»   » ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?

ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?

Posted By:
Subscribe to Filmibeat Kannada

'ಕೋಟಿಗೊಬ್ಬ-2' ಚಿತ್ರ ಕೋಟಿ-ಕೋಟಿ ಕಲೆಕ್ಷನ್ ಮಾಡುತ್ತಿದೆ. ಒಂದೇ ವಾರದಲ್ಲಿ ಚಿತ್ರ ಕೊಂಡುಕೊಂಡ ವಿತರಕರಿಗೆ ಲಾಭ ಆಗುತ್ತಿದೆ ಎಂಬ ಖುಷಿ ಹಂಚಿಕೊಳ್ಳಲು ಮೊನ್ನೆಯಷ್ಟೇ ಚಿತ್ರತಂಡ ಸಂತೋಷ ಕೂಟ ಆಯೋಜಿಸಿತ್ತು.

ಎಲ್ಲರೂ ಖುಷಿಯಿಂದ ಮಾತನಾಡುತ್ತಿರುವಾಗಲೇ, 'ಕೋಟಿಗೊಬ್ಬ-2' ಚಿತ್ರಕ್ಕೆ ಬಂಡವಾಳ ಹಾಕಿರುವ ಸೂರಪ್ಪ ಬಾಬು ಕಿಚ್ಚ ಸುದೀಪ್ ಗೆ ಬಹಿರಂಗ ಕ್ಷಮೆಯಾಚಿಸಿದರು. ಅದಕ್ಕೆ ಕಾರಣ ಇಬ್ಬರ ಮಧ್ಯೆ ಆಗಿದ್ದ ಜಗಳ.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ಸೂರಪ್ಪ ಬಾಬು ಮತ್ತು ಸುದೀಪ್ ನಡುವೆ ಗಲಾಟೆ ಆಗಿದ್ದು ಯಾಕೆ? ಇದುವರೆಗೂ 'ಕೋಟಿಗೊಬ್ಬ-2' ಚಿತ್ರದ ಪ್ರೆಸ್ ಮೀಟ್ ಗಳಲ್ಲಿ ಸೂರಪ್ಪ ಬಾಬು ಯಾಕೆ ಕಾಣಿಸಿಕೊಳ್ಳುತ್ತಿರಲಿಲ್ಲ ಎಂಬ ಅನುಮಾನ ನಿಮಗೆ ಇದ್ದರೆ, ಕೆಳಗಿರುವ ಸ್ಲೈಡ್ ಗಳಲ್ಲಿರುವ ಮಾಹಿತಿ ಓದಿ, ಡೌಟ್ ಕ್ಲಿಯರ್ ಮಾಡಿಕೊಳ್ಳಿ.....


'ಕೋಟಿಗೊಬ್ಬ-2' ಪ್ರೆಸ್ ಮೀಟ್ ಗಳಿಗೆ ಸೂರಪ್ಪ ಬಾಬು ಬರ್ತಿರ್ಲಿಲ್ಲ! ಯಾಕೆ?

''ಕೋಟಿಗೊಬ್ಬ-2' ಚಿತ್ರವನ್ನ ಎರಡು ಭಾಷೆಯಲ್ಲಿ ಮಾಡಿದ್ದರಿಂದ ನಾನು ಹೆಚ್ಚು ಕಾಲ ಚೆನ್ನೈನಲ್ಲಿ ಇರಬೇಕಾಯ್ತು. ಹೀಗಾಗಿ ಇದುವರೆಗೂ ಒಂದು ಪ್ರೆಸ್ ಮೀಟ್ ಗೂ ನಾನು ಬರಲು ಸಾಧ್ಯವಾಗ್ಲಿಲ್ಲ'' - ಸೂರಪ್ಪ ಬಾಬು [ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]


ಸುದೀಪ್ ಜೊತೆ ಜಗಳ

''ಈ ಸಿನಿಮಾ ಶುರು ಆದಾಗಿನಿಂದ ಹಿಡಿದು, ಮೊದಲನೇ ಶೋ ಕಾಣುವವರೆಗೂ ನಾನು ಮತ್ತು ಸುದೀಪ್ ತುಂಬಾ ಜಗಳ ಆಡಿದ್ದೇವೆ. ತುಂಬಾ ಭಿನ್ನಾಭಿಪ್ರಾಯ ಇತ್ತು'' - ಸೂರಪ್ಪ ಬಾಬು


ವಾಟ್ಸ್ ಆಪ್ ನೋಡಿಬಿಟ್ರೆ, ಶಾಕ್ ಗ್ಯಾರೆಂಟಿ!

''ನಮ್ಮದ್ದು ಅವರದ್ದು ವಾಟ್ಸ್ ಆಪ್ ನೋಡಿಬಿಟ್ರೆ....ಪುಟಗಟ್ಟಲೆ ಜಗಳ ಆಡಿದ್ದೇವೆ'' - ಸೂರಪ್ಪ ಬಾಬು


ಫ್ರೆಂಡ್ ಶಿಪ್ ಕಟ್

''ಬಿಡುಗಡೆಗೆ ಮೂರು ದಿನ ಮುಂಚೆ ನನಗೆ ತುಂಬಾ ಟೆನ್ಷನ್ ಇತ್ತು. ಚೆನ್ನೈನಲ್ಲಿ ಇದ್ದೆ. ಸುದೀಪ್ ಜೊತೆ ನಾನು ನಡೆದುಕೊಂಡ ರೀತಿ ನೋಡಿದ್ರೆ, ನಮ್ಮದು-ಅವರದ್ದು ಮುಗಿಯಿತು. ಫ್ರೆಂಡ್ ಶಿಪ್ ಕಟ್ ಆಗ್ಬಿಡುತ್ತೆ ಅಂದ್ಕೊಂಡಿದ್ದೆ'' - ಸೂರಪ್ಪ ಬಾಬು


ತಪ್ಪು ಮಾಡಿದ್ದೀನಿ

''ಮಧ್ಯರಾತ್ರಿ ಮೂರು ಗಂಟೆಗೆ ನಾನು ಮೆಸೇಜ್ ಮಾಡಿದಾಗಲೂ ಸುದೀಪ್ ರಿಪ್ಲೈ ಮಾಡಿದ್ದಾರೆ. ಆಗ ನನಗೆ ಅನಿಸ್ತು. ಜಗಳ ಆಡಿ ತಪ್ಪು ಮಾಡಿದೆ ಅಂತ'' - ಸೂರಪ್ಪ ಬಾಬು


ಕ್ಷಮಿಸಿ ಸರ್

''ನಿಜಕ್ಕೂ 'ಸಾರಿ' ಸರ್, ನಿಮಗೆ ತುಂಬಾ ಹರ್ಟ್ ಮಾಡಿದ್ದೀನಿ. ಐ ಆಮ್ ರಿಯಲಿ ಸಾರಿ ಸರ್. ಯಾಕಂದ್ರೆ, ಅವತ್ತಿನ ನನ್ನ ಆ ಪರಿಸ್ಥಿತಿ ಹಾಗಿತ್ತು'' - ಸೂರಪ್ಪ ಬಾಬು


ಸುದೀಪ್ ಕೊಟ್ಟ ಪ್ರತಿಕ್ರಿಯೆ

''ನಾನು - ಸೂರಪ್ಪ ಬಾಬು ಜಗಳ ಆಡಿದ್ದೀವಿ ಅಂದ್ರೆ, ಅದು ಒಂದು ಒಳ್ಳೆಯ ಸಿನಿಮಾ ಮಾಡುವುದಕ್ಕಾಗಿ ಹೊರತು ದುಡ್ಡಿಗಾಗಿ ಅಲ್ಲ. ಒಂದು ಫ್ಯಾಮಿಲಿ ತರಹ ಇದ್ರೆ ಮಾತ್ರ ಉತ್ತಮ ಚಿತ್ರ ಮಾಡಲು ಸಾಧ್ಯ'' - ಸುದೀಪ್


ಮೊದಲನೇ ವಾರ ಲಾಭ

''ಒಂದು ಸಂತೋಷದ ವಿಷಯ ಏನಂದ್ರೆ, ನಮ್ಮಿಂದ ಚಿತ್ರ ಪಡೆದುಕೊಂಡ ಏಳು ವಿತರಕರಿಗೆ ಮೊದಲನೇ ವಾರದಲ್ಲೇ ಲಾಭ ಆಗುತ್ತಿದೆ. ನಾಲ್ಕು ದಿನಗಳಲ್ಲಿ 18 ಕೋಟಿ ಕಲೆಕ್ಷನ್ ಆಗಿದೆ'' - ಸೂರಪ್ಪ ಬಾಬು


English summary
'Kotigobba-2' producer Surappa Babu openly apologized Kiccha Sudeep for his rude behavior.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada