»   » ದರ್ಶನ್ ಅಭಿಮಾನಿಗಳ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಭಯ ಇತ್ತಂತೆ.!

ದರ್ಶನ್ ಅಭಿಮಾನಿಗಳ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಭಯ ಇತ್ತಂತೆ.!

Posted By:
Subscribe to Filmibeat Kannada

ಶೀರ್ಷಿಕೆ ಓದಿ ಏನೇನೋ ಕಲ್ಪನೆ ಮಾಡಿಕೊಳ್ಳುವ ಮುನ್ನ ಪೂರ್ತಿ ಮ್ಯಾಟರ್ ಓದ್ಕೊಂಡ್ ಬಿಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ನಾಳೆ (ಸೆಪ್ಟೆಂಬರ್ 29) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ತಾರಕ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 'ತಾರಕ್' ಸಿನಿಮಾಗೆ ಸ್ವಲ್ಪ ಡಿಫರೆಂಟ್ ಟ್ಯೂನ್ಸ್ ಕಂಪೋಸ್ ಮಾಡಲು ಮುಂದಾಗಿದ್ದ ಅರ್ಜುನ್ ಜನ್ಯಗೆ ಒಂದು ಭಯ ಕಾಡಿತ್ತಂತೆ.

'ತಾರಕ್' ಹಾಡುಗಳನ್ನು ದರ್ಶನ್ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ, ಏನೋ ಎಂಬ ಭಯ ಹಾಗೂ ಆತಂಕ ಅರ್ಜುನ್ ಜನ್ಯಗಿತ್ತಂತೆ. ಹಾಗಂತ ಸ್ವತಃ ಅರ್ಜುನ್ ಜನ್ಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ....

ದರ್ಶನ್ ಫ್ಯಾನ್ಸ್ ಬಗ್ಗೆ ಭಯ ಇತ್ತು

''ನನಗೆ ದರ್ಶನ್ ಫ್ಯಾನ್ಸ್ ಬಗ್ಗೆ ಸ್ವಲ್ಪ ಭಯ ಇತ್ತು. ಯಾಕಂದ್ರೆ, 'ತಾರಕ್' ಆಲ್ಬಂನ ದರ್ಶನ್ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅಂತ ಗೊತ್ತಿರಲಿಲ್ಲ. ಈ ಬಗ್ಗೆ ಆತಂಕ ಇತ್ತು'' ಎಂದು ಸಂದರ್ಶನವೊಂದರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.

ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

ರಿಸ್ಕ್ ಇತ್ತು

''ತಾರಕ್' ಆಲ್ಬಂನಲ್ಲಿ ಡಿಫರೆಂಟ್ ಆಗಿ ಏನಾದರೂ ಮಾಡಬೇಕಿತ್ತು. ಹಾಗೇ ಮ್ಯೂಸಿಕ್ ಕೂಡ ರಿಪೀಟ್ ಆಗದಂತೆ ಎಚ್ಚರ ವಹಿಸಬೇಕಿತ್ತು. ಹೀಗಾಗಿ, ಸ್ವಲ್ಪ ರಿಸ್ಕ್ ಇತ್ತು, ಆದರೂ ನನ್ನ ಪ್ರಯತ್ನ ನಾನು ಮಾಡಿದ್ದೇನೆ'' ಎಂದಿದ್ದಾರೆ ಅರ್ಜುನ್ ಜನ್ಯ.

''ತಾರಕ್' ದರ್ಶನ್ ಮೇಲೆ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆಗಿದೆ''

ಹೊಸ ಮ್ಯೂಸಿಕ್ ಸ್ಟೈಲ್ ಪ್ರಯೋಗ ಮಾಡುವ ಅವಕಾಶ ಸಿಕ್ತು

''ತಾರಕ್' ಪಕ್ಕಾ ಕ್ಲಾಸ್ ಸಿನಿಮಾ. ಫ್ಯಾಮಿಲಿ ಎಂಟರ್ ಟೇನರ್. ಆಲ್ಬಂ ಕೂಡ ಪೆಪ್ಪಿ ಆಗಿದೆ. ದರ್ಶನ್ ಸರ್ ಚಿತ್ರಕ್ಕೆ ಹೊಸ ಮ್ಯೂಸಿಕ್ ಸ್ಟೈಲ್ ಪ್ರಯೋಗ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಅರ್ಜುನ್ ಜನ್ಯ.

'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

'ಚಕ್ರವರ್ತಿ' ಹಾಡುಗಳಿಗಿಂತಲೂ ಭಿನ್ನ

''ದರ್ಶನ್ ಸರ್ ರವರ 'ಚಕ್ರವರ್ತಿ' ಚಿತ್ರಕ್ಕೂ ನಾನೇ ಸಂಗೀತ ನೀಡಿದ್ದೆ. ಆದ್ರೆ, 'ಚಕ್ರವರ್ತಿ' ಹಾಡುಗಳಿಗಿಂತಲೂ 'ತಾರಕ್' ಹಾಡುಗಳು ವಿಭಿನ್ನವಾಗಿವೆ'' ಅಂತಾರೆ ಅರ್ಜುನ್ ಜನ್ಯ

ದರ್ಶನ್ ಅಭಿಮಾನಿಗಳಿಗೆ 'ತಾರಕ್' ಆಲ್ಬಂ ಇಷ್ಟವಾಗಿದೆ

'ತಾರಕ್' ಚಿತ್ರದಲ್ಲಿ ದರ್ಶನ್ ಇಂಟ್ರೋಡಕ್ಷನ್ ಹಾಡು ಪೆಪ್ಪಿ ಆಗಿದ್ರೆ, 'ಕುಡಿ ಮಗಾ' ಹಾಡು ಪಬ್ ಸ್ಟೈಲ್ ಸಾಂಗ್. ಸಿನಿಮಾದಲ್ಲಿ ರೋಮ್ಯಾಂಟಿಕ್ ಹಾಗೂ ಪ್ಯಾಥೋ ಸಾಂಗ್ ಕೂಡ ಇದೆ. ಎಲ್ಲದರ ಸಮಿಶ್ರಣ ಆಗಿರುವ 'ತಾರಕ್' ಆಲ್ಬಂ ದರ್ಶನ್ ಅಭಿಮಾನಿಗಳಿಗೆ ಮಾತ್ರ ಅಲ್ಲ, ಎಲ್ಲರಿಗೂ ಹಿಡಿಸಿದೆ. ಹೀಗಾಗಿ ಸಂಗೀತ ಸಂಯೋಜನೆ ಮಾಡುವ ಮೊದಲು ಅರ್ಜುನ್ ಜನ್ಯಗಿದ್ದ ಭಯ ಹಾಗೂ ಆತಂಕ ಈಗ ಮಾಯವಾಗಿದೆ.

English summary
''I was afraid of Darshan sir's fans, since I din't know how they will take it (Tarak Album)'' says Music Director Arjun Janya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X