For Quick Alerts
  ALLOW NOTIFICATIONS  
  For Daily Alerts

  ದರ್ಶನ್‌ಗೆ ವಿಶೇಷವಾದ ಉಡುಗೊರೆ ನೀಡಿದ ಹುಬ್ಬಳ್ಳಿ ಅಭಿಮಾನಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹೊಸ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ಬಹಳ ಅದ್ಧೂರಿಯಾಗಿ ನಡೆದಿದೆ. ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲು ನಟ ದರ್ಶನ್ ಕಾರಣ ಎನ್ನುವುದನ್ನು ಸ್ವತಃ ನಿರ್ಮಾಪಕರೇ ಹೇಳಿದ್ದಾರೆ.

  ದರ್ಶನ್ ಮುಂದೆ ಬಂತು ನಿಂತ ಟಗರು | Hubli Fans Gifts Sheep (Tagaru) For DBOSS

  ಪ್ರಿ-ರಿಲೀಸ್ ಕಾರ್ಯಕ್ರಮ ಮಾಡುವುದಾರೇ ಅದು ಹುಬ್ಬಳ್ಳಿಯಲ್ಲೇ ಆಗಬೇಕು ಎಂದು ನಿರ್ಮಾಪಕರ ಬಳಿಕ ಬೇಡಿಕೆಯಿಟ್ಟಿದ್ದರಂತೆ. ಉತ್ತರ ಕರ್ನಾಟಕದ ಮಂದಿಗೆ ಬಹಳ ದಿನಗಳಿಂದ ಸಿಗದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪ್ರಿ-ರಿಲೀಸ್ ಶೋ ಮಾಡಿದ್ರೆ ಆ ನೆಪದಲ್ಲಾದರೂ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂಬ ಉದ್ದೇಶ ದರ್ಶನ್ ಅವರದ್ದಾಗಿತ್ತು. ಅದರಂತೆ ಭರ್ಜರಿಯಾಗಿ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮ ಮುಗಿದ ಬಳಿಕ ಹುಬ್ಬಳ್ಳಿ ಅಭಿಮಾನಿಯೊಬ್ಬರು ಡಿ ಬಾಸ್‌ಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಮುಂದೆ ಓದಿ....

  'ದರ್ಶನ್‌ರನ್ನು ನೋಡಲೇಬೇಕು' ಎಂದು ಕಾದಿದ್ದ ಅಜ್ಜಿಯನ್ನು ಭೇಟಿ ಮಾಡಿದ ಡಿ-ಬಾಸ್

  ದರ್ಶನ್‌ಗೆ ಟಗರು ನೀಡಿದ ಅಭಿಮಾನಿ

  ದರ್ಶನ್‌ಗೆ ಟಗರು ನೀಡಿದ ಅಭಿಮಾನಿ

  ಉತ್ತರ ಕರ್ನಾಟಕದಲ್ಲಿ ತಮ್ಮ ಸಿನಿಮಾದ ಕಾರ್ಯಕ್ರಮ ಮಾಡಿದ್ದಕ್ಕೆ ಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಾಗಾಗಿ, ಗದಗ ಜಿಲ್ಲೆಯ ತೂಗುದೀಪ ಸಮಿತಿ ಅಭಿಮಾನಿ ಬಳಗ ಸದಸ್ಯ, ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ, ದರ್ಶನ್ ಅವರಿಗೆ ಟಗರು ಗಿಫ್ಟ್​ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  ಮಾರ್ಗಮಧ್ಯೆ ಅಭಿಮಾನಿಗಳನ್ನು ಭೇಟಿ ಮಾಡಿದ ದಾಸ

  ಮಾರ್ಗಮಧ್ಯೆ ಅಭಿಮಾನಿಗಳನ್ನು ಭೇಟಿ ಮಾಡಿದ ದಾಸ

  ಹುಬ್ಬಳ್ಳಿಯಲ್ಲಿ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ಡಿ ಬಾಸ್ ಅವರನ್ನು ಅಭಿಮಾನಿಗಳು ಭೇಟಿ ಮಾಡಿದ್ದಾರೆ. ಮಾರ್ಗಮಧ್ಯೆ ಅಭಿಮಾನಿಗಳನ್ನು ನೋಡಿದ ದಾಸ ಕಾರಿನಿಂದ ಇಳಿದು ಉಡುಗೊರೆಯನ್ನ ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.

  'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು

  ಎರಡು ವರ್ಷದಿಂದ ಸಾಕಿರುವ ಟಗರು

  ಎರಡು ವರ್ಷದಿಂದ ಸಾಕಿರುವ ಟಗರು

  ಶಂಭು ಗದಗನ ಶಿರಸಂಗಿ ಮೊಬೈಲ್ ಶಾಫ್ ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಅವರ ಅಪ್ಪಟ ಅಭಿಮಾನಿ. ಸುಮಾರು ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನ ದರ್ಶನ್ ಗೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ. ಆದರೆ ದರ್ಶನ್ ಟಗರನ್ನು ಡಿ ಬಾಸ್ ತೆಗೆದುಕೊಂಡು ಹೋಗಿಲ್ಲ. ಆದರೆ ಅಭಿಮಾನಿ ಶಂಭುಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ಆಹ್ವಾನ ನೀಡಿದ್ದಾರಂತೆ.

  ಫಾರ್ಮ್ ಹೌಸ್‌ಗೆ ಆಹ್ವಾನ

  ಫಾರ್ಮ್ ಹೌಸ್‌ಗೆ ಆಹ್ವಾನ

  ಅಭಿಮಾನಿಗೆ ಮೈಸೂರು ಫಾರ್ಮ್ ಹೌಸ್‌ಗೆ ಬರಲು ಆಹ್ವಾನ ನೀಡಿದ ದಾಸ ಒಂದು ವಾಹನ ಕಳಿಸುವುದಾಗಿ ತಿಳಿಸಿದ್ದು, ಆ ವಾಹನದಲ್ಲಿ ಟಗರು ಮತ್ತು ನೀನು ಇಬ್ಬರು ಬನ್ನಿ ಎಂದು ಸೂಚಿಸಿದರಂತೆ. ಈ ವೇಳೆ ಆ ಅಭಿಮಾನಿಯ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬ್ಯುಸಿ ಶೆಡ್ಯೂಲ್‌ ಕಾರಣದಿಂದ ಟಗರನ್ನು ಫಾರ್ಮ್​ ಹೌಸ್ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ನೀನೆ ಬಾ ಅಂತ ತಿಳಿಸಿದ್ದಾರೆ ಅಂತ ಖುಷಿಯಿಂದ ಶಂಭು ಹೇಳಿಕೊಂಡಿದ್ದಾನೆ.

  English summary
  Hubballi Fan Gifts Sheep to Challenging star Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X