For Quick Alerts
  ALLOW NOTIFICATIONS  
  For Daily Alerts

  'ಹಾಸ್ಟೆಲ್ ಹುಡುಗರು' ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬಂದ ರಕ್ಷಿತ್ ಶೆಟ್ಟಿ!

  |

  2023ರಲ್ಲಿ ಹೊಸಬರ ಸಿನಿಮಾಗಳದ್ದೇ ದರ್ಬಾರ್. ಈ ವರ್ಷ ಸಾಕಷ್ಟು ಹೊಸಬರ ಸಿನಿಮಾಗಳೇ ಬಿಡುಗಡೆಗೆ ಸಜ್ಜಾಗುತ್ತಿವೆ. ಕೆಲವು ಸಿನಿಮಾಗಳು ಕಥೆಯನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡ ಸಿನಿಮಾ ಮಾಡಿವೆ. ಮತ್ತೆ ಕೆಲವು ಪ್ರೇಕ್ಷಕರನ್ನು ರಂಜಿಸಲೇಬೇಕು ಅಂತ ಪಣ ತೊಟ್ಟು ನಿಂತಿವೆ.

  ಹೀಗೆ ಪ್ರೇಕ್ಷಕರನ್ನು ರಂಜಿಸಲು ಹೊರಟಿರುವವರೇ 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ. ಈಗಾಗಲೇ ಭಿನ್ನ-ವಿಭಿನ್ನ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿರುವ ಹೊಸಬರ ತಂಡ ಸಿನಿಪ್ರಿಯರ ಗಮನ ಸೆಳೆದಿದೆ. ಈಗ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ.

  ಗೆಳೆಯ ರಕ್ಷಿತ್ ಶೆಟ್ಟಿ ಪಾರ್ಟಿಗೆ ಹೋಗಲ್ವಾ ರಿಷಬ್ ಶೆಟ್ಟಿ? ಕಿರಿಕ್ ಪಾರ್ಟಿಗೆ ಶಾಕ್!

  'ಹಾಸ್ಟೆಲ್ ಹುಡುಗರು' ಸಿನಿಮಾ ತಂಡ ವಿಭಿನ್ನ ಪ್ರಚಾರದಿಂದ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಕನ್ನಡ ಸಿನಿಮಾರಂಗದ ಸೆಲೆಬ್ರೆಟಿಗಳು ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದರು. ಅವರೊಬ್ಬರು ಈ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

  ಹೌದು.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸಬರ ತಂಡದ ಬೆಂಬಲಕ್ಕೆ ನಿಂತಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ವಿತರಣೆ ಮಾಡಲು ಮುಂದೆ ಬಂದಿದೆ. ಇದನ್ನು ಸ್ವತ: ಸಿನಿಮಾ ತಂಡವೇ ಅನೌನ್ಸ್ ಮಾಡಿದ್ದು, ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

  ಅಂದ್ಹಾಗೆ ಸ್ವತ: ರಕ್ಷಿತ್ ಶೆಟ್ಟಿ ಕೂಡ 'ಹಾಸ್ಟೆಲ್ ಹುಡುಗರು' ಮಾಡಿದ ಕ್ವಾಟ್ಲೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಐಡಿಯಾಗೆ ಸಿನಿಪ್ರಿಯರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅವರೇ ಸಿನಿಮಾವನ್ನು ಮೆಚ್ಚಿ ಬಿಡುಗಡೆ ಮಾಡುವುದಕ್ಕೆ ನೆರವಾಗುತ್ತಿದ್ದಾರೆ.

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಆರಂಭ ಆದಲ್ಲಿಂದ ಕನ್ನಡದ ಸ್ಟಾರ್ ನಟರು ಸಹಾಯಕ್ಕೆ ಬಂದಿದ್ದಾರೆ. ಅದರಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾದ ಪೋಸ್ಟರ್ ಲಾಂಚ್‌ನಿಂದ ಪ್ರಚಾರದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.

  Hostel Hudugaru Movie Will Be Releasing By Rakshit Shetty By Paramava Studio

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಜೊತೆಗೆ ಮೋಹಕತಾರೆ ರಮ್ಯಾ, ರಕ್ಷಿತ್ ಶೆಟ್ಟಿ, ಅಜನೀಶ್ ಲೋಕನಾಥ್ ವಿಭಿನ್ನವಾದ ಪ್ರಚಾರದ ವಿಡಿಯೋದಲ್ಲಿ ಭಾಗಿಯಾಗಿದ್ದರು. ಇವರೆಲ್ಲರೂ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

  ವಿಶೇಷ ಅಂದರೆ, 'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಮನೆ ಮಾತಾಗಿರೋ ರಿಷಬ್ ಶೆಟ್ಟಿ ಇದೇ ಸಿನಿಮಾದಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಟೆಲ್‌ನ ಸೀನಿಯರ್ ಸ್ಟುಡೆಂಟ್ ಆಗಿ ಹುಡುಗರ ಜೊತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ.

  English summary
  Hostel Hudugaru Movie Will Be Releasing By Rakshit Shetty By Paramava Studio, Know More.
  Tuesday, January 3, 2023, 23:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X