»   » ಏನು ಹರ್ಷಿಕಾ ಪೂಣಚ್ಚ ಬಾಲಿವುಡ್ ಗೆ ಹೋಗ್ತಿಲ್ವಾ?

ಏನು ಹರ್ಷಿಕಾ ಪೂಣಚ್ಚ ಬಾಲಿವುಡ್ ಗೆ ಹೋಗ್ತಿಲ್ವಾ?

Posted By:
Subscribe to Filmibeat Kannada

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಅವರು ಬಾಲಿವುಡ್ ಚಿತ್ರರಂಗಕ್ಕೆ ಹಾರುತ್ತಿದ್ದಾರೆ ಅಂತ ಕಳೆದ ಅಕ್ಟೋಬರ್ ನಲ್ಲಿ ಭಾರಿ ಸುದ್ದಿಯಾಗಿತ್ತು. ಮುಂಬೈನಲ್ಲಿ ಸ್ಪೆಷಲ್ ಫೋಟೋ ಶೂಟ್ ಮಾಡಿಸಿಕೊಂಡಿದ್ದ ಹರ್ಷಿಕಾ ಪೂಣಚ್ಚ ಅವರು ಮಧುರ್ ಭಂಡಾರ್ಕರ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ ಗುಲ್ಲೆದ್ದಿತ್ತು.

ಇಷ್ಟೆಲ್ಲಾ ಆದ ಮೇಲೆ ಇದೀಗ ಹರ್ಷಿಕಾ ಅವರು ಉಲ್ಟಾ ಹೊಡೆದಿದ್ದಾರೆ. ಇಲ್ಲಾ ನಾನು ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಅಂತ ಹೇಳೇ ಇಲ್ಲ. ಇದೆಲ್ಲಾ ಮಾಧ್ಯಮದವರ ಕಲ್ಪನೆ ಅಂತ ಪತ್ರೀಕಾಗೋಷ್ಠಿ ಒಂದರಲ್ಲಿ ನುಡಿದಿದ್ದಾರೆ.[ಹರ್ಷಿಕಾ ಪೂಣಚ್ಚಗೆ ಲಕ್ ತಂದುಕೊಟ್ಟ ಒಂದೇ ಒಂದು ಫೋಟೋ.!]


ಹರ್ಷಿಕಾ ಮತ್ತು ಪಟ್ರೆ ಅಜಿತ್ ಅವರ 'ಬೀಟ್' ಚಿತ್ರದ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಮಾಧ್ಯಮದವರು ಬಾಲಿವುಡ್ ನಲ್ಲಿ ನಿಮ್ಮ ಸಿನಿಮಾ ಯಾವಾಗ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹರ್ಷಿಕಾ ಅವರು ನಾನು ಬಾಲಿವುಡ್ ನಲ್ಲಿ [ಮಧುರ್ ಭಂಡಾರ್ಕರ್ ಆಕ್ಷನ್ ಕಟ್ ನಲ್ಲಿ ಹರ್ಷಿಕಾ?] ಯಾವುದೇ ಸಿನಿಮಾ ಮಾಡುತ್ತಿಲ್ಲ ಅಂತ ಮೆಲ್ಲಗೆ ಜಾರಿಕೊಂಡಿದ್ದಾರೆ. ಮುಂದೆ ಓದಿ.....


ಹರ್ಷಿಕಾ ಬಾಲಿವುಡ್ ಗೆ ಹೋಗುತ್ತಿಲ್ಲ

ಫೋಟೋ ಶೂಟ್ ಮಾಡಿಸಿಕೊಂಡಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಇದೀಗ ಯಾವುದೇ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅಂತ 'ಬೀಟ್' ಪತ್ರೀಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.


ಪೋಟೋ ಶೂಟ್ ಮಾತ್ರ ಮಾಡಿಸಿದ್ದು

'ನಾನು ಬಾಲಿವುಡ್ ಗೆ ಹೋಗುತ್ತಿದ್ದೇನೆ ಅಂತ ಎಲ್ಲೂ ಹೇಳಿಕೊಂಡಿಲ್ಲ, ಬರೀ ಮುಂಬೈಗೆ ಹೋಗಿ ಫೋಟೋ ಶೂಟ್ ಮಾತ್ರ ಮಾಡಿಸಿಕೊಂಡು ಬಂದೆ' ಎಂದಿದ್ದಾರೆ ನಟಿ ಹರ್ಷಿಕಾ ಪೂಣಚ್ಚ ಅವರು.


ಮುಂಬೈನಲ್ಲಿ ಫೋಟೋ ಶೂಟ್

'ಮುಂಬೈಗೆ ಹೋಗಿದ್ದಾಗ ಮುನ್ನಾ ಸಿಂಗ್ ಎಂಬ ಸ್ಟಿಲ್ ಫೋಟೋಗ್ರಾಫರ್ ಪರಿಚಯ ಆಯಿತು. ನಾನು ಕೂಡ ಹಲವಾರು ದಿನಗಳಿಂದ ಫೋಟೋ ಶೂಟ್ ಮಾಡಿಸಿಕೊಳ್ಳಬೇಕು ಅಂದುಕೊಂಡಿದ್ದೆ. ಮುನ್ನಾ ಸಿಂಗ್ ಅವರು ಸ್ಟಾರ್ ಸೆಲೆಬ್ರಿಟಿಗಳಿಗೆ ಫೋಟೋ ಶೂಟ್ ಮಾಡಿದ್ದರಿಂದ ಅವರ ಬಳಿ ಫೋಟೋ ಶೂಟ್ ಮಾಡಿಸಿಕೊಂಡೆ ಅಷ್ಟೇ'. ಎಂದಿದ್ದಾರೆ ಹರ್ಷಿಕಾ.


ಜಸ್ಟ್ ಮೇಕ್ ಓವರ್ ಗೆ ಫೋಟೋ ಶೂಟ್

'ಅಷ್ಟಕ್ಕೂ ಫೋಟೋ ಶೂಟ್ ಮಾಡಿಸಿದ್ದು ಮೇಕ್ ಓವರ್ ಗೆ ಹೊರತು ಬಾಲಿವುಡ್ ಸಿನಿಮಾದಲ್ಲಿ ನಟಿಸುವುದಕ್ಕಲ್ಲ' ಎಂದು ಹರ್ಷಿಕಾ ಪೂಣಚ್ಚ ಅವರು 'ಬೀಟ್' ಚಿತ್ರದ ಪತ್ರೀಕಾಗೋಷ್ಠಿಯಲ್ಲಿ ನುಡಿದಿದ್ದಾರೆ.


ಬಾಲಿವುಡ್ ಗೆ ಹೋಗೋ ಆಸೆ ಇಲ್ವಾ?

ಬಾಲಿವುಡ್ ನ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರನ್ನು ಭೇಟಿ ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಒಳ್ಳೆ ಅವಕಾಶ ಮತ್ತು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಹೀಗಂತ ಹರ್ಷಿಕಾ ಅವರೇ ಹೇಳಿದ್ದಾರೆ.


'ಬೀಟ್' ಯಾವಾಗ ಬರುತ್ತೆ

ನಟ 'ಪಟ್ರೆ' ಅಜಿತ್ ಮತ್ತು ಹರ್ಷಿಕಾ ಪೂಣಚ್ಚ ಅವರು ಕಾಣಿಸಿಕೊಂಡಿರುವ 'ಬೀಟ್' ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಘನಶ್ಯಾಮ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಿರ್ಮಾಪಕ ಕೆ.ರಾಜು ಅವರು ಬಂಡವಾಳ ಹೂಡಿದ್ದಾರೆ.


English summary
Kannada actress Harshika Poonacha has taken an U Turn by saying that she didn't say that she was doing a Bollywood film. Earlier, Harshika had done a photo shoot and had said that she will be doing a Bollywood film soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada