For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!

  By Bharath Kumar
  |

  ಐಪಿಎಲ್ 11ನೇ ಆವೃತ್ತಿ ಗ್ರ್ಯಾಂಡ್ ಆಗಿ ಆರಂಭವಾಗಿದೆ. ಮೊದಲ ದಿನದ ಉದ್ಘಾಟನೆಯಲ್ಲಿ ಬಾಲಿವುಡ್ ಸ್ಟಾರ್ ನಟರು ಹೆಜ್ಜೆ ಹಾಕಿದ್ದರು. ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡಿಸ್, ಪ್ರಭುದೇವ, ತಮನ್ನಾ ಹಾಗೂ ಹೃತಿಕ್ ರೋ‍ಷನ್ ಸೇರಿದಂತೆ ಹಲವರು ಕುಣಿದು ಕುಪ್ಪಳಿಸಿದ್ದರು.

  ಸುಮಾರು 45 ನಿಮಿಷಗಳ ಕಾಲ ಈ ಕಲಾವಿದರಿಂದ ನಿರಂತರವಾಗಿ ಮನರಂಜನೆ ಕಾರ್ಯಕ್ರಮ ಜರುಗಿತ್ತು. ಈ ಎಲ್ಲ ಸ್ಟಾರ್ ಕಲಾವಿದರು ಪ್ರತ್ಯೇಕವಾಗಿ ಅವರದ್ದೇ ಆದ ಸ್ಟೈಲ್ ನಲ್ಲಿ, ಅವರದ್ದೇ ಆದ ಹಾಡುಗಳಿಗೆ ನೃತ್ಯ ಮಾಡಿದ್ದರು. ಈ ಎಲ್ಲರ ಪೈಕಿ ನಟ ಹೃತಿಕ್ ರೋಷನ್ ಅವರ ಫರ್ಫಾಮೆನ್ಸ್ ಗೆ ಅತಿ ಹೆಚ್ಚು ಟಿ.ಆರ್.ಪಿ ಬಂದಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

  IPL ಉದ್ಘಾಟನೆಯಿಂದ ರಣ್ವೀರ್ ಸಿಂಗ್ ಔಟ್.! ಅವರ ಬದಲು.?IPL ಉದ್ಘಾಟನೆಯಿಂದ ರಣ್ವೀರ್ ಸಿಂಗ್ ಔಟ್.! ಅವರ ಬದಲು.?

  ಬಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ನಟ ಹಾಗೂ ಸೂಪರ್ ಡ್ಯಾನ್ಸರ್ ಆಗಿರುವ ಹೃತಿಕ್ ರೋಷನ್ ಆಲ್ ಟೈಂ ಸ್ಟಾರ್ ಎಂಬುದು ಈ ಮೂಲಕ ಸಾಬೀತಾಗಿದೆ. ಹೃತಿಕ್ ಬಾಲಿವುಡ್ ನ ಅದ್ಭುತ ಡ್ಯಾನ್ಸರ್. ಇದಕ್ಕೂ ಮುಂಚೆ ಹೃತಿಕ್ ಜಾಗದಲ್ಲಿ ರಣ್ವೀರ್ ಸಿಂಗ್ ಕಾರ್ಯಕ್ರಮ ನೀಡಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಗಾಯಗೊಂಡ ರಣ್ವೀರ್ ಐಪಿಎಲಗ್ ಉದ್ಘಾಟನೆಯಿಂದ ಹೊರಗುಳಿದರು. ಆನಂತರ ಆ ಜಾಗಕ್ಕೆ ಹೃತಿಕ್ ಅವರನ್ನ ಕರೆತರಲಾಯಿತು.

  ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ತಮ್ಮದೇ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಧೂಳೆಬ್ಬಿಸಿದ ಹೃತಿಕ್ ಡ್ಯಾನ್ಸ್ ಅತಿ ಹೆಚ್ಚು ವೀಕ್ಷಕರು ನೋಡಿದ್ದಾರೆ ಎಂಬುದನ್ನ ಟಿವಿ ವಾಹಿನಿಯಿಂದ ಮಾಹಿತಿ ಸೋರಿಕೆಯಾಗಿದೆ.

  IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!IPL ಉದ್ಘಾಟನೆ: ರಣ್ವೀರ್ ಸಿಂಗ್ ಸಂಭಾವನೆ ಮೀರಿಸಿದ ಮತ್ತೊಬ್ಬ ನಟ.!

  ಹೃತಕ್ ರೋಷನ್ ಸದ್ಯ 'ಸೂಪರ್ 30' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಬಿಲ್ ಚಿತ್ರದ ನಂತರ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಮುಂದಿನ ವರ್ಷ ಆರಂಭದಲ್ಲಿ ತೆರೆಕಾಣಲಿದೆ.

  English summary
  Superstar Hrithik Roshan not only stole the show with his stellar performance at the opening ceremony of IPL but his performance also became the high point of the ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X