For Quick Alerts
  ALLOW NOTIFICATIONS  
  For Daily Alerts

  ''ಗೌಡರ ಹುಡುಗನನ್ನೇ ಮದುವೆ ಆಗುವೆ'' ಎಂದು ನಸುನಕ್ಕ ರಚಿತಾ ರಾಮ್.!

  |

  ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆ ಸಂಭ್ರಮ ಜೋರಾಗಿರೋದ್ರಿಂದ, ಡಿಂಪಲ್ ಕ್ವೀನ್ ರಚಿತಾ ರಾಮ್ ವಿವಾಹದ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲ ಇದ್ದೇ ಇದೆ. ಅದ್ರಲ್ಲೂ, ರಚಿತಾ ರಾಮ್ ರಾಜಕಾರಣಿಯೊಬ್ಬರನ್ನು ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ರೆಕ್ಕೆ-ಪುಕ್ಕ ಕಟ್ಟಿಕೊಂಡು ಗಾಂಧಿನಗರದಲ್ಲಿ ಹಾರಾಡಿದ ಮೇಲೆ 'ಆ ಯುವ ಪೊಲಿಟೀಷಿಯನ್' ಯಾರಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

  ಇದೇ ಕಾರಣಕ್ಕೆ ರಚಿತಾ ರಾಮ್ ಎಲ್ಲೇ ಸಿಕ್ಕರೂ, ''ಮದುವೆ ಯಾವಾಗ.? ಹುಡುಗ ಯಾರು.?'' ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬರುತ್ತಲೇ ಇದೆ.

  ನನ್ ಮದ್ವೆ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬುಲೆಟ್ ಹಾರಿಸಿದ ಬುಲ್ ಬುಲ್

  ''ನಾನು ಯಾರನ್ನೂ ಲವ್ ಮಾಡ್ತಿಲ್ಲ. ಸದ್ಯಕ್ಕೆ ಸಿನಿಮಾಗಳಲ್ಲಿ ಬಿಜಿ ಇದ್ದೇನೆ'' ಎಂದು ಈಗಾಗಲೇ ಹಲವು ಬಾರಿ ನಟಿ ರಚಿತಾ ರಾಮ್ ಕಡ್ಡಿತುಂಡು ಮಾಡಿದ ಹಾಗೆ ಹೇಳಿದ್ದರು. ಆದರೂ ಪದೇ ಪದೇ ಮದುವೆ ಬಗ್ಗೆಯೇ ಪ್ರಶ್ನೆ ಕೇಳಿಬರುತ್ತಿರುವುದರಿಂದ ''ನಾನು ಲವ್ ಮ್ಯಾರೇಜ್ ಗೂ ಸೈ, ಅರೇಂಜ್ಡ್ ಮ್ಯಾರೇಜ್ ಗೂ ಸೈ. ನಾವು ಗೌಡ್ರಾಗಿರೋದ್ರಿಂದ ಗೌಡರ ಹುಡುಗನನ್ನೇ ಮದುವೆ ಆಗುವುದು'' ಅಂತ ರಚಿತಾ ರಾಮ್ ಹೇಳಿದ್ದಾರೆ.

  ಯಾರಾದರೂ ರಾಜಕಾರಣಿಯನ್ನು ಮದುವೆ ಮಾಡ್ಕೊಳ್ತೀನಿ ಏನಿವಾಗ?

  ಅಂದ್ಹಾಗೆ, ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ರಚಿತಾ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ನಟನೆಯ 'ನಟ ಸಾರ್ವಭೌಮ' ಚಿತ್ರ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಇದಲ್ಲದೇ, ರಚಿತಾ ಕೈಯಲ್ಲಿ ಇನ್ನೂ ಎರಡ್ಮೂರು ಚಿತ್ರಗಳಿವೆ. ಹೀಗಾಗಿ, ಅವರ ಪಾಲಿಗೆ ಮದುವೆ ದೂರದ ಮಾತು.

  English summary
  I'm Gowda, will marry a Gowda says Kannada Actress Rachita Ram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X