»   » ಹುಚ್ಚ ವೆಂಕಟ್ ಫಿನಾಯಲ್ ಕುಡಿದೇ ಇಲ್ವಂತೆ.!

ಹುಚ್ಚ ವೆಂಕಟ್ ಫಿನಾಯಲ್ ಕುಡಿದೇ ಇಲ್ವಂತೆ.!

Posted By:
Subscribe to Filmibeat Kannada

ಕಳೆದ ಎರಡು ದಿನದಿಂದ ಹುಚ್ಚ ವೆಂಕಟ್ ಫಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಆದ್ರೆ, ನಿಜ ಏನಪ್ಪಾ ಅಂದ್ರೆ, ಹುಚ್ಚ ವೆಂಕಟ್ ಅವರು ಫಿನಾಯಲ್ ಕುಡಿದೇ ಇಲ್ವಂತೆ.

ಹೌದು, 'ಸೂಪರ್ ಜೋಡಿ' ಖ್ಯಾತಿಯ ರಚನಾ ಅವರು ನನ್ನನ್ನ ಲವ್ ಮಾಡಿ, ಮೋಸ ಮಾಡುತ್ತಿದ್ದಾರೆ, ಮದುವೆ ಆಗಲು ನಿರಾಕರಿಸಿದ್ದಾರೆ ಎಂದೆಲ್ಲಾ ಆರೋಪಗಳನ್ನ ಮಾಡಿದ್ದ ಹುಚ್ಚ ವೆಂಕಟ್ ಭಾನುವಾರ ರಾತ್ರಿ ಫಿನಾಯಲ್ ಕುಡಿದು ಆತ್ಮಹತ್ಯೆ ಯತ್ನ ಮಾಡಿದ್ದರು. ಅಲ್ಲಿಂದ ಸ್ನೇಹಿತರು ಬಂದು, ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ ಎಂದು ಹೇಳಲಾಗ್ತಿದೆ.

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

Huccha Venkat Did Not Drink Pinaoil

ಆದ್ರೆ, ಆಸ್ಪತ್ರೆ ಮೂಲಗಳು ತಿಳಿಸಿರುವ ಪ್ರಕಾರ, ಹುಚ್ಚ ವೆಂಕಟ್ ಅವರು ಫಿನಾಯಲ್ ಕುಡಿದೇ ಇಲ್ಲ. ಅವರಿಗೆ ಒಂದು ಬಾಟಲ್ ಗ್ಲೂಕೋಸ್ ನೀಡಿ ಕಳುಹಿಸಿದ್ದು ಅಷ್ಟೇ ಎಂದು ವೈದ್ಯ ಮೂಲಗಳು ತಿಳಿಸಿವೆ.

ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

ಇದನ್ನ ಒಪ್ಪಿಕೊಳ್ಳದ ಹುಚ್ಚವೆಂಕಟ್ ಮಾಧ್ಯಮದವರೇ ತಪ್ಪು ಗ್ರಹಿಸಿದ್ದಾರೆ ಎಂದು ಮಾತು ಬದಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನ ಗಮನಿಸಿದ್ರೆ, ಹುಚ್ಚ ವೆಂಕಟ್ ಅವರು ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡ್ತಿದ್ದಾರ ಎಂಬ ಅನುಮಾನ ಶುರುವಾಗಿದೆ.

English summary
Actor and Director Huccha Venkat Did Not Drink Pinaoil Says Mallige Hospital Doctors

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada