For Quick Alerts
  ALLOW NOTIFICATIONS  
  For Daily Alerts

  ಅಪ್ಪಾಜಿ ಅಂತ ಎಲ್ಲರೂ ಹೇಳ್ತಾರೆ ಬಿಡಿ, ಆದ್ರೆ ಈ ನಟನಿಗಾಗಿ ನಾನು ಪ್ರಾಣ ಕೊಡ್ತೀನಿ ಎಂದ ಶಿವಣ್ಣ!

  |

  ಶಿವರಾ ಜ್‌ಕುಮಾರ್ ಸದ್ಯ ಕನ್ನಡ ಚಿತ್ರರಂಗದ ಹಿರಿಯ ನಟ. ಯುವ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದರೆ ಆ ಚಿತ್ರತಂಡಗಳು ಶಿವರಾಜ್‌ಕುಮಾರ್ ಅವರಿಗೆ ಚಿತ್ರ ತೋರಿಸುವ ಪ್ರಯತ್ನ ಮಾಡುವುದು ಸರ್ವೇಸಾಮಾನ್ಯ. ಇನ್ನು ಚಿತ್ರಗಳ ಟ್ರೈಲರ್ ಲಾಂಚ್, ಆಡಿಯೊ ಬಿಡುಗಡೆ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮಗಳಿಗೆ ಶಿವ ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ತೆರಳಿ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿ ಹರಸುವುದು ರೂಢಿಯಾಗಿಬಿಟ್ಟಿದೆ.

  ಅದೇ ರೀತಿ ಮೊನ್ನೆಯಷ್ಟೇ ನಡೆದ ಪವನ್ ಒಡೆಯರ್ ನಿರ್ದೇಶನದ, ಇಶಾನ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೂ ಸಹ ನಟ ಶಿವ ರಾಜ್‌ಕುಮಾರ್ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡದ ಸದಸ್ಯರ ಕುರಿತು ವಿಶೇಷ ಮಾತುಗಳನ್ನಾಡಿದರು.

  ಈ ಸಂದರ್ಭದಲ್ಲಿ ರೇಮೊ ಚಿತ್ರದ ನಟ ಇಶಾನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಶಿವ ರಾಜ್‌ಕುಮಾರ್ ತಮ್ಮ ನೆಚ್ಚಿನ ನಟ ಯಾರು, ಯಾವ ನಟನಿಗಾಗಿ ತಾವು ಪ್ರಾಣ ಕೊಡಲೂ ಸಹ ಸಿದ್ಧ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದರು.

  ಮೊದಲು ಕಮಲ್ ಹಾಸನ್ ಎಂದ್ರೆ ತುಂಬಾ ಇಷ್ಟ

  ಮೊದಲು ಕಮಲ್ ಹಾಸನ್ ಎಂದ್ರೆ ತುಂಬಾ ಇಷ್ಟ

  ನಟ ಇಶಾನ್ ಮೊದಲು ಭೇಟಿಯಾದಾಗಲೇ ಈತ ಪಕ್ಕಾ ಹೀರೊ ಮೆಟೀರಿಯಲ್ ಎಂದುಕೊಂಡಿದ್ದೆ, ನಟನಾಗಲು ಯಾವ ರೀತಿಯ ಪರ್ಸನಾಲಿಟಿ ಇರಬೇಕೋ ಅದೇ ರೀತಿ ಇಶಾನ್ ಇದ್ದಾನೆ ಎಂದ ಶಿವ ರಾಜ್‌ಕುಮಾರ್ ಸಾಮಾನ್ಯವಾಗಿ ನಾನು ಹೀರೊ ಎಂದರೆ ಕಮಲ್ ಹಾಸನ್ ರೀತಿ ಇರಬೇಕು ಎಂದು ಯಾವಾಗಲೂ ಹೇಳುತ್ತೇನೆ ಎಂದರು ಹಾಗೂ ನಾನು ಮೊದಲು ಇಷ್ಟಪಡುವ ನಟ ಕಮಲ್ ಹಾಸನ್ ಎಂದು ತಿಳಿಸಿದರು.

  ಅಪ್ಪಾಜಿ ಅಂತ ಎಲ್ಲರೂ ಹೇಳ್ತಾರೆ ಬಿಡಿ

  ಅಪ್ಪಾಜಿ ಅಂತ ಎಲ್ಲರೂ ಹೇಳ್ತಾರೆ ಬಿಡಿ

  ಹೀಗೆ ಕಮಲ್ ಹಾಸನ್ ಕುರಿತು ಮಾತನಾಡುವುದನ್ನು ಮುಂದುವರೆಸಿದ ಶಿವ ರಾಜ್‌ಕುಮಾರ್ ಅಪ್ಪಾಜಿ ಅಂತ ಎಲ್ಲರೂ ಹೇಳ್ತಾರೆ ಬಿಡಿ, ಅವರು ಯಾರಿಗೆ ತಾನೇ ಸ್ಪೂರ್ತಿಯಲ್ಲ. ಆದರೆ ನನಗೆ ತುಂಬಾ ಸ್ಫೂರ್ತಿ ಎಂದರೆ ಅದರು ಕಮಲ್ ಹಾಸನ್ ಅವರು. ಬಹಳ ಬಹಳ ಇಷ್ಟ ಅವರೆಂದರೆ ಈಗಲೂ ಕೂಡ ಪ್ರಾಣ ಕೊಡ್ತೀನಿ ಅಂತಹ ಒಂದು ಪ್ರೀತಿ ಕಮಲ್ ಹಾಸನ್ ಮೇಲೆ, ಏಕೆಂದರೆ ನಟ ಎಂದರೆ ಅವರ ರೀತಿ ಇರಬೇಕು, ಅವರ ರೀತಿ ಕಣ್ಣು, ಪರ್ಸನಾಲಿಟಿ ಇರಬೇಕು ಎಂದು ಶಿವ ರಾಜ್‌ಕುಮಾರ್ ಹೇಳಿದರು. ಮಾತು ಮುಂದುವರಿಸಿದ ಶಿವ ರಾಜ್‌ಕುಮಾರ್ ನಂತರ ಅವರ ರೀತಿ ಹೃತಿಕ್ ರೋಷನ್ ಸೇರಿದಂತೆ ತುಂಬಾ ನಟರು ಬಂದರು, ಅದೇ ರೀತಿ ಇಶಾನ್ ಕೂಡ ಎಂದು ಹೊಗಳಿದರು.

  ಕಾಂತಾರ ಹೊಗಳಿದ ಶಿವಣ್ಣ

  ಕಾಂತಾರ ಹೊಗಳಿದ ಶಿವಣ್ಣ

  ಇನ್ನು ಇದೇ ಕಾರ್ಯಕ್ರಮದಲ್ಲಿ ಸದ್ಯದ ಸೆನ್ಸೇಶನ್ ಕಾಂತಾರ ಚಿತ್ರದ ಬಗ್ಗೆಯೂ ಶಿವ ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂತಾರ ಚಿತ್ರದ ಟ್ರೈಲರ್ ವೀಕ್ಷಿಸಿದ ನಂತರ ರಿಷಬ್ ಶೆಟ್ಟಿಗೆ ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದೆ ಹಾಗೂ ವಿಶೇಷವಾಗಿ ಸಿಂಗಾರ ಸಿರಿಯೇ ಹಾಡು ನನ್ನನ್ನು ತುಂಬಾ ಕಾಡುತ್ತಿದೆ ಎಂದು ರಿಷಬ್ ಶೆಟ್ಟಿ ಬಳಿ ಹೇಳಿದ್ದೆ ಎಂದರು ಶಿವ ರಾಜ್‌ಕುಮಾರ್. ಚಿತ್ರೀಕರಣದಲ್ಲಿ ಬ್ಯುಸಿ ಇರುವ ಕಾರಣ ಕಾಂತಾರ ಚಿತ್ರವನ್ನು ವೀಕ್ಷಿಸಲಾಗಲಿಲ್ಲ ಆದರೆ ಇನ್ನೆರಡು ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡುತ್ತೇನೆ ಎಂದು ಶಿವಣ್ಣ ಹೇಳಿದರು.

  English summary
  I am ready to sacrifice my life for Kamal Haasan says Shiva Rajkumar. Read on
  Thursday, November 10, 2022, 14:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X