For Quick Alerts
  ALLOW NOTIFICATIONS  
  For Daily Alerts

  ಸಂಜನಾ ವಿರುದ್ಧ ಮೊಕದ್ದಮೆ ಹೂಡುತ್ತೇನೆಂದ ಪ್ರಶಾಂತ್ ಸಂಬರ್ಗಿ

  |

  ಡ್ರಗ್ ಪೆಡ್ಲರ್ ಜೊತೆಗೆ ನಂಟು ಆರೋಪದ ಮೇಲೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  ಅಭಿಮಾನಿಗಳ ಪ್ರೀತಿ ನೋಡಿ ಶಾಕ್ ಆಯ್ತು | Filmibeat Kannada

  ಕೆಲವು ದಿನಗಳ ಮುನ್ನಾ, ಸಂಜನಾ ಆಪ್ತ ರಾಹುಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈಗ ಸಂಜನಾ ಅವರನ್ನೂ ಸಹ ವಶಕ್ಕೆ ಪಡೆದಿದ್ದು, ಅವರನ್ನೂ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ.

  ಹೀಗಿರುವಾಗ ಸಂಜನಾ ಹಾಗೂ ರಾಗಿಣಿ ವಿರುದ್ಧ ವಾಕ್ ಸಮರ ಸಾರಿರುವ ಪ್ರಶಾಂತ್ ಸಂಬರ್ಗಿ, 'ಸಂಜನಾ ಗಲ್ರಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದಿದ್ದಾರೆ.

  ಸಂಜನಾ ವಿರುದ್ಧ ಪ್ರಕರಣ ದಾಖಲಿಸುತ್ತೇನೆ: ಪ್ರಶಾಂತ್

  ಸಂಜನಾ ವಿರುದ್ಧ ಪ್ರಕರಣ ದಾಖಲಿಸುತ್ತೇನೆ: ಪ್ರಶಾಂತ್

  ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಶಾಂತ್ ಸಂಬರ್ಗಿ, 'ಸಂಜನಾ ನನ್ನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಹಾಗಾಗಿ ಆಕೆಯ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ' ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.

  ಡ್ರಗ್ಸ್ ಪ್ರಕರಣಕ್ಕೆ ಸಂಜನಾ ನಂಟಿದೆ ಎಂದಿದ್ದ ಪ್ರಶಾಂತ್

  ಡ್ರಗ್ಸ್ ಪ್ರಕರಣಕ್ಕೆ ಸಂಜನಾ ನಂಟಿದೆ ಎಂದಿದ್ದ ಪ್ರಶಾಂತ್

  ಡ್ರಗ್ಸ್ ಪ್ರಕರಣಕ್ಕೆ ಸಂಜನಾ ನಂಟಿದೆ ಎಂದು ಪ್ರಶಾಂತ್ ಸಂಬರ್ಗಿ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು. ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದ ಸಂಜನಾ, ಪ್ರಶಾಂತ್ ಸಂಬರ್ಗಿಯನ್ನು ನಾಯಿ, ಹಂದಿ ಎಂದೆಲ್ಲಾ ಸಂಭೋಧಿಸಿದ್ದರು. ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಸಹ ಹೇಳಿದ್ದಾಗಿ ಸ್ವತಃ ಪ್ರಶಾಂತ್ ಮಾಧ್ಯಮಗಳ ಬಳಿ ಹೇಳಿದ್ದಾರೆ.

  ಸಂಜನಾ ಗಲ್ರಾನಿ ಸಹ ಕೇಸು ದಾಖಲಿಸುವುದಾಗಿ ಹೇಳಿದ್ದರು

  ಸಂಜನಾ ಗಲ್ರಾನಿ ಸಹ ಕೇಸು ದಾಖಲಿಸುವುದಾಗಿ ಹೇಳಿದ್ದರು

  ನಟಿ ಸಂಜನಾ ಗಲ್ರಾನಿ ಸಹ, ಪ್ರಶಾಂತ್ ಸಂಬರ್ಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು. 'ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಪ್ರಶಾಂತ್ ಮಾಡುತ್ತಿದ್ದಾರೆ. ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ' ಎಂದಿದ್ದರು ಸಂಜನಾ.

  ಸಂಜನಾ ಮೊಬೈಲ್, ಕಂಪ್ಯೂಟರ್ ವಶ

  ಸಂಜನಾ ಮೊಬೈಲ್, ಕಂಪ್ಯೂಟರ್ ವಶ

  ಸಂಜನಾ ಮನೆಯ ಮೇಲೆ ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ, ತಪಾಸಣೆ ನಡೆಸಿದ್ದು, ಸಂಜನಾ ರ ಮೊಬೈಲ್, ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ವೀರೇನ್ ಖನ್ನಾ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  English summary
  Prashanth Sambargi said, I will put defamation lawsuit against Sanjjanaa Galrani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X