twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಓದಿದ ಶಾಲೆ ಯಾವುದು? ಮಗನಿಗೆ ದಾಸ ಹೇಳಿಕೊಡ್ತಿರೋ ಬದುಕಿನ ಪಾಠವೇನು?

    |

    ದರ್ಶನ್ ಮಾತಾಡಿದ್ರೆ, ಫಿಲ್ಟರ್ ಹಾಕೊಂಡು ಮಾತಾಡೋ ವ್ಯಕ್ತಿನೇ ಅಲ್ಲ. ಏನೇ ಮಾತಾಡಬೇಕು ಅಂದರೂ ನೇರವಾಗಿ ಕಡ್ಡಿ ಮುರಿದಂತೆ ಮಾತಾಡುತ್ತಾರೆ. ಇದನ್ನು ಹಲವು ಬಾರಿ ನೋಡಿರೋ ಉದಾಹರಣೆಗಳಿವೆ.

    ಈಗ ಸರ್ಕಾರಿ ಶಾಲೆ ಉಳಿಸುವ ಬಗ್ಗೆ ದರ್ಶನ್ 'ಕ್ರಾಂತಿ' ಮಾಡುವುದಕ್ಕೆ ಹೊರಟಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಕೆಲವು ಖಾಸಗಿ ಶಾಲೆಗಳ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ವಿದ್ಯಾಬ್ಯಾಸದ ವೇಳೆ ಫೀಸ್ ಎಷ್ಟಿತ್ತು? ಈಗ ತಮ್ಮ ಮಗ ಓದುತ್ತಿರೋ ಶಾಲೆ ಫೀಸ್ ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

    ಹಾಗೇ ಇನ್ನೊಂದು ಕಡೆ ತಮ್ಮ ಪುತ್ರ ವಿನೀಶ್‌ಗೆ ಶಾಲೆಯಲ್ಲಿ ಪಡೆಯುವ ಶಿಕ್ಷಣಕ್ಕಿಂತ ಬದುಕಿನ ಪಾಠವನ್ನು ಹೇಳಿಕೊಡುತ್ತಿದ್ದಾರಂತೆ. ಆ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿಲ್ಮೀ ಬೀಟ್ ಜೊತೆ ಮುಕ್ತವಾಗಿ ಮಾತಾಡಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ. ಮುಂದೆ ಓದಿ.

    'ನಾನು ಜೆಸ್ಟ್ ಪಾಸ್ ಅಷ್ಟೆ'

    'ನಾನು ಜೆಸ್ಟ್ ಪಾಸ್ ಅಷ್ಟೆ'

    "ನಾನು ಓದಿರೋದು ಬರೀ 10ನೇ ಕ್ಲಾಸು. ಅದೂ ಜೆಸ್ಟ್ ಪಾಸು. ನಾನು ತುಂಬಾ ಬುದ್ಧಿವಂತ ವಿದ್ಯಾರ್ಥಿಯೇನು ಅಲ್ಲ. ನಾನು ಬರೀ ಪಾಸು ಆಗಿದ್ದೇನೆ ಅಷ್ಟೇ. ನಾನು ಲಾಸ್ಟ್‌ ಬೆಂಚ್‌ಗಿಂತ ಇನ್ನೂ ಲಾಸ್ಟ್ ಬೆಂಚ್ ವಿದ್ಯಾರ್ಥಿ. ತರ್ಲೆ ಅಂತಲ್ಲ. ಓದುವುದಕ್ಕೆ ಅಷ್ಟೊಂದು ಆಸಕ್ತಿ ಇರಲಿಲ್ಲ ನನಗೆ. ಅದಕ್ಕೆ ಲಾಸ್ಟ್ ಬೆಂಚ್‌ಗಿಂತ ಲಾಸ್ಟ್ ಬೆಂಚ್‌ ವಿದ್ಯಾರ್ಥಿ ನಾನು. ನನ್ನ ತರನೇ ನನ್ನ ಮಗ ಕೂಡ. ನನಗಿಂತ ಸ್ವಲ್ಪ ಉತ್ತಮ. ನನಗಿಂತ ಒಂದು ಬೆಂಚ್ ಮುಂದೆ ಅಷ್ಟೆ." ಎಂದು ದರ್ಶನ್ ತಮ್ಮ ವಿದ್ಯಾಬ್ಯಾಸ ಬಗ್ಗೆ ರಿವೀಲ್ ಮಾಡಿದ್ದಾರೆ.

    ನಾನು ಓದುವಾದ ಸ್ಕೂಲ್ ಫೀಸ್ 50 ರೂ.

    ನಾನು ಓದುವಾದ ಸ್ಕೂಲ್ ಫೀಸ್ 50 ರೂ.

    "ನಾನು ಓದಿರೋದು ಬಹುತೇಕ ಸರ್ಕಾರಿ ಶಾಲೆನೇ. ನಾವು ಓದುವಾಗ ಇಡೀ ವರ್ಷದ ಫೀಸ್ 50 ರೂಪಾಯಿ. ವೈಶಾಲಿ ಸ್ಕೂಲ್ ಅಂತ. ಮೈಸೂರಿನ ಸಿದ್ಧಾರ್ಥ ಲೇ ಔಟ್‌ಗೆ ಹೋದರೆ ಈಗಲೂ ಹಾಗೇ ಇದೆ. ನಾನು ಓದಿದ್ದು ಖಾಸಗಿ ಶಾಲೆನೇ ಆದರೆ, ಅದು ಸರ್ಕಾರಿ ಶಾಲೆ ಇದ್ದ ಹಾಗೇ ಇತ್ತು. ಇವತ್ತು ಖಾಸಗಿ ಶಾಲೆಗಳನ್ನು ನೋಡಿದ್ದೀರಾ? ಯಾವ ಫೈವ್‌ಸ್ಟಾರ್ ಹೊಟೇಲ್‌ಗಿಂತ ಕಮ್ಮಿಯಿಲ್ಲ." ಎಂದು ಖಾಸಗಿ ಶಾಲೆಗಳ ಬಗ್ಗೆ ಮಾತಾಡಿದ್ದಾರೆ.

    ಇನ್ನೊಬ್ಬರ ಹತ್ತಿರ ಕೈ ಚಾಚಬೇಡ ಅಂದಿದ್ದೇನೆ'

    ಇನ್ನೊಬ್ಬರ ಹತ್ತಿರ ಕೈ ಚಾಚಬೇಡ ಅಂದಿದ್ದೇನೆ'

    "ಮಕ್ಕಳಿಗೆ ನಾವು ಕಲಿಸುವುದು ಅಷ್ಟೇ. ಮನೆಯವರಿಗೆ ದೊಡ್ಡ ಶಾಲೆಯಲ್ಲಿ ಓದಿಸಬೇಕು ಅನ್ನೋ ಆಸೆಯಿರುತ್ತೆ. ನನ್ನ ಮಗನಿಗೆ ನಿನಗೆ ಎಷ್ಟು ಆಗುತ್ತೆ ಅಷ್ಟು ಓದು ಅಂತ ಹೇಳಿದ್ದೇನೆ. ಆದರೆ, ನಾನು ಬದುಕುವ ಜೀವನ ಹೇಳಿಕೊಡುತ್ತೇನೆ ಎಂದಿದ್ದೇನೆ. ಇನ್ನೊಬ್ಬರ ಹತ್ತಿರ ಕೈ ಚಾಚುವುದಕ್ಕೆ ಹೋಗಬೇಡ. ಒಂದಿಷ್ಟು ಜನರಿಗೆ ಕೊಡುವ ಹಾಗೆ ಆಗು ಅಂತ ಹೇಳಿದ್ದೇನೆ. ನಾನು ಏನು ಹೇಳುತ್ತೇನೋ ಆ ಕೆಲಸ ಮಾಡು. ಇವತ್ತೂ ಅವನು ನನಗೆ ಏನಾದರೂ ಬೇಕು ಅಂತ ಕೇಳಿದ್ರೆ, ಕೆಲಸ ಮಾಡಿಸುತ್ತೇನೆ. ಅವನಿಗೆ ಕೆಲಸ ಮಾಡಿದ್ರೆ, ದುಡ್ಡು ಸಿಗುತ್ತೆ ಅನ್ನೋ ಪಾಠವನ್ನು ಹೇಳಿಕೊಡುತ್ತಿದ್ದೇನೆ." ಎಂದು ಮಗನಿಗೆ ಹೇಳಿಕೊಟ್ಟ ಪಾಠದ ಬಗ್ಗೆ ಮಾತಾಡಿದ್ದಾರೆ.

    'ನನಗೆ ಆಗಲೇ ಪಿತ್ತಾ ನೆತ್ತಿಗೆ ಏರಿತ್ತು'

    'ನನಗೆ ಆಗಲೇ ಪಿತ್ತಾ ನೆತ್ತಿಗೆ ಏರಿತ್ತು'

    " ಒಂದು ಬಾರಿ ಪೇರೆಂಟ್ಸ್ ಮೀಟಿಂಗ್‌ಗೆ ಹೋಗಿದ್ದೆ. ನನ್ನ ಹೆಂಡ್ತಿಗೆ ನಿಮ್ಮ ಹಸ್ಬೆಂಡ್ ಅನ್ನೂ ಕರೆದುಕೊಂಡು ಬರಬೇಕು ಅಂತ ಹೇಳಿದ್ರು. ನಾನು ಎಲ್ಲೋ ಶೂಟಿಂಗ್‌ನಲ್ಲಿ ಇದ್ದೆ. ಅವನು ಮನೆಗೆ ಬಂದು ಅತ್ತುಕೊಂಡು ನೀನು ಬರಬೇಕಂತೆ ಅಂದ. ಸರಿ ನಡೆಯಪ್ಪ ಬರ್ತೀನಿ ಅಂತ ಹೋದೆ. ನೀವೇನು ಮಾಡುತ್ತಿದ್ದೀರಾ ಅಂತ ಕೇಳಿದ್ರು. ನಾನು ಆರ್ಟಿಸ್ಟ್ ಅಂತ ಹೇಳಿದೆ. ಎಷ್ಟೊತ್ತು ಟೈಮ್ ಕೊಡ್ತೀರಾ? ಅಂತ ಕೇಳಿದ್ರು. ಸಂಜೆ ಆರು ಗಂಟೆಗೆ ಬರುತ್ತೇನೆ. ಎರಡು ಗಂಟೆ ಅವನೊಂದಿಗೆ ಕೂತು ಮಾತಾಡುತ್ತೇನೆ ಅಂದೆ. ಇಲ್ಲಾ ನೀವು ಮಗನಿಗೆ ತುಂಬಾ ಟೈಮ್ ಕೊಡಬೇಕು ಅಂದ್ರು. ಆಗಲೇ ನನಗೆ ಪಿತ್ತಾ ಕೆದರಿತ್ತು. ಒಂದು ಆರು ಗಂಟೆನಾದೂ ಕೊಡಿ ಅಂದರು. ಆರು ಗಂಟೆ ಇವನಿಗೆ ಟೈಮ್ ಕೊಟ್ರೆ, ತಿಂಗಳಿಗೆ ಲಕ್ಷ ಲಕ್ಷ ಕಟ್ತೀನಿಲ್ಲ ಅದು ನಾನು ಕೂಲಿಗೆ ಹೋದ್ರೆ ಬರೋದು ಅಂದೆ. ಅದಕ್ಕೆ ನೀವು ಅವನ ತಂದೆ ಟೈಮ್ ಕೊಡಬೇಕು ಅಂದ್ರು. ಹಾಗಿದ್ರೆ, ನೀವು ಯಾರದ್ದೋ ತಂದೆ ಮಿಲಿಟರಿಯಲ್ಲಿರುತ್ತಾರೆ. ಅಂತಹವ್ರಿಗೆ ಸ್ಕೂಲ್‌ನಲ್ಲಿ ಸೀಟ್ ಕೊಡಲ್ವಾ ಅಂದೆ. ಅದು ಒಬ್ಬ ರಾಜಕೀಯ ವ್ಯಕ್ತಿಯ ಶಾಲೆನೇ." ಎಂದು ದರ್ಶನ್ ಖಾಸಗಿ ಶಾಲೆಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

    English summary
    If you work, you will get money Darshan Teaching life lessons to His Son Vineesh, Know More.
    Sunday, November 20, 2022, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X