Don't Miss!
- News
ರಾಷ್ಟ್ರವಾದದ ಮೂಲಕ ವಂಚನೆಯನ್ನು ಮಚ್ಚಿಹಾಕಲು ಸಾಧ್ಯವಿಲ್ಲ: ಅದಾನಿಗೆ ಹಿಂಡೆನ್ಬರ್ಗ್ ತಿರುಗೇಟು- ಷೇರುಗಳಲ್ಲಿ ಮತ್ತೆ ಕುಸಿತ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸುಪ್ರೀಂ ಸ್ಟಾರ್' ಬಿರುದಿಗೆ ಬೇಸರಗೊಂಡ ಅನಿಶ್ ತೇಜೇಶ್ವರ್
'ಅಕಿರಾ' ಖ್ಯಾತಿಯ ನಟ ಅನಿಶ್ ತೇಜೇಶ್ವರ್ ಈಗ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಿಂದ ಮತ್ತೆ ಅಬ್ಬರವಿಡಲು ಸಿದ್ಧವಾಗಿದ್ದಾರೆ. 'ನಮ್ ಏರಿಯಾಲ್ ಒಂದಿನ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದ ಅನಿಶ್ ಇಲ್ಲಿಯವರೆಗೂ ಏಳು ಸಿನಿಮಾ ಮಾಡಿದ್ದಾರೆ.
2010ರಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಅನಿಶ್ ಸುಮಾರು 8 ವರ್ಷದಿಂದ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಟಿಸುತ್ತಿದ್ದಾರೆ. ಹೀಗೆ, ಚಂದನವನದ ಪ್ರತಿಭಾನ್ವಿತ ನಟ ಅನಿಶ್ ಈಗೊಂದು ವಿಚಾರಕ್ಕೆ ಬೇಸರ ಮಾಡಿಕೊಂಡಿದ್ದಾರೆ.
ಮೊದಲ ಸಿನಿಮಾ ರಿಲೀಸ್ ಆಗೋ ಮುಂಚೆಯೇ 'ಸ್ಟಾರ್' ಎಂದು ಇಟ್ಕೊಂಡು ಬರೋ ಈಗಿನ ನಟರ ಮುಂದೆ ಅನಿಶ್ ವಿಭಿನ್ನವಾಗಿ ನಿಂತಿದ್ದಾರೆ. ಯಾಕಂದ್ರೆ, ಅನಿಶ್ 'ಸ್ಟಾರ್'ಗಿರಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಏನಿದು ಅನಿಶ್ ಗೆ ಕಾಡುತ್ತಿರುವ ಬೇಸರ.? ಮುಂದೆ ಓದಿ.....

ನಾನು 'ಸುಪ್ರೀಂ ಸ್ಟಾರ್' ಅಲ್ಲ
ಎಲ್ಲರಿಗೂ ತಿಳಿದಿರುವಂತೆ ಅನಿಶ್ ತೇಜೇಶ್ವರ್ ಅವರನ್ನ ಅಭಿಮಾನಿಗಳು 'ಸುಪ್ರೀ ಸ್ಟಾರ್' ಎಂದು ಕರೆಯುತ್ತಾರೆ. ಅಕಿರಾ ಚಿತ್ರದ ನಂತರ ಈ ಸ್ಟಾರ್ ಪಟ್ಟ ನೀಡಿದ ಅಭಿಮಾನಿಗಳು ಅದನ್ನ ಖಾಯಂ ಮಾಡಿಕೊಂಡಿದ್ದಾರೆ. ಆದ್ರೆ, ನಟ ಅನಿಶ್ ಮಾತ್ರ ನಾನು ಸುಪ್ರೀಂ ಸ್ಟಾರ್ ಅಲ್ಲ ಎನ್ನುತ್ತಿದ್ದಾರೆ.
ಕಮರ್ಷಿಯಲ್
ವಾಸುಗೆ
ಜೊತೆಯಾದ
ಚಾಲೆಂಜಿಂಗ್
ಸ್ಟಾರ್

ನಾನು ಯಾವ ಸಾಧನೆಯೂ ಮಾಡಿಲ್ಲ
''ನಾನು ಇನ್ನು ಏಳು ಸಿನಿಮಾ ಮಾಡಿರುವ ಹೊಸಬ. ನಾನು ಯಾವ ಸ್ಟಾರ್ ಅಲ್ಲ. ಈ ಸುಪ್ರೀಂ ಸ್ಟಾರ್ ಎಂದು ಕೇಳಿದಾಗಲೆಲ್ಲ ನನಗೆ ಕಿರಿಕಿರಿ ಎನಿಸುತ್ತೆ. ನಾನಿನ್ನೂ ಪ್ರೂವ್ ಮಾಡೇ ಇಲ್ಲ, ನಾನ್ ಯಾವ ಸ್ಟಾರ್ ಅಂತ ನನಗೆ ಬೈಯ್ಡುಕೊಂಡಿರುವುದು ಉಂಟು''

'ಅಕಿರಾ' ಸಮಯದಲ್ಲಾದ ಮಿಸ್ಟೇಕ್
''ಅಕಿರಾ' ಚಿತ್ರದ ಸಂದರ್ಭದಲ್ಲಿ ಆದ ಮಿಸ್ಟೇಕ್ ಇದು. ನನ್ನ ತಂಡ ಮಾಡಿದ ತಪ್ಪು. ಆವತ್ತು ನಾನು ಬೇಡ ಬೇಡ ಅಂತ ಹೇಳಿದೆ, ಆದ್ರೆ, ಯಾರೂ ನನ್ನ ಮಾತು ಕೇಳಿಲ್ಲ. ನಿನಗೆ ಗೊತ್ತಾಗಲ್ಲ ಸುಮ್ಮನೆ ಇರು, ಹಾಗೆ ಹೀಗೆ ಅಂತ ಹಾಕಿದ್ರು. ಈಗ ವಾಸು ಸಿನಿಮಾದನ್ನ ಬಲವಂತವಾಗಿ ಹಾಕಿಸಿದ್ರು. ಈಗ ಬೇಜಾರಾಗುತ್ತಿದೆ.''
ಲವ್
ಫೇಲ್ಯೂರ್
ಆದವರಿಗಾಗಿ
ಅನಿಶ್
ಹೊಸ
ಸಾಂಗ್

ಇಂದಿನಿಂದ ಅದು ಬೇಡ
''ಅದಕ್ಕೆ ನಾನು ಇಂದಿನಿಂದ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ಸ್ಟಾರ್ ಅಲ್ಲ, ಸುಮ್ಮನೆ ಅದರಿಂದ ಪ್ರಚಾರ ಯಾಕೆ. ಅನಿಶ್ ತೇಜೇಶ್ವರ್ ಅಂತ ಪ್ರೇಕ್ಷಕರನ್ನ ಗುರುತಿಸಿದ್ರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ. ಇನ್ಮುಂದೆ ನನ್ನದರಲ್ಲಿ ಈ ಸ್ಟಾರ್ ಇರಲ್ಲ.''
ಅನಿಶ್
ಗಾಗಿ
ಮತ್ತೆ
ಹಾಡಿದ
ಪವರ್
ಸ್ಟಾರ್

ಆಗಸ್ಟ್ 3ಕ್ಕೆ ವಾಸು ಬರ್ತಾವ್ನೆ
ಅನಿಶ್ ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರ ಇದೇ ಆಗಸ್ಟ್ 3 ರಂದು ಬಿಡುಗಡೆಯಾಗುತ್ತಿದೆ. ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.