For Quick Alerts
  ALLOW NOTIFICATIONS  
  For Daily Alerts

  "ಯಾರು ಅಂತ ಹೇಳೋದು ಕಷ್ಟ.. ಇದ್ರಲ್ಲಿ 2 ತರ ಇರುತ್ತೆ": ಹೊಸಪೇಟೆ ಘಟನೆ ಬಗ್ಗೆ ಶಿವಣ್ಣ ವಿವರಣೆ

  |

  ಭಾನುವಾರ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆ ಬಗ್ಗೆ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದರು. ವಿಡಿಯೋ ಪೋಸ್ಟ್ ಮಾಡಿ ಆ ಘಟನೆಯನ್ನು ಖಂಡಿಸಿದ್ದರು. ಸಾಕಷ್ಟು ಜನ ಸೆಲೆಬ್ರೆಟಿಗಳು, ಅಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ದರ್ಶನ್‌ಗೆ ಬೆಂಬಲ ನೀಡಿದ್ದರು.

  'ಕ್ರಾಂತಿ' ಚಿತ್ರದ 2ನೇ ಸಾಂಗ್ ರಿಲೀಸ್ ವೇಳೆ ನಟ ದರ್ಶನ್‌ಗೆ ಅವಮಾನ ಆದ ಘಟನೆ ಬಗ್ಗೆ ಭಾರೀ ಚರ್ಚೆ ನಡೀತಿದೆ. ಮತ್ತೊಂದು ಕಡೆ ಘಟನೆ ಬಗ್ಗೆ ಪೊಲೀಸರು ತನಿಖೆ ನಟಿಸುತ್ತಿದ್ದಾರೆ. ಭಾನುವಾರ ಹೊಸಪೇಟೆಯಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ಫ್ಯಾನ್ಸ್ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಹಾಗಾಗಿ ದರ್ಶನ್ ಮೇಲೆ ಅಪ್ಪು ಅಭಿಮಾನಿಯೇ ಚಪ್ಪಲಿ ಎಸೆದಿದ್ದಾನೆ ಎನ್ನುವಂತೆ ಕೆಲವರು ಮಾತನಾಡುತ್ತಿದ್ದಾರೆ. ಇದನ್ನು ದೊಡ್ಮನೆ ಫ್ಯಾನ್ಸ್ ಒಪ್ಪಲು ಸಿದ್ಧರಿಲ್ಲ. ತಪ್ಪಿತಸ್ಥ ಯಾರು ಎಂದು ಗೊತ್ತಾಗುವ ಮುಂಚೆ ನಮ್ಮವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ.

  Pushpavathi Song: 'ಕ್ರಾಂತಿ' ಟಪ್ಪಾಂಗುಚಿ ಸಾಂಗ್ ರಿಲೀಸ್ ಡೇಟ್, ಸ್ಥಳ, ಸಮಯ ಪ್ರಕಟ Pushpavathi Song: 'ಕ್ರಾಂತಿ' ಟಪ್ಪಾಂಗುಚಿ ಸಾಂಗ್ ರಿಲೀಸ್ ಡೇಟ್, ಸ್ಥಳ, ಸಮಯ ಪ್ರಕಟ

  ಭಾನುವಾರ ಸಂಜೆ ಈ ಘಟನೆ ನಡೆಯುತ್ತಿದ್ದಂತೆ ಸೋಮವಾರ ಬೆಳಗ್ಗೆ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದರು. "ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು" ಎಂದು ವಿನಂತಿಸಿಕೊಂಡಿದ್ದರು. ಇದೀಗ ಗೌರೀಶ್ ಅಕ್ಕಿ ಯೂಟ್ಯೂಬ್ ಸಂದರ್ಶನದಲ್ಲಿ ಘಟನೆ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.

  ನಾನು ತಿರುಪತಿಯಲ್ಲಿ ಇದ್ದೆ

  ನಾನು ತಿರುಪತಿಯಲ್ಲಿ ಇದ್ದೆ

  "ಈಗಾಗಲೇ ಈ ಘಟನೆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೀನಿ. ಯಾರೆ ಆಗಲಿ ಒಬ್ಬ ನಟನಿಗೆ ಆ ರೀತಿ ಮಾಡುವುದು ತಪ್ಪು. ನಮಗೂ ಆ ಘಟನೆ ದುಃಖ ತಂದಿದೆ. ಇದು ಸರಿಯಲ್ಲ. ನನಗೆ ಮೊದಲು ಗೊತ್ತಿರಲಿಲ್ಲ. ತಿರುಪತಿಗೆ ಹೋಗಿದ್ದೆ. ಅಲ್ಲಿಂದ ಬರುವಾಗ ಹೇಳಿದರು. ನಾನು 'ವೇದ' ಪ್ರಚಾರದಲ್ಲಿ ಬ್ಯುಸಿಯಾಗಿದ್ದೆ. ಯಾರು ಎಲ್ಲಿ ಹೋಗಿದ್ದಾರೆ. ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಹೋಗುವುದಿಲ್ಲ. ನಾನು ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಏನು ನೋಡಲ್ಲ."

  ಯಾರು ಎಂದು ಹೇಳುವುದು ಕಷ್ಟ

  ಯಾರು ಎಂದು ಹೇಳುವುದು ಕಷ್ಟ

  "ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದೆ. ಖಂಡಿತ ಹೀಗೆ ಮಾಡಬಾರದು. ಯಾರು ಮಾಡಿದರೂ ಎಂದು ಹುಡುಕುವುದು ಕಷ್ಟ. ಇದರಲ್ಲಿ 2 ತರ ಇರುತ್ತೆ. ಯಾವ ರೀತಿ ಅಂತ ಹೇಳುವುದು ಕಷ್ಟ. ಕೆಲವೊಮ್ಮೆ ಬೇಕು ಅಂತಲೇ ಕೆಲವರು ಮಾಡಿರಬಹುದು. ನಮಗೆ ಇದೆಲ್ಲ ಗೊತ್ತಿಲ್ಲ. ಘಟನೆ ನಡೆದಿರುವುದು ತಪ್ಪು. ನಾನು ಮೊದಲಿನಿಂದಲೂ ಹೇಳ್ತಿದ್ದೀನಿ. ಈ ಫ್ಯಾನ್ಸ್ ವಾರ್ ಎಲ್ಲಾ ಬೇಡ ಅಂತ"

  36 ವರ್ಷ ನನ್ನನ್ನು ಸಾಕಿದ್ದಾರೆ

  36 ವರ್ಷ ನನ್ನನ್ನು ಸಾಕಿದ್ದಾರೆ

  "ಸೋಷಿಯಲ್ ಮೀಡಿಯಾವನ್ನು ಯಾರು ಒಳ್ಳೆಯದಕ್ಕೆ ಇತ್ತೀಚೆಗೆ ಬಳಸುತ್ತಿಲ್ಲ. ಶಿವಣ್ಣ ಯಾರನ್ನು ಇಂಪ್ರೆಸ್ ಮಾಡಬೇಕಿಲ್ಲ. ಸ್ವಾರಿ. ಜನ ನನ್ನ 36 ವರ್ಷ ಜನ ನನ್ನನ್ನು ಚೆನ್ನಾಗಿ ಸಾಕಿದ್ದಾರೆ. ಎಲ್ಲೇ ಹೋದರು ಜನ ಗೌರವ ಕೊಡುತ್ತಾರೆ. ಮಹಿಳೆಯರು ನೋಡಿದರೆ ಗೌರವ ಕೊಡುತ್ತಾರೆ. ಕಾಲಿಗೆ ಬೀಳುತ್ತಾರೆ. ಅ ಗೌರವ ನಾನು ಉಳಿಸಿಕೊಂಡಿದ್ದೇನೆ. ಇದನ್ನು ಹೇಳಿ ನಾನು ಯಾರನ್ನು ಇಂಪ್ರೆಸ್ ಮಾಡಬೇಕಿಲ್ಲ. ನಾನು ಒಳ್ಳೆಯವನು ಅಂತ ಅಲ್ಲ. ಒಬ್ಬ ಮನುಷ್ಯನಾಗಿ ಆ ಘಟನೆ ಸರಿಯಲ್ಲ ಎಂದು ಹೇಳುತ್ತೇನೆ. ಒಬ್ಬ ಮನುಷ್ಯನಾಗಿ ಮತ್ತೊಬ್ಬರಿಗೆ ಕೊಡುವ ನೀಡುವ ಗೌರವ ಅದು. ನಾನು ಹೃದಯದಿಂದ ಈ ಮಾತನ್ನು ಹೇಳುತ್ತಿದ್ದೇನೆ" ಎಂದು ಶಿವಣ್ಣ ಹೇಳಿದ್ದಾರೆ.

  'ವೇದ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

  'ವೇದ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

  ಶಿವರಾಜ್‌ಕುಮಾರ್ ನಟನೆಯ ವೇದ ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಎ. ಹರ್ಷ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸ್ವತಃ ಗೀತಾ ಶಿವರಾಜ್‌ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಉಮಾಶ್ರೀ, ಅದಿತಿ ಅರುಣ್ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

  English summary
  Hurling a slipper at Darshan: Actor Shivarajkumar condemns hosapete's incident again. Shivarajkumar gave a special interview ahead of the release Vedha. In the interview Shivanna Once again Talked About hosapete's incident. Know more.
  Friday, December 23, 2022, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X