For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ ಬಂದಿದೆಲ್ಲಾ ನಿಜ ಅಲ್ಲ ಎಂದ 'ಕಿರಿಕ್' ನಟಿ ಸಂಯುಕ್ತ ಹೆಗಡೆ.!

  By Harshitha
  |

  ಇಂದು ಬೆಳಗ್ಗೆಯಿಂದ ಸ್ಯಾಂಡಲ್ ವುಡ್ ನಲ್ಲಿ ಬ್ರೇಕಿಂಗ್ ನ್ಯೂಸ್ ಆದವರು 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗಡೆ.

  ತಮಿಳು ಸಿನಿಮಾದಲ್ಲಿ ನಟಿಸಲು ಆಫರ್ ಬಂದಿರುವುದರಿಂದ, ಡೇಟ್ಸ್ ಕ್ಲ್ಯಾಶ್ ಆಗುತ್ತೆ ಎಂಬ ಕಾರಣಕ್ಕೆ ಕನ್ನಡದ 'ಕಾಲೇಜ್ ಕುಮಾರ್' ಚಿತ್ರಕ್ಕೆ ಸಂಯುಕ್ತ ಹೆಗಡೆ ಕೈಕೊಟ್ಟಿದ್ದಾರೆ ಎಂದು ನ್ಯೂಸ್ ಚಾನೆಲ್ ಗಳಲ್ಲಿ 'ಬಿಗ್ ಬ್ರೇಕಿಂಗ್ ನ್ಯೂಸ್' ಆಯ್ತು.[ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]

  ಸಂಯುಕ್ತ ಹೆಗಡೆಗೆ ಕಾಲಿವುಡ್ ನಿಂದ ಆಫರ್ ಬಂದಿರುವುದು ನಿಜ. ಡೇಟ್ಸ್ ವಿಚಾರವಾಗಿ ಪ್ರಾಬ್ಲಂ ಆಗಿರುವುದು ಸತ್ಯ ಎಂದ 'ಕಾಲೇಜ್ ಕುಮಾರ್' ನಿರ್ಮಾಪಕ ಪದ್ಮನಾಭ ನಿರ್ಮಾಪಕರ ಸಂಘದ ಮೊರೆ ಹೋಗಿದ್ದರು. ಇದೀಗ ವಿವಾದ ಬಗೆಹರಿದ ಮೇಲೆ 'ಟಿವಿಯಲ್ಲಿ ಬಂದಿದೆಲ್ಲ ನಿಜ ಅಲ್ಲ' ಎಂದು ಫೇಸ್ ಬುಕ್ ನಲ್ಲಿ ನಟಿ ಸಂಯುಕ್ತ ಹೆಗಡೆ ಹೊಸ ರಾಗ ಎಳೆದಿದ್ದಾರೆ. ಮುಂದೆ ಓದಿರಿ....

  ಫೇಸ್ ಬುಕ್ ನಲ್ಲಿ ಸಿಡಿದೆದ್ದ ಸಂಯುಕ್ತ

  ಫೇಸ್ ಬುಕ್ ನಲ್ಲಿ ಸಿಡಿದೆದ್ದ ಸಂಯುಕ್ತ

  ವಿವಾದ ಭುಗಿಲೆದ್ದಾಗ ಪ್ರತಿಕ್ರಿಯೆ ನೀಡಲು ಹಿಂದು ಮುಂದು ನೋಡಿದ ನಟಿ ಸಂಯುಕ್ತ ಹೆಗಡೆ, ಇದೀಗ ವಿವಾದ ಇತ್ಯರ್ಥವಾದ ಬಳಿಕ ಫೇಸ್ ಬುಕ್ ನಲ್ಲಿ ಸಿಡಿದೆದ್ದಿದ್ದಾರೆ. [ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?]

  ಕನ್ನಡಕ್ಕೆ ಪ್ರಾಮುಖ್ಯತೆ ಕೊಡ್ತಾರಂತೆ.!

  ಕನ್ನಡಕ್ಕೆ ಪ್ರಾಮುಖ್ಯತೆ ಕೊಡ್ತಾರಂತೆ.!

  ''ಕನ್ನಡ ನನ್ನ ಮಾತೃಭಾಷೆ. ನಾನು ಕನ್ನಡ ಭಾಷೆಗೆ ಅಪಾರ ಗೌರವ ಕೊಡುತ್ತೇನೆ. ನನ್ನ ಮೊದಲ ಪ್ರಾಮುಖ್ಯತೆ ಸದಾ ಕನ್ನಡಕ್ಕೆ'' ಎಂದು ಫೇಸ್ ಬುಕ್ ನಲ್ಲಿ ನಟಿ ಸಂಯುಕ್ತ ಭಾಷಾ ಪ್ರೇಮ ಮೆರೆದಿದ್ದಾರೆ. [ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ: 'ಕಿರಿಕ್' ಹುಡುಗಿಗೆ ಕನ್ನಡಿಗರ ವಾರ್ನಿಂಗ್!]

  ಸತ್ಯ ತಿಳಿದುಕೊಳ್ಳಿ...

  ಸತ್ಯ ತಿಳಿದುಕೊಳ್ಳಿ...

  ''ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಸತ್ಯ ತಿಳಿದುಕೊಳ್ಳಿ.. ಪರಿಸ್ಥಿತಿಯನ್ನು ಅವಲೋಕಿಸಿ'' ಎಂದಿದ್ದಾರೆ ನಟಿ ಸಂಯುಕ್ತ ಹೆಗಡೆ

  ಟಿವಿಯಲ್ಲಿ ಬರುವುದೆಲ್ಲ ನಿಜ ಅಲ್ಲ.!

  ಟಿವಿಯಲ್ಲಿ ಬರುವುದೆಲ್ಲ ನಿಜ ಅಲ್ಲ.!

  ''ಟಿವಿಯಲ್ಲಿ ನೀವು ನೋಡುವುದು, ಕೇಳುವುದೆಲ್ಲ ನಿಜ ಅಲ್ಲ. ನಾನು ಆಕ್ಷೇಪಾರ್ಹವಾಗಿ ಮಾತನಾಡಿಲ್ಲ'' - ಸಂಯುಕ್ತ ಹೆಗಡೆ

  ಯಾರೂ ಹೇಳ್ಬೇಕಾಗಿಲ್ಲ

  ಯಾರೂ ಹೇಳ್ಬೇಕಾಗಿಲ್ಲ

  ''ನನ್ನ ಭಾಷೆ ಮೇಲೆ ನನಗೆ ಪ್ರೀತಿ ಇದೆ. ಈ ಕುರಿತು ಯಾರೂ ನನಗೆ ವಿಶ್ಲೇಷಿಸುವ ಅಗತ್ಯ ಇಲ್ಲ'' ಎಂದಿದ್ದಾರೆ ನಟಿ ಸಂಯುಕ್ತ ಹೆಗಡೆ

  English summary
  ''Everything you see and listen on TV isn't true. Kannada is mother tongue and i respect it immensely'' says Kannada Actress Samyuktha Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X