್ನೂ ಆ ಸಂತಸ ಸಿಕ್ಕಿಲ್ಲ. ಅಕ್ಟೋಬರ್ 1 ರಿಂದ ಚಿತ್ರಮಂದರಿಗಳು ರೀ-ಓಪನ್ ಎಂಬ ಮಾಹಿತಿ ಕೇಂದ್ರ ಸರ್ಕಾರದಿಂದ ಹೊರಬಿದ್ದಿದೆ ಎಂದು ವರದಿಯಾಗಿದೆ. ಆದ್ರೀಗ, ಇದು ಸುಳ್ಳು ಎಂದು ಬಯಲಾಗಿದೆ. ಮುಂದೆ ಓದಿ.....

    ಸಿಎಂ ಭೇಟಿ ಮಾಡಿದ ಶಿವರಾಜ್ ಕುಮಾರ್ ನಿಯೋಗ: ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್! ಸಿಎಂ ಭೇಟಿ ಮಾಡಿದ ಶಿವರಾಜ್ ಕುಮಾರ್ ನಿಯೋಗ: ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್!

    ಅಕ್ಟೋಬರ್ 1ಕ್ಕೆ ತೆರೆಯಲ್ಲ ಚಿತ್ರಮಂದಿರ!

    ಅಕ್ಟೋಬರ್ 1ಕ್ಕೆ ತೆರೆಯಲ್ಲ ಚಿತ್ರಮಂದಿರ!

    ಅಕ್ಟೋಬರ್ 1 ರಿಂದ ದೇಶಾದ್ಯಂತ ಸಿನಿಮಾ ಮಂದಿರಗಳನ್ನು ತೆರೆಯಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದ್ದು, ಈ ಕುರಿತು ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಜೊತೆ ಚರ್ಚೆ ಸಹ ನಡೆಸಿದೆ ಎಂದು ಹೇಳಲಾಗಿತ್ತು. ಇನ್ನೇನೂ ಚಿತ್ರಮಂದಿರಗಳು ತೆರೆಯಲು ತಯಾರಿ ಸಹ ನಡೆಸಿದ್ದರು. ಆದ್ರೆ, ಈ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಯಾವುದೇ ನಿರ್ಧಾರವಿಲ್ಲ

    ಸದ್ಯಕ್ಕೆ ಯಾವುದೇ ನಿರ್ಧಾರವಿಲ್ಲ

    ಇದುವರೆಗೂ ಕೇಂದ್ರ ಗೃಹ ಇಲಾಖೆ ಕಡೆಯಿಂದ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಚರ್ಚೆಯೂ ನಡೆದಿಲ್ಲ, ಸೂಚನೆಯೂ ನೀಡಿಲ್ಲ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ಬಯಲಾಗಿದೆ.

    ಸಿನಿಪ್ರಿಯರಿಗೆ ಮತ್ತೆ ನಿರಾಸೆ: ಸೆಪ್ಟೆಂಬರ್ ಅಂತ್ಯದವರೆಗೂ ಚಿತ್ರಮಂದಿರ ಲಾಕ್‌!ಸಿನಿಪ್ರಿಯರಿಗೆ ಮತ್ತೆ ನಿರಾಸೆ: ಸೆಪ್ಟೆಂಬರ್ ಅಂತ್ಯದವರೆಗೂ ಚಿತ್ರಮಂದಿರ ಲಾಕ್‌!

    ಓಟಿಟಿ ಮೊರೆ ಹೋದ ನಿರ್ಮಾಪಕರು

    ಓಟಿಟಿ ಮೊರೆ ಹೋದ ನಿರ್ಮಾಪಕರು

    ಕಳೆದ ಆರು ತಿಂಗಳಿನಿಂದ ಚಿತ್ರಮಂದಿರಗಳು ತೆರೆಯದ ಕಾರಣ, ಕೆಲವು ನಿರ್ಮಾಪಕರು ಆನ್‌ಲೈನ್ ವೇದಿಕೆಯ ಮೊರೆ ಹೋಗಿದ್ದಾರೆ. ಅಮೇಜಾನ್ ಪ್ರೈಂ ಹಾಗೂ ಇನ್ನಿತರ ಓಟಿಟಿ ಫ್ಲಾಟ್‌ಫಾರ್ಮ್ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

    ಕಷ್ಟದಲ್ಲಿ ಚಿತ್ರಮಂದಿರ ಮಾಲೀಕರು!

    ಕಷ್ಟದಲ್ಲಿ ಚಿತ್ರಮಂದಿರ ಮಾಲೀಕರು!

    ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಜಾರಿಯಾಗಿತ್ತು. ಆರು ತಿಂಗಳು ಕಳೆದಿದೆ. ಇಷ್ಟು ತಿಂಗಳಿನಿಂದ ಚಿತ್ರಮಂದಿರ ಕಾರ್ಯನಿರ್ವಹಿಸಿಲ್ಲ, ಸಿಬ್ಬಂದಿಗಳಿಗೆ ಕೆಲಸ ಇಲ್ಲ, ಚಿತ್ರರಂಗಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಹ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರಗಳಿಗೆ ಸಿನಿಮಾ ಮಂದಿ ಮನವಿ ಸಲ್ಲಿಸಿದರೂ ಯಾವುದೇ ಸಹಾಯ ಸಿಕ್ಕಿಲ್ಲ.

    Recommended Video

    ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
    ಸಿಎಂ ಭೇಟಿ ಮಾಡಿದ ನಿಯೋಗ

    ಸಿಎಂ ಭೇಟಿ ಮಾಡಿದ ನಿಯೋಗ

    ಕನ್ನಡ ಚಲನಚಿತ್ರರಂಗದ ಪರವಾಗಿ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತ್ತು. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ನೆರವು ನೀಡಬೇಕು ಹಾಗೂ ಚಿತ್ರಮಂದಿರ ತೆರೆಯಲು ಅನುವು ಮಾಡಿಕೊಡಬೇಕು ಎಂದು ವಿನಂತಿಸಿತ್ತು.

    English summary
    A Media report has claimed that Home Ministry has ordered reopening of cinema halls across the country from 1st October. but, its fake.
    Tuesday, September 15, 2020, 11:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X