»   » ತೆಳ್ಳಗೆ ಆಗಲು ನಟಿ ರಾಗಿಣಿ ದ್ವಿವೇದಿ ಮಾಡಿದ್ದು ಹೀಗೆ...

ತೆಳ್ಳಗೆ ಆಗಲು ನಟಿ ರಾಗಿಣಿ ದ್ವಿವೇದಿ ಮಾಡಿದ್ದು ಹೀಗೆ...

Posted By:
Subscribe to Filmibeat Kannada

ಈ ವರ್ಷಾರಂಭ ಜನವರಿಯಲ್ಲಿ ಬಿಡುಗಡೆ ಆದ 'ಪರಪಂಚ' ಸಿನಿಮಾದಲ್ಲಿ ರಾಗಿಣಿ ಕಾಣಿಸಿಕೊಂಡಿರುವುದಕ್ಕೂ, ಈಗ ಚಿತ್ರೀಕರಣ ನಡೆಯುತ್ತಿರುವ 'ಗಾಂಧಿಗಿರಿ' ಸಿನಿಮಾದಲ್ಲಿ ರಾಗಿಣಿ ಕಾಣುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.

ದುಂಡು ದುಂಡಾಗಿದ್ದ ರಾಗಿಣಿ ಈಗ ತೆಳ್ಳಗೆ ಆಗಿದ್ದಾರೆ. ತೂಕ ಇಳಿಸಲು ರಾಗಿಣಿ ಏನು ಮಾಡಿರಬಹುದು? ಅಂತ ಕೆಲವರು ತಲೆಗೆ ಹುಳ ಬಿಟ್ಕೊಂಡಿರಬಹುದು. ಆ ಡೌಟ್ ಇವತ್ತು ಕ್ಲಿಯರ್ ಆಗಲಿದೆ. [ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...]

ಬಳುಕುವ ಬಳ್ಳಿಯಂತೆ ಇದ್ದ ರಾಗಿಣಿ ದಪ್ಪ ಆಗಿದ್ದು ಹೇಗೆ.? ಸಣ್ಣ ಆಗಲು ಅವರು ಮಾಡಿದ ಡಯೆಟ್ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ರಾಗಿಣಿ ಎಷ್ಟು ಕೆ.ಜಿ ಇದ್ದರು?

ಮೊದಲು 83 ಕೆ.ಜಿ ತೂಗುತ್ತಿದ್ದ ನಟಿ ರಾಗಿಣಿ ದ್ವಿವೇದಿ, ಒಂಬತ್ತು ತಿಂಗಳ ಅಂತರದಲ್ಲಿ 20 ಕೆ.ಜಿ ತೂಕ ಇಳಿಸಿದ್ದಾರೆ. ಅಲ್ಲಿಗೆ, ರಾಗಿಣಿಯ ಈಗಿನ ವೇಯ್ಟ್ - 63 ಕೆ.ಜಿ. [ಬರೀ ಸೀರೆ ಉಡೋಕೆ ರಾಗಿಣಿಗೆ ಅಷ್ಟೊಂದು ಸಂಭಾವನೆ ಕೊಡ್ಬೇಕಿತ್ತಾ.?]

ರಾಗಿಣಿ ಡಯೆಟ್ ಏನು?

ಒಂಬತ್ತು ತಿಂಗಳ ಕಾಲ ನಟಿ ರಾಗಿಣಿ ಅಕ್ಕಿ ಮತ್ತು ಗೋಧಿಯಿಂದ ಮಾಡಿದ ಆಹಾರವನ್ನ ಮುಟ್ಟಿರಲಿಲ್ಲ.

ಕೋಕ್ ಗೆ ಕೊಕ್.!

ಮುಂಚೆ ಪ್ರತಿ ದಿನ 500ml ಕೋಕ್ ಕುಡಿಯುತ್ತಿದ್ರಂತೆ ರಾಗಿಣಿ. ಡಯೆಟ್ ಪರಿಣಾಮ ಕೋಕ್ ಕುಡಿಯುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ರು.

ಮತ್ತೇನು ತಿನ್ನುತ್ತಿದ್ದರು?

ರಾಗಿಯಿಂದ ಮಾಡಿದ ಆಹಾರವನ್ನೇ ರಾಗಿಣಿ ಹೆಚ್ಚಾಗಿ ತಿನ್ನುತ್ತಿದ್ದರಂತೆ.

ಪ್ರತಿ ದಿನ ವರ್ಕೌಟ್

ಪ್ರತಿ ನಿತ್ಯ ನಾಲ್ಕು ಗಂಟೆ ವರ್ಕೌಟ್ ಮಾಡ್ತಿದ್ರಂತೆ ನಟಿ ರಾಗಿಣಿ ದ್ವಿವೇದಿ.

ರಾಗಿಣಿ ದಪ್ಪ ಆಗಿದ್ಹೇಗೆ?

'ವೀರ ರಣಚಂಡಿ' ಎಂಬ ಚಿತ್ರದ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುವಾಗ ನಟಿ ರಾಗಿಣಿ ದ್ವಿವೇದಿಗೆ ಫ್ರ್ಯಾಕ್ಚರ್ ಆಗಿತ್ತು. ಬೆಡ್ ರೆಸ್ಟ್ ನಲ್ಲಿ ಇದ್ದ ಕಾರಣ, ರಾಗಿಣಿ ದಪ್ಪಗಾದ್ರಂತೆ.

English summary
Do you want to know how did Ragini Dwivedi lose oodles of weight? Then read this article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada