For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ 3-ಈಡಿಯೆಟ್ಸ್ ರೀಮೇಕ್! ಹೀರೋಗಳು ಯಾರಾಗಬಹುದು?

  |

  2009ರಲ್ಲಿ ಬಿಡುಗಡೆಯಾಗಿದ್ದ 3 ಈಡಿಯೆಟ್ಸ್ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಮೀರ್ ಖಾನ್, ಮಾಧವನ್, ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಬಿಟೌನ್ ಮಟ್ಟಿಗೆ ಈ ಸಿನಿಮಾ ಹೊಸ ಮೈಲಿಗಲ್ಲು ಹಾಗೂ ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ನಿರ್ಮಿಸಿತ್ತು.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಹಿಂದಿಯಲ್ಲಿ ಸೂಪರ್ ಹಿಟ್ ಆದ ಈ ಚಿತ್ರವನ್ನು ತಮಿಳಿನಲ್ಲಿ ದಳಪತಿ ವಿಜಯ್, ಜೀವ, ಶ್ರೀಕಾಂತ್ ರೀಮೇಕ್ ಮಾಡಿದ್ರು. ಅದೇ ಸಿನಿಮಾ ತೆಲುಗಿಗೆ ಡಬ್ ಆಯಿತು. ಕನ್ನಡದಲ್ಲೂ ಈ ಸಿನಿಮಾ ಬರಬೇಕು ಎಂಬ ಬೇಡಿಕೆ ಇದ್ದರೂ ಯಾರೂ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ..

  ತಮಿಳಿಗೆ ರಿಮೇಕ್ ಆಗುತ್ತಿದೆ 'ಆರ್ಟಿಕಲ್-15': ಆಯುಷ್ಮಾನ್ ಪಾತ್ರದಲ್ಲಿ ಉದಯನಿಧಿ ಸ್ಟಾಲಿನ್

  ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಇಂತಹದೊಂದು ಅಭಿಪ್ರಾಯ ಮತ್ತೆ ಹುಟ್ಟಿಕೊಂಡಿದೆ. 3 ಈಡಿಯೆಟ್ಸ್ ಕನ್ನಡಕ್ಕೆ ರೀಮೇಕ್ ಮಾಡಿದ್ರೆ ಯಾರು ನಟಿಸಬಹುದು ಎಂಬ ಪ್ರಶ್ನೆಯನ್ನು ಈಗ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಸೃಷ್ಟಿಸಿದ್ದಾರೆ. ಮುಂದೆ ಓದಿ...

  ರೀಮೇಕ್ ಮಾಡೋ ಆಲೋಚನೆನಾ?

  ರೀಮೇಕ್ ಮಾಡೋ ಆಲೋಚನೆನಾ?

  ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ''ಕನ್ನಡದಲ್ಲಿ 3 ಈಡಿಯೆಟ್ಸ್ ರೀಮೇಕ್ ಆದರೆ ಯಾರು ನಟಿಸಬಹುದು?'' ಎಂದು ಕನ್ನಡ ಪ್ರೇಕ್ಷಕರನ್ನು ಪ್ರಶ್ನಿಸಿದ್ದಾರೆ. ಇದ್ದಕ್ಕಿದ್ದಂತೆ 3 ಈಡಿಯೆಟ್ಸ್ ಸಿನಿಮಾದ ರೀಮೇಕ್ ಕುರಿತು ಆಲೋಚನೆ ಮುಂದಿಟ್ಟಿರುವುದನ್ನು ಗಮನಿಸಿದರೆ, ಕೆಆರ್‌ಜಿ ಸ್ಟುಡಿಯೋಸ್ ಪೋಸ್ಟ್ ರೀಮೇಕ್ ಮಾಡುವ ಆಸಕ್ತಿ ತೋರಿದ್ಯಾ ಅನುಮಾನಕ್ಕೆ ಕಾರಣವಾಗಿದೆ.

  ಗಣೇಶ್ ಮತ್ತು ತಂಡಕ್ಕೆ ಹೆಚ್ಚಿನ ಒಲವು

  ಗಣೇಶ್ ಮತ್ತು ತಂಡಕ್ಕೆ ಹೆಚ್ಚಿನ ಒಲವು

  3 ಈಡಿಯೆಟ್ಸ್ ಸಿನಿಮಾ ರೀಮೇಕ್ ಮಾಡಿದ್ರೆ ಅದರಲ್ಲಿ ಗಣೇಶ್ ಅವರನ್ನು ನೋಡಲು ಹೆಚ್ಚು ಜನರು ಆಸಕ್ತಿ ತೋರುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಜೊತೆಯಲ್ಲಿ ಗಾಳಿಪಟ ತಂಡವನ್ನು ನೋಡಲು ಬಯಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಜೊತೆ ರಾಜೇಶ್ ಕೃಷ್ಣನ್, ದಿಗಂತ್, ಅಶೋಕ್, ಅಜಯ್ ರಾವ್, ಸತೀಶ್ ನೀನಾಸಂ ಅವರ ಹೆಸರು ಸಹ ಚರ್ಚೆಯಾಗ್ತಿದೆ.

  'ಲವ್ ಮಾಕ್ಟೇಲ್' ರೀಮೇಕ್: ತೆಲುಗಿನಲ್ಲಿ ಸಿನಿಮಾದ ಹೆಸರು ಅಂತಿಮ

  ಹುಡುಗರು ಕಾಂಬಿನೇಷನ್!

  ಹುಡುಗರು ಕಾಂಬಿನೇಷನ್!

  ಅಮೀರ್ ಖಾನ್ ಪಾತ್ರಕ್ಕೆ ಪುನೀತ್ ರಾಜ್ ಕುಮಾರ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು, ಮಾಧವನ್ ಹಾಗೂ ರಾಜ್ ಪಾತ್ರಗಳಿಗೆ ಶ್ರೀನಗರ ಕಿಟ್ಟಿ, ಯೋಗೇಶ್, ಧನಂಜಯ್, ಪ್ರಜ್ವಲ್ ದೇವರಾಜ್, ಡಾರ್ಲಿಂಗ್ ಕೃಷ್ಣ ಹೆಸರು ಸಹ ಚರ್ಚೆಯಾಗ್ತಿದೆ.

  ನಮಗೆ ಅನಂತ್ ನಾಗ್ ಮಾಡಲಿ

  ನಮಗೆ ಅನಂತ್ ನಾಗ್ ಮಾಡಲಿ

  ಹೀರೋಗಳಾಗಿ ಯಾರು ಬೇಕಾದರೂ ಮಾಡಲಿ. ಆದರೆ 3 ಈಡಿಯೆಟ್ ಚಿತ್ರದಲ್ಲಿ ಬೊಮ್ಮನ್ ಇರಾನಿ ಪ್ರಮುಖ ಪಾತ್ರದಲ್ಲಿ ಮಾಡಿದ್ದಾರೆ. ಆ ಪಾತ್ರವನ್ನ ಕನ್ನಡದಲ್ಲಿ ಅನಂತ್ ನಾಗ್ ಅವರೇ ಮಾಡಲಿ ಎಂಬ ಅಭಿಪ್ರಾಯವೂ ಬರ್ತಿದೆ.

  ರೀಮೇಕ್ ಬೇಡ ಎನ್ನುವವರು ಇದ್ದಾರೆ

  ರೀಮೇಕ್ ಬೇಡ ಎನ್ನುವವರು ಇದ್ದಾರೆ

  ಇದೊಳ್ಳೆ ಕಥೆ ಆಯ್ತು. ಇಷ್ಟು ವರ್ಷದ ಆದ್ಮೇಲೆ ರೀಮೇಕ್ ಚರ್ಚೆ ಏಕೆ. ಈ ಸಿನಿಮಾವನ್ನು ಕನ್ನಡದಲ್ಲಿ ರೀಮೇಕ್ ಮಾಡುವುದು ಬೇಡ ಎಂಬ ಅಭಿಪ್ರಾಯವೂ ಟ್ವಿಟ್ಟರ್‌ನಲ್ಲಿ ಚರ್ಚೆಯಾಗ್ತಿದೆ. ಕೆಲವರು ರೀಮೇಕ್ ಏಕೆ ಡಬ್ಬಿಂಗ್ ಆಯ್ಕೆ ಇದೆ ಅಲ್ವಾ? ಎಂದು ಹೇಳುತ್ತಿದ್ದಾರೆ.

  English summary
  If 3 idiots Remade in Kannada Who will you cast in the lead role.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X