»   » ರಿಯಲ್ ಉಪ್ಪಿ ಹೆಂಡ್ತಿ ಆಗ್ತಾರಂತೆ ನಿಖಿತಾ ತುಕ್ರಾಲ್

ರಿಯಲ್ ಉಪ್ಪಿ ಹೆಂಡ್ತಿ ಆಗ್ತಾರಂತೆ ನಿಖಿತಾ ತುಕ್ರಾಲ್

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಮುಕುಂದ ಮುರಾರಿ' ಚಿತ್ರಕ್ಕೆ ಹಿರೋಯಿನ್ ಫಿಕ್ಸ್ ಆಗಿದೆ. ಚಿತ್ರದಲ್ಲಿ ಉಪೇಂದ್ರ ಅವರ ಪತ್ನಿಯಾಗಿ ನಟಿಸಲು ನಾಯಕಿಯರ ಹುಡುಕಾಟದಲ್ಲಿದ್ದ ಚಿತ್ರತಂಡ ಇದೀಗ ಉಪ್ಪಿಗೆ ಪತ್ನಿಯನ್ನು ಹುಡುಕಿ ಕೊಟ್ಟಿದ್ದಾರೆ.

ಈ ಮೊದಲು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜೋಡಿಯಾಗಿ ಉಪ್ಪಿ ಅವರ ಪತ್ನಿ ಪ್ರಿಯಾಂಕ ಉಪೇಂದ್ರ, ನಟಿ ಪ್ರೇಮಾ ಅಥವಾ ನಟಿ ನಿಖಿತಾ ತುಕ್ರಾಲ್ ಕಾಣಿಸಿಕೊಳ್ಳಬಹುದೇ ಎಂಬ ಚರ್ಚೆ ನಡೆದಿತ್ತು.['ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?]

I am close to half century: Actress Nikita Thukral

ಸದ್ಯಕ್ಕೆ ಎಲ್ಲಾ ಚರ್ಚೆಗೂ ಬ್ರೇಕ್ ಬಿದ್ದಿದ್ದು, ನಂದ ಕಿಶೋರ್ ನಿರ್ದೇಶನದ ರೀಮೇಕ್ ಸಿನಿಮಾ 'ಮುಕುಂದ ಮುರಾರಿ' ಚಿತ್ರದಲ್ಲಿ ಉಪ್ಪಿ ಅವರ ಪತ್ನಿಯಾಗಿ 'ಸಂಗೊಳ್ಳಿ ರಾಯಣ್ಣ' ಖ್ಯಾತಿಯ ನಟಿ ನಿಖಿತಾ ತುಕ್ರಾಲ್ ಅವರು ಮಿಂಚುತ್ತಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಆರಂಭವಾಗಿದ್ದು, ನಟಿ ನಿಖಿತಾ ಅವರು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು ಸೇರಿದಂತೆ ಮೈಸೂರು ಮತ್ತು ಇತರೇ ಪ್ರಮುಖ ನಗರಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.['ಓ ಮೈ ಗಾಡ್', 'ಆರ್ಮುಗಂ' ರವಿಶಂಕರ್ ಸ್ವಾಮೀಜಿ ಆಗ್ತಾರಂತೆ]

ನಟಿ ನಿಖಿತಾ ಅವರು ತಮ್ಮ ಹಿಂದಿ ಸಿನಿಮಾ 'ಟ್ರಾಫಿಕ್' ಡಬ್ಬಿಂಗ್ ಮುಗಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ 49 ಸಿನಿಮಾಗಳನ್ನು ಮುಗಿಸಿರುವ ನಟಿ ತಮ್ಮ 50ನೇ ಚಿತ್ರದ ಬಗ್ಗೆ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ.

I am close to half century: Actress Nikita Thukral

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಆಗಿರುವ ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಮೊದಲು 'ಕೃಷ್ಣ ನೀ ಬೇಗನೇ ಬಾರೋ' ಎಂದಿತ್ತಾದರೂ ತದನಂತರ 'ಮುಕುಂದ ಮುರಾರಿ' ಎಂದು ಹೆಸರಿಡಲಾಯಿತು.[ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

ಇದೀಗ ಚಿತ್ರದ ನಿರ್ಮಾಪಕ ಎಂ.ಎನ್.ಕುಮಾರ್ ಹೇಳುವ ಪ್ರಕಾರ ಸದ್ಯಕ್ಕೆ ಇಟ್ಟಿರುವ ಹೆಸರು ಕೂಡ ಪಕ್ಕಾ ಆಗಿಲ್ಲವಂತೆ. ಇವೆರಡನ್ನೂ ಬಿಟ್ಟು ಬೇರೆ ಹೆಸರು ಇಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

English summary
Director Nanda Kishore, all set for Mukunda Murari, a Hindi remake of Oh My God!, has roped in Nikita Thukral to play the female lead. She is paired opposite Upendra in the film, which also sees Sudeep in a lead role. The pair has previously worked together in Dubai Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada