»   » 'ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್

'ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್-ವಿಜಯಲಕ್ಷ್ಮಿ ದಾಂಪತ್ಯ ವಿರಸ ಪ್ರಕರಣ ಸುಖಾಂತ್ಯ ಕಾಣುವ ಸೂಚನೆ ಸಿಕ್ಕಿದೆ. 'ಇನ್ಮುಂದೆ ಪತ್ನಿ ವಿಜಯಲಕ್ಷ್ಮಿ ಜೊತೆ ಗಲಾಟೆ ಮಾಡಲ್ಲ' ಅಂತ ಬೆಂಗಳೂರು ಪೊಲೀಸರಿಗೆ ನಟ ದರ್ಶನ್ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ಇಂದು ದರ್ಶನ್ ರವರ ವಿಚಾರಣೆ ನಡೆಯಿತು. [ಪತ್ನಿಯಿಂದ ದೂರು, ವಿಚಾರಣೆಗೆ ಪೊಲೀಸ್ ಠಾಣೆಗೆ ಬಂದ ದರ್ಶನ್]

ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಾದ ಗಲಾಟೆ ಬಗ್ಗೆ ದರ್ಶನ್ ವಿರುದ್ಧ ಭದ್ರತಾ ಸಿಬ್ಬಂದಿ ಬಿ.ಎಸ್.ದೇವರಾಜ್ ನೀಡಿದ ದೂರು ಹಾಗೂ ಪತ್ನಿ ವಿಜಯಲಕ್ಷ್ಮಿ ಮಾಡಿದ ಮನವಿ ಅನ್ವಯ ಇಂದು ಪೊಲೀಸರು ದರ್ಶನ್ ರವರಿಂದ ವಿವರಣೆ ಪಡೆದರು. ಮುಂದೆ ಓದಿ....[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ತಪ್ಪೊಪ್ಪಿಕೊಂಡ ನಟ ದರ್ಶನ್

'ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಿ ಗಲಾಟೆ ಮಾಡಿದ್ದು ನಿಜ' ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. [ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್]

ಪೊಲೀಸರಿಗೆ ದರ್ಶನ್ ಹೇಳಿದ್ದೇನು?

''ಅವತ್ತು ಅಪಾರ್ಟ್ಮೆಂಟ್ ಗೆ ಕುಡಿದು ಹೋಗಿದ್ದು ನಿಜ. ಪತ್ನಿ ಜೊತೆ ಮಾತನಾಡಲು ಹೋದಾಗ ಮಗ ಬಂದ. ಅವನನ್ನು ಎತ್ತಿಕೊಳ್ಳಲು ಹೋದಾಗ ಸೆಕ್ಯೂರಿಟಿ ಬಿಡಲಿಲ್ಲ. ಆಗ ಗಲಾಟೆ ಆಗಿದ್ದು ನಿಜ'' ಅಂತ ಡಿಸಿಪಿ ಲೋಕೇಶ್ ಕುಮಾರ್ ಗೆ ದರ್ಶನ್ ಹೇಳಿಕೆ ನೀಡಿದ್ದಾರೆ. [ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್]

ಅನಿವಾರ್ಯವಾಗಿ ಹೊಡೆದೆ!

''ನನ್ನ ಎದೆ ಭಾಗಕ್ಕೆ ಸೆಕ್ಯೂರಿಟಿ ಕೈ ಹಾಕಲು ಮುಂದೆ ಬಂದಾಗ, ಅನಿವಾರ್ಯವಾಗಿ ಅವನ ಹೊಟ್ಟೆ ಭಾಗಕ್ಕೆ ಹೊಡೆಯಬೇಕಾಯ್ತು'' ಅಂತ ದರ್ಶನ್ ತಿಳಿಸಿದ್ದಾರೆ. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಕಾರಿನ ಗ್ಲಾಸ್ ಗೂ ನನಗೂ ಸಂಬಂಧ ಇಲ್ಲ!

''Audi ಕಾರಿನ ಗಾಜು ನಾನು ಹೊಡೆದಿಲ್ಲ. ಕಾರು ಜಖಂ ಆಗಿರುವುದಕ್ಕೆ ನಾನು ಕಾರಣ ಅಲ್ಲ'' ಅಂತ ಇದೇ ವೇಳೆ ದರ್ಶನ್ ತಿಳಿಸಿದ್ದಾರೆ. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ

''ಅಂಬರೀಶ್ ರವರ ಸಮ್ಮುಖದಲ್ಲಿ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ'' ಅಂತ ನಟ ದರ್ಶನ್ ಪೊಲೀಸರಿಗೆ ಮಾತು ಕೊಟ್ಟಿದ್ದಾರೆ.

ಪತ್ನಿ ಜೊತೆ ಗಲಾಟೆ ಮಾಡಲ್ಲ!

''ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ'' ಅಂತಲೂ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ನಟ ದರ್ಶನ್.

ಮುಂದೇನು?

ದರ್ಶನ್ ನೀಡಿರುವ ಹೇಳಿಕೆಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್.ಐ.ಆರ್ ದಾಖಲಾಗದೇ ಇರುವುದರಿಂದ ಕೇಸ್ ಇಲ್ಲಿಗೆ ಕ್ಲೋಸ್ ಆಗುವ ಸಾಧ್ಯತೆ ಹೆಚ್ಚು.

ಎಲ್ಲವೂ ಈಗ ಅಂಬರೀಶ್ ಕೈಯಲ್ಲಿ

ಪೊಲೀಸ್ ಠಾಣೆಯಿಂದ ಇದೀಗ ಅಂಬರೀಶ್ ಮನೆ ಬಾಗಿಲಿಗೆ ದರ್ಶನ್ ದಾಂಪತ್ಯ ಕಲಹ ಪ್ರಕರಣ ಶಿಫ್ಟ್ ಆಗಿದೆ. ಅಂಬರೀಶ್ ಕೈಯಾರೆ ಮತ್ತೆ ದರ್ಶನ್ ದಂಪತಿ ಬಾಯಿಗೆ ಮೈಸೂರು ಪಾಕ್ ಬೀಳುವಂತಾದರೆ, ಅಭಿಮಾನಿಗಳಿಗೆ ಅದೇ ಸಂತೋಷದ ವಿಷಯ.

English summary
Kannada Actor Darshan has admitted his 'Bad Conduct' with his wife and promises, ''I will never ever quarrel with my wife' to Tyagarajanagar police station during the interrogation following the complaint lodged by security staff of Prestige South Ridge Apartment, Bengaluru and his wife Vijayalakshmi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada