For Quick Alerts
  ALLOW NOTIFICATIONS  
  For Daily Alerts

  'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಟೀಸರ್ ನೋಡಿ

  By Bharath Kumar
  |

  ಟಿವಿ ಸ್ಟಾರ್, ಆರ್ ಜೆ ಡ್ಯಾನೀಶ್ ಸೇಠ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಹಂಬಲ್ ಪೊಲಿಟಿಶಿಯನ್ ನಾಗರಾಜ್'' ಚಿತ್ರ ಈಗಾಗಲೇ ಹಲವು ವಿಷಯಗಳಿಗೆ ಕುತೂಹಲ ಹುಟ್ಟುಹಾಕಿದೆ. ಇದೀಗ, ಈ ಕುತೂಹಲಗಳಿಗೆ ತಕ್ಕಂತೆ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.

  ಡ್ಯಾನೀಶ್ ಸೇಠ್ ನಾಯಕನಾಗಿ ನಟಿಸಿರುವ ಈ ಚಿತ್ರ ಔಟ್ ಅಂಡ್ ಔಟ್ ಮನರಂಜನೆಯಿಂದ ಕೂಡಿರಲಿದೆ ಎನ್ನುವುದಕ್ಕೆ ಸದ್ಯ ಬಿಡುಗಡೆಯಾಗಿರುವ ಈ ಟೀಸರ್ ಸಾಕ್ಷಿ.

  ಅಂದ್ಹಾಗೆ, ಇದೊಂದು ಪೊಲಿಟಿಕಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ಸಾದ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಸ್ವತಃ ಡ್ಯಾನೀಶ್ ಸೇಠ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

  ಶ್ರುತಿ ಹರಿಹರನ್ ಹಾಗೂ ರೋಜರ್ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಮುಖಿ ಸುರೇಶ್, ವಿಜಯ್ ಚೆಂಡೂರ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್, ನಟ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನ ಒಟ್ಟಾಗಿ ಬಂಡವಾಳ ಹೂಡಿದ್ದಾರೆ.

  ಟೀಸರ್ ಇಲ್ಲಿದೆ ನೋಡಿ

  English summary
  Tv Star Danish sait Directing and Starrer 'Humble Politician Nograj' Teaser Released. The Produced by Kannada Actor Rakshit Shetty, Pushkar Mallikarjun and Hemanth Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X