For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ಬಂದ ಒಂದು ಫೋನ್ ಕಾಲ್ ನಿಂದ ಅಪ್ಪು ಚಿತ್ರಕ್ಕೆ ಕಮಿಟ್ ಆದ ರಚಿತಾ.!

  By Harshitha
  |
  ರಚಿತಾ ರಾಮ್ ಗೆ ರಾತ್ರಿ ಬಂದ ಕರೆಯಿಂದ ಪುನೀತ್ ಸಿನೆಮಾಗೆ ಓಕೆ ಅಂದ್ರಂತೆ | Oneindia Kannada

  'ಬುಲ್ ಬುಲ್', 'ರನ್ನ', 'ರಥಾವರ', 'ಚಕ್ರವ್ಯೂಹ', 'ಭರ್ಜರಿ' ಅಂತಹ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ 'ಅಯೋಗ್ಯ', 'ಉಪ್ಪಿ ರುಪಿ', 'ಸೀತಾ ರಾಮ ಕಲ್ಯಾಣ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

  ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರಕ್ಕೂ ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಅಷ್ಟಕ್ಕೂ, 'ನಟ ಸಾರ್ವಭೌಮ' ಚಿತ್ರದ ಹೀರೋಯಿನ್ ಪಾತ್ರಕ್ಕೆ ನಟಿ ರಚಿತಾ ರಾಮ್ ಮೊದಲ ಆಯ್ಕೆ ಅಲ್ಲ. ರಚಿತಾ ರಾಮ್ ಗೂ ಮುಂಚೆ ಮಹಾರಾಷ್ಟ್ರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ 'ನಟ ಸಾರ್ವಭೌಮ' ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಆದ್ರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪ್ರಿಯಾಂಕಾ ರನ್ನ ಕೈಬಿಟ್ಟು, ಆ ಜಾಗಕ್ಕೆ ರಚಿತಾ ರನ್ನ ಕರೆತರಲಾಯಿತು.

  ಅಸಲಿಗೆ, 'ನಟ ಸಾರ್ವಭೌಮ' ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಗೆ ಕರೆ ಹೋಗಿದ್ದು ರಾತ್ರೋರಾತ್ರಿ.! ಆ ಕಥೆ ಇಲ್ಲಿದೆ ಓದಿರಿ...

  'ನಟ ಸಾರ್ವಭೌಮ' ಮುಹೂರ್ತ ಮುಗಿದ ಮೇಲೆ...

  'ನಟ ಸಾರ್ವಭೌಮ' ಮುಹೂರ್ತ ಮುಗಿದ ಮೇಲೆ...

  'ನಟ ಸಾರ್ವಭೌಮ' ಚಿತ್ರಕ್ಕೆ ನಾಯಕಿ ಆಗುವ ಅವಕಾಶ ರಚಿತಾ ರಾಮ್ ಗೆ ಒಲಿದಿದ್ದು, ಸಿನಿಮಾದ ಮುಹೂರ್ತ ಮುಗಿದ ಮಾರನೇ ದಿನ. ರಾತ್ರೋರಾತ್ರಿ ಬಂದ ಒಂದೇ ಒಂದು ಫೋನ್ ಕಾಲ್ ನಿಂದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟರು ನಟಿ ರಚಿತಾ ರಾಮ್.

  'ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?'ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?

  ಫೋನ್ ಮಾಡಿದವರು ಯಾರು.?

  ಫೋನ್ ಮಾಡಿದವರು ಯಾರು.?

  ರಾತ್ರಿ ಸುಮಾರು 10.30 ಕ್ಕೆ ರಾಕ್ ಲೈನ್ ವೆಂಕಟೇಶ್ ರಿಂದ ರಚಿತಾ ರಾಮ್ ಗೆ ಫೋನ್ ಕಾಲ್ ಬಂತು. 'ನಟ ಸಾರ್ವಭೌಮ' ಚಿತ್ರದ ಆಫರ್ ಕೊಟ್ಟವರು ರಾಕ್ ಲೈನ್ ವೆಂಕಟೇಶ್. ಹೇಳಿ ಕೇಳಿ ಅದು ಅಪ್ಪು ಸಿನಿಮಾ ಆಗಿದ್ರಿಂದ ಕ್ಷಣಾರ್ಧದಲ್ಲೇ ರಚಿತಾ ರಾಮ್ ಓಕೆ ಅಂದು ಬಿಟ್ಟರು.

  'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?

  ಮರುದಿನ ಶೂಟಿಂಗ್

  ಮರುದಿನ ಶೂಟಿಂಗ್

  ರಚಿತಾ ರಾಮ್ ಓಕೆ ಎಂದ ಮರು ದಿನದಿಂದಲೇ ಶೂಟಿಂಗ್ ಶುರು ಆಗ್ಹೋಯ್ತು. ಯಾವುದೇ ತಯಾರಿ ಇಲ್ಲದೆ, ಶೂಟಿಂಗ್ ಸ್ಪಾಟ್ ಗೆ ತೆರಳಿದ್ದರಂತೆ ನಟಿ ರಚಿತಾ ರಾಮ್.

  ನಿರಾಕರಿಸಿದವರಿಗೆ ಕಾರಣ ಕೇಳಿದ ರಚಿತಾ ರಾಮ್ನಿರಾಕರಿಸಿದವರಿಗೆ ಕಾರಣ ಕೇಳಿದ ರಚಿತಾ ರಾಮ್

  ಚಿತ್ರೀಕರಣದಲ್ಲಿ ಬಿಜಿ

  ಚಿತ್ರೀಕರಣದಲ್ಲಿ ಬಿಜಿ

  'ನಟ ಸಾರ್ವಭೌಮ' ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಅಂತ ಅನೌನ್ಸ್ ಆದಾಗ, ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದ್ರೀಗ, ಎಲ್ಲರೂ ತಣ್ಣಗಾಗಿದ್ದಾರೆ. ರಚಿತಾ ರಾಮ್ ಕೂಡ 'ನಟ ಸಾರ್ವಭೌಮ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

  English summary
  How did Kannada Actress Rachita Ram got a chance to act in Puneeth Rajkumar starrer 'Nata Sarvabhauma'? Read the article to know the answer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X