Just In
Don't Miss!
- News
ಯಲ್ಲಾಪುರ ಭೂಕುಸಿತ: ಯುವತಿಯ ಮದುವೆ ಕನಸು "ಮಣ್ಣು'ಪಾಲು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ವಾರದಲ್ಲಿ 'ಪೊಲಿಟಿಷಿಯನ್' ಕೊಳ್ಳೆ ಹೊಡೆದಿದ್ದೆಷ್ಟು ಕೋಟಿ?
ಕನ್ನಡದಲ್ಲಿ ಸದ್ಯ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಅಬ್ಬರ ಜೋರಾಗಿದೆ. ಡ್ಯಾನಿಶ್ ಸೇಠ್ ಅಭಿನಯದ ಈ ಚಿತ್ರಕ್ಕೆ ಕನ್ನಡ ಪ್ರೇಕ್ಷಕರು ಬೌಲ್ಡ್ ಆಗಿದ್ದರು. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರು, ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ಕಲಾಭಿಮಾನಿಗಳ ಪ್ರತಿಕ್ರಿಯೆ ನೋಡಿದ ಚಿತ್ರತಂಡ ಮತ್ತಷ್ಟು ಚಿತ್ರಮಂದಿರಗಳನ್ನ ಹೆಚ್ಚಿಸುತ್ತಿದೆ. ಅದರಲ್ಲೂ ಮಲ್ಟಿಫ್ಲೆಕ್ಸ್ ಗಳಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಹೆಚ್ಚು ಸದ್ದು ಮಾಡುತ್ತಿದ್ದಾನೆ.
ವಿಮರ್ಶೆ : 'ಸ್ಕ್ಯಾಮ್ ರಾಜ'ನ ಆಟ ಸಿಕ್ಕಾಪಟ್ಟೆ ಮಜಾ.. ಸ್ವಲ್ಪ ಕಿರಿಕಿರಿ..
ಇದರ ಪರಿಣಾಮ ಬಾಕ್ಸ್ ಆಫೀಸ್ ಕೆಲೆಕ್ಷನ್ ಕೂಡ ಭರ್ಜರಿಯಾಗಿದೆ. ಮೊದಲ ವಾರದ ಅಂತ್ಯಕ್ಕೆ ನೊಗರಾಜ್ ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡಿದೆ. ಹಾಗಿದ್ರೆ, 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರ ಇದುವರೆಗೂ ಗಳಿಸಿರುವ ಹಣವೆಷ್ಟು? ಮುಂದೆ ಓದಿ....

ಮೊದಲ ವಾರಕ್ಕೆ 2 ಕೋಟಿ
'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರದ ಬಂಡವಾಳ ಸುಮಾರು 2.7 ಕೋಟಿ. ಈ ಚಿತ್ರದ ಕೆಲಕ್ಷನ್ ಅದನ್ನ ಮೀರಿಸಿದ್ದು, ನಿರ್ಮಾಪಕರು ಹಾಕಿದ್ದ ಬಂಡವಾಳ ವಾಪಸ್ ಬಂದಿದೆಯಂತೆ. ನಿರ್ಮಾಪಕರು ಹೇಳುವ ಪ್ರಕಾರ ಸುಮಾರು 2.5 ಕೋಟಿ ಗಳಿಕೆ ಕಂಡಿದೆ.
'ಹಂಬಲ್ ಪೊಲಿಟಿಷಿಯನ್'ಗೆ ವಿಮರ್ಶಕರು ಕೊಟ್ಟ ಮತ ಎಷ್ಟು?

ಎರಡು ಪಟ್ಟು ಲಾಭ?
ಸದ್ಯ, ಭಾರತದಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಿದೆ. ಇನ್ನು ಹೊರದೇಶಗಳಲ್ಲಿ ಚಿತ್ರ ತೆರೆಕಾಣಬೇಕಿದೆ. ಅದರ ಜೊತೆ ಟಿವಿ ಪ್ರಸಾರ ಹಕ್ಕು, ರೀಮೇಕ್ ಹಕ್ಕು, ಡಬ್ಬಿಂಗ್ ಹಕ್ಕು ಇನ್ನು ಮಾರಟವಾಗಿಲ್ಲ. ಇದರಿಂದ ಮತ್ತಷ್ಟು ಲಾಭ ಬರುವ ನಿರೀಕ್ಷೆಯಿದೆ.

ಗ್ರಾಮೀಣ ಪ್ರದೇಶದಲ್ಲಿ ಸಿನಿಮಾಗೆ ಮಿಶ್ರಪ್ರತಿಕ್ರಿಯೆ
ಅಂದ್ಹಾಗೆ, 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರಕ್ಕೆ ನಗರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ, ಗ್ರಾಮೀಣ ಭಾಗದಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ ಎಂದು ಸ್ವತಃ ನಿರ್ಮಾಪಕರೇ ಹೇಳುತ್ತಿದ್ದಾರೆ. ಯಾಕಂದ್ರೆ, ಚಿತ್ರದಲ್ಲಿ ಇಂಗ್ಲೀಷ್ ಹೆಚ್ಚು ಬಳಸಿರುವುದು ಇದಕ್ಕೆ ಕಾರಣವಂತೆ.

ಸಂತಸಗೊಂಡ ನಾಯಕ
ಈ ಚಿತ್ರದ ನಾಯಕ ಡ್ಯಾನಿಶ್ ಸೇಠ್ ಚಿತ್ರದ ಕಲೆಕ್ಷನ್ ಬಗ್ಗೆ ಫುಲ್ ಖುಷಿಯಾಗಿದ್ದಾರೆ. ಚಿತ್ರಕ್ಕೆ ಹಾಕಿದ್ದ ಬಂಡವಾಳ ವಾಪಸ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಡ್ಯಾನಿಶ್ ಅಭಿನಯದ ಚೊಚ್ಚಲ ಸಿನಿಮಾ. ಸಾದ್ ಖಾನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರೋಜರ್ ನಾರಾಯಣ್, ಶ್ರುತಿ ಹರಿಹರನ್ ಕೂಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.